AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ

ಋತುಚಕ್ರದಂತೆ ಋತುಬಂಧವು ಮಹಿಳೆಯರಲ್ಲಿ ಆಗುವ ಸಾಮಾನ್ಯ ಪ್ರಕ್ರಿಯೆಗಳಲ್ಲಿ ಒಂದು. ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯಿಂದ ಮಹಿಳೆಯೂ ಈ ವೇಳೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾಳೆ. ಈ ಋತುಬಂಧದ ಹಾರ್ಮೋನುಗಳು ನಿಮ್ಮ ಕೂದಲು ಕಿರುಚೀಲಗಳ ಮೇಲೆ ಪರಿಣಾಮ ಬೀರುತ್ತವೆ, ಹೀಗಾಗಿ ಈ ಸಮಯದಲ್ಲಿ ಹೇರಳವಾಗಿ ಕೂದಲು ಉದುರುತ್ತದೆ. ಈ ಕೆಲವು ಸಲಹೆಗಳಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ
ಋತುಬಂಧದ ವೇಳೆ ಕೂದಲು ಉದುರುವಿಕೆImage Credit source: Pinterest
ಸಾಯಿನಂದಾ
|

Updated on: Aug 10, 2025 | 5:31 PM

Share

ಋತುಬಂಧ ಅಥವಾ ಮೆನೋಪಾಸ್ (Menopause) ಇದು ಮುಟ್ಟುವ ನಿಲ್ಲುವ ಪ್ರಕ್ರಿಯೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ 45 ರಿಂದ 55 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ. ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಸುಸ್ತು, ಕೂದಲು ಉದುರುವುದು, ಮುಟ್ಟಾದಾಗ ವಿಪರೀತ ರಕ್ತಸ್ರಾವ, ಪ್ರತಿ ತಿಂಗಳು ಮುಟ್ಟಾಗದಿರುವುದು, ಮಾನಸಿಕ ಕಿರಿಕಿರಿ ಹಾಗೂ ಮೂಡ್ ಸ್ವಿಂಗ್ ನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಮಹಿಳೆಯರು ಕೂದಲು ಉದುರುವ (Hair fall) ಸಮಸ್ಯೆಯನ್ನು ಎದುರಿಸುತ್ತಾರೆ. ಹಾರ್ಮೋನ್ ಬದಲಾವಣೆಯಿಂದ ಇದು ಸಹಜವಾಗಿದ್ರು ಮಹಿಳೆಯರು ಆತಂಕಕ್ಕೆ ಒಳಗಾಗುತ್ತದೆ. ಋತುಬಂಧದ ಸಮಯದಲ್ಲಿ ಕೂದಲು ಉದುರುವುದನ್ನು ತಡೆಯುವುದು ಹೇಗೆ? ಈ ರೀತಿ ಪ್ರಶ್ನೆಗಳು ಮೂಡಬಹುದು. ಇದಕ್ಕೆ ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಸ್ವಲ್ಪ ಮಟ್ಟಿಗೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಋತುಬಂಧದ ವೇಳೆ ಕೂದಲು ಉದುರುವುದು ಯಾಕೆ?

ಋತುಬಂಧದ ಸಮಯದಲ್ಲಿ ಅತಿಯಾಗಿ ಕೂದಲು ಉದುರುವುದು ಯಾಕೆ ಎನ್ನುವ ಪ್ರಶ್ನೆ ಕಾಡಬಹುದು. ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾದಾಗ ಇದು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೇಶರಾಶಿಯ ಬೆಳೆವಣಿಗೆ ಕುಂಠಿತವಾಗುತ್ತದೆ, ಕೂದಲು ಉದುರುವುದು, ತೆಳುವಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸುತ್ತದೆ.

ಇದನ್ನೂ ಓದಿ
Image
ಹೆಲ್ತ್ ಸಪ್ಲಿಮೆಂಟ್ ಮಲ್ಟಿ-ಡಿಸ್ಕ್ ವೈಫಲ್ಯಕ್ಕೆ ಕಾರಣವಾದೀತು ಎಚ್ಚರ!
Image
ದೇಹದಲ್ಲಿ ಈ ಬದಲಾವಣೆಗಳು ಕಾಣಿಸಿಕೊಂಡರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು
Image
ಗ್ಯಾಸ್ಟ್ರಿಕ್, ಆ್ಯಸಿಡಿಟಿ, ಮಲಬದ್ಧತೆ ಸಮಸ್ಯೆಗಳಿಗೆ ಮನೆ ಮದ್ದು
Image
ಮುಟ್ಟು ನಿಲ್ಲುವುದಕ್ಕೂ ಹೃದಯ ಸಂಬಂಧಿ ಕಾಯಿಲೆಗಳು ಬರುವುದಕ್ಕೂ ಸಂಬಂಧವಿದೆಯೇ

ಕೂದಲಿನ ಉದುರುವಿಕೆ ತಡೆಯಲು ಇಲ್ಲಿದೆ ಸಿಂಪಲ್ ವಿಧಾನ

  •  ಕೂದಲು ಉದುರುತ್ತಿದ್ದರೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವುದು ಮುಖ್ಯ. ಚರ್ಮದ ಸ್ಥಿತಿಸ್ಥಾಪಕತ್ವ, ಕೂದಲಿನ ಬೆಳವಣಿಗೆ ಹಾಗೂ ಜಲಸಂಚಯನವನ್ನು ಹೆಚ್ಚಿಸಬಹುದು. ಇದರಿಂದ ಅತಿಯಾದ ಕೂದಲು ಉದುರುವಿಕೆಯನ್ನು ತಪ್ಪಿಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  •  ಒಮೆಗಾ-3 ಕೊಬ್ಬಿನಾಮ್ಲಗಳ ಪೂರಿತ ಆಹಾರ ಸೇವನೆಯೂ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ನೆತ್ತಿ ಮತ್ತು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಾಂಸಹಾರಿಗಳಾಗಿದ್ದರೆ ಮೀನನ್ನು ಹೆಚ್ಚು ಸೇವಿಸುವುದು ಉತ್ತಮ.

ಇದನ್ನೂ ಓದಿ: ಮಹಿಳೆಯರೇ.. ಮುಟ್ಟು ನಿಂತ ಮೇಲೆ ಹೃದಯದ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡಿ! ಯಾಕೆ ಗೊತ್ತಾ?

  • ವಿಟಮಿನ್ ಬಿ7 ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ಬಯೋಟಿನ್ ಎಂದು ಕರೆಯುತ್ತಾರೆ. ಈ ವಿಟಮಿನ್ ಬಿ7 ಕೆರಾಟಿನ್ ಉತ್ಪಾದನೆಯನ್ನು ಉತ್ತೇಜಿಸಿ, ಕೂದಲಿನ ಹೊಳಪು ಹೆಚ್ಚಿಸಿ ಬೆಳೆವಣಿಗೆಯನ್ನು ಉತ್ತೇಜಿಸುತ್ತದೆ. ಬಯೋಟಿನ್ ಹೊಂದಿರುವ ಆಹಾರವನ್ನು ಸೇವಿಸಬಹುದು.

ಸೂಚನೆ: ಈ ಮೇಲಿನ ಸಲಹೆಗಳನ್ನು ಪಾಲಿಸುವ ಮುನ್ನ ಸೂಕ್ತ ವೈದ್ಯರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ