AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರೇ.. ಮುಟ್ಟು ನಿಂತ ಮೇಲೆ ಹೃದಯದ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡಿ! ಯಾಕೆ ಗೊತ್ತಾ?

ಮಹಿಳೆಯರ ಆರೋಗ್ಯ: ಮಹಿಳೆಯರಲ್ಲಿ ಹೆಚ್ಚಾಗಿ 50ರ ನಂತರ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಈ ಸಮಯದಲ್ಲಿ, ಋತುಬಂಧ ಅಥವಾ ಮೆನೋಪಾಸ್ ಸಂಭವಿಸುತ್ತದೆ, ಅಂದರೆ ಋತುಚಕ್ರ ನಿಲ್ಲುತ್ತದೆ. ಹಾಗಾದ್ರೆ ಋತುಬಂಧ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವೆ ಸಂಬಂಧ ಇದೆಯೇ? 45ರ ನಂತರ ಮಹಿಳೆಯರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಬೇಕು? ಆಹಾರಕ್ರಮ ಹೇಗಿರಬೇಕು? ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು, ಯಾವುದು ಒಳ್ಳೆಯದಲ್ಲ ಎಂಬುದರ ಬಗ್ಗೆ ವಿವರವಾಗಿ ಇಲ್ಲಿ ತಿಳಿದುಕೊಳ್ಳಿ.

ಮಹಿಳೆಯರೇ.. ಮುಟ್ಟು ನಿಂತ ಮೇಲೆ ಹೃದಯದ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡಿ! ಯಾಕೆ ಗೊತ್ತಾ?
ಮೆನೋಪಾಸ್
ಪ್ರೀತಿ ಭಟ್​, ಗುಣವಂತೆ
|

Updated on:Jun 21, 2025 | 3:35 PM

Share

ವಯಸ್ಸು ಹೆಚ್ಚಾದಂತೆ ನಾನಾ ರೀತಿಯ ಕಾಯಿಲೆಗಳು ಬರುವುದು ಸಾಮಾನ್ಯ. ಅದರಲ್ಲಿಯೂ ಮಹಿಳೆಯರಲ್ಲಿ ಮುಟ್ಟು ಅಥವಾ ಋತುಚಕ್ರ(Menstrual cycle) ನಂತರ, ರೋಗಗಳು ಬರುವ ಸಂಭವ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಒಂದು ವಯಸ್ಸಿನ ನಂತರ ಮುಟ್ಟಾಗುವುದಿಲ್ಲ. ಇದನ್ನು ಋತುಬಂಧ (Menopause) ಅಥವಾ ಮೆನೋಪಾಸ್ ಎನ್ನಲಾಗುತ್ತದೆ. ಇದು ಮಹಿಳೆಯರ ಋತುಚಕ್ರದ ಅಂತ್ಯ ಅಥವಾ ನಿಲ್ಲುವ ಸೂಚನೆಯಾಗಿರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರ ದೇಹದ ಹಾರ್ಮೋನುಗಳಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇದು ಸಹಜ ಪ್ರಕ್ರಿಯೆಯಾದರೂ ಕೂಡ ನಾವು ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಇಂತಹ ಸಮಯದಲ್ಲಿಯೇ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ (Heart disease) ಅಪಾಯವನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲ. ಋತುಚಕ್ರದ ನಿಂತ ನಂತರ, ಮಹಿಳೆಯರಲ್ಲಿ ಹೃದಯಾಘಾತದ ಪ್ರಕರಣಗಳು ಕಂಡು ಬರುತ್ತಿರುವುದು ಹೆಚ್ಚಾಗಿದೆ. ಹಾಗಾದರೆ 45ರ ನಂತರ ಮಹಿಳೆಯರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಬೇಕು? ಆಹಾರಕ್ರಮ ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ 50ರ ನಂತರ ಮಹಿಳೆಯರಲ್ಲಿ ಋತುಬಂಧ ಅಥವಾ ಮೆನೋಪಾಸ್ ಕಂಡುಬರುತ್ತದೆ. ಕೆಲವರಲ್ಲಿ 45ರ ನಂತರ ಕಂಡು ಬರಬಹುದು. ಇದು ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಋತುಬಂಧದ ನಂತರ, ಮಹಿಳೆಯರಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದು ದೇಹದಲ್ಲಿ ವಿವಿಧ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಪ್ರಕರಣಗಳು ಹೆಚ್ಚಾಗಬಹುದು. ಮುಟ್ಟಿನ ಸಮಯಕ್ಕೆ ಹೋಲಿಸಿದರೆ ಹೃದ್ರೋಗದ ಅಪಾಯ ಈ ಮೆನೋಪಾಸ್ ಸಮಯದಲ್ಲಿ ಹೆಚ್ಚಾಗಿರುತ್ತದೆ. ಇದು ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಏಕೆಂದರೆ ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗುತ್ತೆ ಇದು ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ, ಅನಾರೋಗ್ಯಕರ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತದೆ. ಈ ಎಲ್ಲಾ ಅಂಶಗಳು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ಯಾವ ರೀತಿಯ ಆಹಾರ ತಿನ್ನಬೇಕು, ತಿನ್ನಬಾರದು?

  • ಈ ಸಮಯದಲ್ಲಿ ಮಹಿಳೆಯರು ಆದಷ್ಟು ಧಾನ್ಯ, ಹಣ್ಣು, ತರಕಾರಿ, ಕಡಿಮೆ ಕೊಬ್ಬಿನಾಂಶವಿರುವ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕವೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಸಾಲ್ಮನ್, ಅಗಸೆಬೀಜ ಮತ್ತು ವಾಲ್ನಟ್ ಗಳಂತಹ ಒಮೆಗಾ-3 ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡಿ. ಇವು ದೇಹದಲ್ಲಿ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತದ ಹರಿವಿಗೆ ನೆರವಾಗುತ್ತದೆ. ಇದರಿಂದ ಹೃದಯ ಆರೋಗ್ಯವಾಗಿ ಇರುತ್ತದೆ.
  • ಆದಷ್ಟು ಸಂಸ್ಕರಿಸಿದ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸದಿರುವುದು ಬಹಳ ಒಳಿತು.

ಇದನ್ನೂ ಓದಿ: ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?

ಇದನ್ನೂ ಓದಿ
Image
ಬಿ12 ಅಂಶ ಕಡಿಮೆ ಆಗಿದ್ಯಾ? ಈ ಒಂದು ಹಣ್ಣನ್ನು ಸೇವನೆ ಮಾಡಿ
Image
ಈ ಆಹಾರ ಹೃದಯಕ್ಕೆ ಒಳ್ಳೆಯದಲ್ಲ ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ
Image
ನಗುವಾಗ ಡಿಂಪಲ್ ಬೀಳೋದು ಅದೃಷ್ಟ ಅಲ್ಲ, ಇದಕ್ಕೆ ಈ ಆರೋಗ್ಯ ಸಮಸ್ಯೆಯೇ ಕಾರಣ
Image
ರಾತ್ರಿ ಪದೇ ಪದೇ ಎಚ್ಚರವಾಗುತ್ತಾ? ಈ ರೀತಿ ಆಗುವುದಕ್ಕೆ ಇದೇ ಕಾರಣ

ಋತುಬಂಧ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಈ ಸಮಯದಲ್ಲಿ ಆರೋಗ್ಯವಾಗಿರಲು ಒಳ್ಳೆ ನಿದ್ರೆ ಮಾಡಬೇಕು. ಒತ್ತಡ, ಆತಂಕವನ್ನು ನಿವಾರಿಸಿಕೊಳ್ಳಲು ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಮಾಡಬೇಕು. ಇದರಿಂದ ಮನಸ್ಸು ಶಾಂತವಾಗಿರುತ್ತದೆ. ಅದರ ಜೊತೆಗೆ ನಿಮ್ಮಿಷ್ಟದ ಹವ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಮಾನಸಿಕವಾಗಿ ಸದೃಢವಾಗಿರುವುದರತ್ತ ಗಮನಹರಿಸಿ. ಸಾಧ್ಯವಾದರೆ ವ್ಯಾಯಾಮ, ವಾಕಿಂಗ್, ನೃತ್ಯ ಹೀಗೆ ದೈಹಿಕವಾಗಿ ಸಕ್ರಿಯವಾಗಿರಿ. ವಯಸ್ಸಾದಂತೆ ಕಡಿಮೆಯಾಗುವ ಸ್ನಾಯುವಿನ ಬಲ ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಇವೆಲ್ಲಾ ಅಗತ್ಯವಾಗಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Sat, 21 June 25

‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಬಾಬು ಪ್ಯಾಲೇಸ್ ಹೇಗಿದೆ ನೋಡಿ
ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಬಾಬು ಪ್ಯಾಲೇಸ್ ಹೇಗಿದೆ ನೋಡಿ
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ