Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್​ಗಳು ನಿಮಗಾಗಿ

| Updated By: shruti hegde

Updated on: Sep 24, 2021 | 1:57 PM

ಧೂಳಿನ ಕಣಗಳು, ಅಥವಾ ಬೆವರು ಕೂಡಾ ಮುಖದಲ್ಲಿ ಏಳುವ ಮೊಡವೆಗಳಿಗೆ ಕಾರಣವಾಗಿರುವುದರಿಂದ ಹೊರಗಡೆ ಸುತ್ತಾಡಿಕೊಂಡು ಬಂದ ತಕ್ಷಣ ಮುಖವನ್ನು ಸ್ವಚ್ಛವಾಗಿಡುವ ಕುರಿತಾಗಿ ನೆನಪಿರಲಿ.

Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್​ಗಳು ನಿಮಗಾಗಿ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಯುವತಿಯರಿಗೆ ಮೊಡವೆ ನೆಮ್ಮದಿ ಕೆಡಿಸುವ ಒಂದು ಸಮಸ್ಯೆ. ಸೌಂದರ್ಯಕ್ಕಾಗಿ ಯುವತಿಯರು ಎಷ್ಟೆಲ್ಲಾ ಖರ್ಚು ಮಾಡುತ್ತಾರೆ, ಜತೆಗೆ ಮುಖದ ಸೌಂದರ್ಯ ಹೆಚ್ಚಿಸುವ ಯಾವುದೇ ವಿಷಯಗಳನ್ನೂ ಸಹ ಅವರು ನಿರ್ಲಕ್ಷ್ಯಿಸುವುದಿಲ್ಲ. ಆದರೂ ಸಹ ಮುಖದ ಮೇಲೆ ಏಳುತ್ತಿರುವ ಈ ಮೊಡವೆಗಳ ರಾಶಿ ಅವರ ಚಿಂತೆಗೆ ಕಾರಣವಾಗಿದೆ. ಮೊಡವೆಯನ್ನು ಸಂಪೂರ್ಣವಾಗಿ ನಿವಾರಿಸಲು ನಿಮಗಾಗಿ ಕೆಲವೊಂದಿಷ್ಟು ಟಿಪ್ಸ್​ಗಳು ಇಲ್ಲಿವೆ. ಈ ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ನಿಮ್ಮ ಮುಖದ ಕಾಂತಿ ಜತೆಗೆ ಅಂದವನ್ನು ಕಿತ್ತುಕೊಳ್ಳುತ್ತಿರುವ ಮೊಡವೆ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದಾಗಿದೆ.

ನಿಮ್ಮ ಮುಖದಲ್ಲಿನ ಮೊಡವೆಗಳನ್ನು ತೆಗೆದುಹಾಕಲು ಮುಖವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಧೂಳಿನ ಕಣಗಳು, ಅಥವಾ ಬೆವರು ಕೂಡಾ ಮುಖದಲ್ಲಿ ಏಳುವ ಮೊಡವೆಗಳಿಗೆ ಕಾರಣವಾಗಿರುವುದರಿಂದ ಹೊರಗಡೆ ಸುತ್ತಾಡಿಕೊಂಡು ಬಂದ ತಕ್ಷಣ ಮುಖವನ್ನು ಸ್ವಚ್ಛವಾಗಿಡುವ ಕುರಿತಾಗಿ ನೆನಪಿರಲಿ. ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರವಾದ ಚರ್ಮವನ್ನು ಹೊಂದಲು ಈ ಕೆಲವು ಸಲಹೆಗಳು ನಿಮಗಾಗಿ. ಸುಲಭದ ಈ ಕೆಲವು ವಿಧಾನಗಳು ನೀವು ಕಾಂತಿಯುಕ್ತ ಮುಖದ ಚರ್ಮವನ್ನು ಹೊಂದಲು ಸಹಾಯಕವಾಗುತ್ತವೆ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ತುಂಬಿದ್ದು, ಇದು ಮೊಡವೆಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ವಿಟಮಿನ್ ಕೆ ಮತ್ತು ಇ ಯಿಂದ ತುಂಬಿದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆರೋಗ್ಯಕರ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಂದು ಚಮಚ ಶುದ್ಧ ನೈಸರ್ಗಿಕ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಮುಖಕ್ಕೆ ನಿಧಾನವಾಗಿ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ. ವಾರಕ್ಕೆ ಮೂರರಿಂದ ನಾಲ್ಕು ಬಾರಿಯಾದರೂ ಈ ವಿಧಾನವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಕಿತ್ತಳೆ ಸಿಪ್ಪೆ
ಕಿತ್ತಳೆ ಬಣ್ಣದಲ್ಲಿರುವ ಸಿಟ್ರಸ್ ಆಮ್ಲವು ಮೊಡವೆ ಮತ್ತು ಮೊಡವೆ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. 1 ಚಮಚ ಕಿತ್ತಳೆ ಸಿಪ್ಪೆಯ ಪುಡಿ, 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಅದನ್ನು ಮೃದುವಾಗಿ ಮುಖಕ್ಕೆ ಹಚ್ಚಿ. 10 ರಿಂದ 15 ನಿಮಿಷಗಳ ಬಳಿಕ ಮುಖ ತೊಳೆದುಕೊಳ್ಳಬಹುದು. ಈ ರೀತಿಯಾಗಿ ಮಾಡುವುದರಿಂದ ಮುಖದ ಮೊಡವೆಗಳ ಸಮಸ್ಯೆ ಪರಿಹಾರವಾಗುತ್ತವೆ.

ಲೋಳೆರಸ
ನೈಸರ್ಗಿಕವಾಗಿ ಸಿಗುವ ಅಲೊವೆರಾ ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಅಲೊವೆರಾದಿಂದ ಜೆಲ್ಅನ್ನು ತೆಗೆದು ಅದನ್ನು ಮುಖಕ್ಕೆ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಮುಖ ತೊಳೆದು ಅಲೊವೆರಾ ಜೆಲ್ಅನ್ನು ಹಚ್ಚಿಕೊಂಡು ಮಲಗಿ, ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆಯಬಹುದು.

ಇದನ್ನೂ ಓದಿ:

Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!

Health Tips: ನೀವು ಆರೋಗ್ಯವಾಗಿರಲು ಈ ಒಳ್ಳೆಯ ಅಭ್ಯಾಸಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಿ

(Pimples cure home remedies for beautiful face)