ಬೆಳಿಗ್ಗೆ ಸ್ನಾನ ಮಾಡುವ ಅಭ್ಯಾಸ ಇದೆಯೇ? ಸರಿಯಾದ ಕ್ರಮದ ಬಗ್ಗೆ ಗಮನಹರಿಸಿ

ಹಗಲಿನಲ್ಲಿ ಯಾವುದೇ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಷ್ಟೊಂದು ಪ್ರಯೋಜನಕಾರಿಯಲ್ಲ. ಹೀಗಾಗಿ ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಉಪಯುಕ್ತಕಾರಿಯಾಗಿರುತ್ತದೆ.

ಬೆಳಿಗ್ಗೆ ಸ್ನಾನ ಮಾಡುವ ಅಭ್ಯಾಸ ಇದೆಯೇ? ಸರಿಯಾದ ಕ್ರಮದ ಬಗ್ಗೆ ಗಮನಹರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 25, 2021 | 7:40 AM

ಸ್ನಾನವು ನಮ್ಮ ದಿನಚರಿಯ ಒಂದು ಪ್ರಮುಖ ಭಾಗವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಸ್ನಾನದ ಪ್ರಯೋಜನಗಳು ಏನೆಂದು ನಿಮಗೆ ತಿಳಿದಿದೆ. ಆದರೆ ಸ್ನಾನದ (Bath) ಜೊತೆಗೆ, ಯಾವ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಸೂಕ್ತವೆಂಬುದು ಕೂಡ ಮುಖ್ಯ. ಹಗಲಿನಲ್ಲಿ ಯಾವುದೇ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಷ್ಟೊಂದು ಪ್ರಯೋಜನಕಾರಿಯಲ್ಲ. ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಉಪಯುಕ್ತಕಾರಿಯಾಗಿರುತ್ತದೆ. ಹಾಗಿದ್ದರೆ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾವ ಸಮಯದಲ್ಲಿ ಸ್ನಾನ ಮಾಡಬೇಕು? ಇದನ್ನು ಓದಿದರೆ ನಿಮಗೆ ವಿಚಿತ್ರವೆನಿಸಬಹುದು, ಆದರೆ ಸಂಜೆಯ ಸ್ನಾನವು ಬೆಳಿಗ್ಗೆಗಿಂತ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂಬುದು ನಿಜ. ಅನೇಕ ವರದಿಗಳ ಪ್ರಕಾರ, ರಾತ್ರಿಯಲ್ಲಿ ಸ್ನಾನ ಮಾಡುವುದು ಸರಿಯಾದ ಆಯ್ಕೆಯಾಗಿದೆ. ವಾಸ್ತವವಾಗಿ, ರಾತ್ರಿಯಲ್ಲಿ ಸ್ನಾನ ಮಾಡುವುದು  ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ, ಬೇಸಿಗೆಯಲ್ಲಿ ಅಥವಾ ಮಳೆಗಾಲದಲ್ಲಿ ಇದನ್ನು ಮಾಡುವುದು ತುಂಬಾ ಉಪಯುಕ್ತವಾಗಿದೆ.

ವಾಸ್ತವವಾಗಿ, ದೀರ್ಘಕಾಲದವರೆಗೆ ಹೊರಗೆ ಇರುವುದರಿಂದ, ಬಹಳಷ್ಟು ಮಣ್ಣು, ಬೆವರು ಇತ್ಯಾದಿಗಳು  ಚರ್ಮದ ಮೇಲೆ ದಿನವಿಡೀ ಅಂಟಿಕೊಳ್ಳುತ್ತವೆ. ಇವುಗಳಿಂದ ಉಂಟಾಗುವ ರೋಗಗಳನ್ನು ತಪ್ಪಿಸಲು ಸಂಜೆ ಸ್ನಾನ ಮಾಡುವುದು ಉತ್ತಮ ಅಭ್ಯಾಸವಾಗಿದೆ. ಆದ್ದರಿಂದ ಮಲಗುವ ಮುನ್ನ ನಿಮ್ಮ ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಆದರೆ, ಇದರ ಅರ್ಥ ಬೆಳಿಗ್ಗೆ ಸ್ನಾನ ಮಾಡುವುದು ತಪ್ಪು ಎಂದು ಅಲ್ಲ. ಬದಲಾಗಿ ಸಂಜೆ ಸ್ನಾನ ಮಾಡುವುದು ಉತ್ತಮ.

ಸಂಜೆ ಸ್ನಾನ ಮಾಡುವುದರ ಪ್ರಯೋಜನಗಳೇನು? ಸಂಜೆ ಸ್ನಾನ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ವಾಸ್ತವವಾಗಿ, ರಾತ್ರಿಯಲ್ಲಿ ಸ್ನಾನ ಮಾಡುವುದರಿಂದ ರಕ್ತದೊತ್ತಡವನ್ನು ಸರಿಯಾಗಿ ಇರಿಸುತ್ತದೆ. ಏಕೆಂದರೆ ಶಾಖದಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಇದರೊಂದಿಗೆ, ಇದು ಗಾಢ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಒತ್ತಡದಿಂದ ನಮ್ಮನ್ನು ದೂರವಿರಿಸುತ್ತದೆ. ರಾತ್ರಿ ಸ್ನಾನ ಮಾಡುವುದರಿಂದ ಮನಸ್ಸು, ಚರ್ಮ  ಆರೋಗ್ಯವಾಗಿರುತ್ತದೆ. ಹೀಗಾಗಿ ರಾತ್ರಿಯಲ್ಲಿ ಸ್ನಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಯಾವ ಸಮಯದಲ್ಲಿ ಸ್ನಾನ ಮಾಡಬಾರದು? ಆಯುರ್ವೇದದ ಪ್ರಕಾರ ಸ್ನಾನಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳಿವೆ. ಊಟ ಮಾಡಿದ ತಕ್ಷಣ ಸ್ನಾನಕ್ಕೆ ಹೋಗಬಾರದು. ಇದು ಉತ್ತಮ ಅಭ್ಯಾಸ ಅಲ್ಲ.  ಆಯುರ್ವೇದದ ಪ್ರಕಾರ ಆಹಾರ ಸೇವಿಸಿದ ನಂತರ ಸ್ವಲ್ಪ ಹೊತ್ತು (1 ರಿಂದ 2 ಗಂಟೆ) ಸ್ನಾನ ಮಾಡಬಾರದು.  ಮಲಗಲು ಹೋಗುವ ಮೊದಲು  ಸ್ನಾನ ಮಾಡುವ ಅಭ್ಯಾಸ ಇದ್ದರೆ ಅದನ್ನು ತಪ್ಪಿಸಿ.  ದೀರ್ಘ ಸಮಯದವರೆಗೆ ಸ್ನಾನ ಮಾಡುವ ಅಭ್ಯಾಸವಿದ್ದರೆ ನೀವು ಹಗಲಲ್ಲು ಸ್ನಾನ ಮಾಡಿ. ಒಟ್ಟಾರೆ ನಿದ್ರೆ ಮತ್ತು ಸ್ನಾನದ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕು. ದಿನಕ್ಕೆ ಎಡಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡುವ ಅಭ್ಯಾಸ ಇದ್ದರೆ, ತಪ್ಪಿಸುವುದು ಉತ್ತಮ.

ಇದನ್ನೂ ಓದಿ: Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Medicinal Plants: ಇನ್ಸುಲಿನ್ ಗಿಡದ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ?

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್