Operation Sindoor: ಉಗ್ರರನ್ನು ಸೆದೆಬಡಿದಿದ್ದು ಬೆಂಗಳೂರಿನ ಸೂಸೈಡ್ ಡ್ರೋನ್ಗಳು
ಸದ್ಯ ವಿಶ್ವಾದಾದ್ಯಂತ ಆಪರೇಷನ್ ಸಿಂದೂರ್ ಬಗ್ಗೆಯೇ ಚರ್ಚೆಯಾಗುತ್ತಿದೆ. ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರನ್ನು ಸೆದೆಬಡಿಯುವ ಮೂಲಕ ಭಾರತೀಯ ಸೇನೆ ತನ್ನ ಶಕ್ತಿ ಮತ್ತು ಸಾಮರ್ಥ್ಯ ತೋರಿಸಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ನಮ್ಮ ಬೆಂಗಳೂರಿನ ಕೊಡುಗೆಯೂ ಕೂಡ ಇದೆ. ಏನದು ಕೊಡುಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 16: ಜಮ್ಮು ಮತ್ತು ಕಾಶ್ಮೀರದಲ್ಲಿನ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಪ್ರತೀಕವಾಗಿ ಭಾರತೀಯ ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಉಗ್ರರನ್ನು ಸಂಹಾರ ಮಾಡುವಲ್ಲಿ ಭಾರತೀಯ ಸೇನೆ (Indian Army) ಯಶಸ್ವಿಯಾಗಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣಗೆ ಬೆಂಗಳೂರಿನಲ್ಲಿ ತಯಾರಾದ ಡ್ರೋನ್ಗಳು ಬಳಕೆಯಾಗಿವೆ.
ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ (ADTL) ತಯಾರಿಸಿದ ಸೂಸೈಡ್ ಡ್ರೋನ್ಗಳು ಮೇಕ್ ಇನ್ ಇಂಡಿಯಾ ಶಕ್ತಿ ಏನು ಎಂಬುವುದನ್ನು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿವೆ. ಸ್ಕೈ ಸ್ಟ್ರೈಕರ್ ಅಂತ ಕರೆಯುವ ಈ ಸೂಸೈಡ್ ಡ್ರೋನ್ಗಳು ಉಗ್ರರನ್ನು ಸೆದೆಬಡಿದಿವೆ. ಈ ಸೂಸೈಡ್ ಡ್ರೋನ್ಗಳು ಆಪರೇಷನ್ ಸಿಂದೂರ್ನಲ್ಲಿ ತಮ್ಮ ಪವರ್ ತೋರಿಸಿವೆ.
ಸ್ಕೈ ಸ್ಟ್ರೈಕರ್ ಡ್ರೋನ್ಗಳ ಶಕ್ತಿ-ಸಾಮರ್ಥ್ಯ ಕುರಿತು ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೀಫ್ ಆಫ್ ರೇಟಿಂಗ್ ಆಫೀಸರ್ ರಾಘವೇಂದ್ರ ಆರೂರ್ ಮಾತನಾಡಿ, ಈ ಡ್ರೋನ್ಗಳು 100 ರಿಂದ 120 ಕಿಮೀವರೆಗೂ ಮೇಲೆ ಹೋಗಿ ಗಾಳಿಯಲ್ಲೇ ರೌಂಡ್ ಹೊಡೆಯುತ್ತವೆ. ಎದುರಾಳಿ ಪಡೆ ಕಂಡ ತಕ್ಷಣ ಟಾರ್ಗೆಟ್ ಫಿಕ್ಸ್ ಮಾಡಿಕೊಂಡು ಅಟ್ಯಾಕ್ ಮಾಡುತ್ತವೆ. ಸುಮಾರು 10 ಮೀಟರ್ ಸುತ್ತಮುತ್ತ ಡ್ಯಾಮೇಜ್ ಮಾಡುತ್ತವೆ. ಈ ಡ್ರೋನ್ಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡಿದ್ದೇವೆ. ಇನ್ನೂ ಹೆಚ್ಚಿನ ಡ್ರೋನ್ಗಳನ್ನು ಸರಬರಾಜು ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್ ಹರಿಪ್ರಸಾದ್ ಅಧ್ಯಕ್ಷ ಮಾತನಾಡಿ, “ಮೇಕ್ ಇನ್ ಇಂಡಿಯಾಗೆ ಪ್ರಧಾನಿ ಮೋದಿಯವರು ಪ್ರೋತ್ಸಾಹಸುತ್ತಿದ್ದರು. ಇವತ್ತು ನಮ್ಮ ಕಂಪನಿಯಲ್ಲಿ ತಯಾರಾಗಿದ್ದ ಡ್ರೋನ್ಗಳು ಆಪರೇಷನ್ ಸಿಂದೂರ್ಗೆ ಬಳಕೆಯಾಗಿದ್ದು ನಮಗೆ ಖುಷಿದೆ. ಇನ್ನೂ, ಡ್ರೋನ್ಗಳನ್ನು ಸರಬರಾಜು ಮಾಡಿರುವುದಕ್ಕೆ ಖುಷಿ ಇದೆ. ಇದು ನಾವೆಲ್ಲರು ಹೆಮ್ಮೆ ಪಡುವ ವಿಷಯ” ಎಂದು ಹೇಳಿದರು.
ಇದನ್ನೂ ಓದಿ: ಪಾಕ್ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಪ್ರಮುಖ ಸಾಕ್ಷ್ಯಗಳು
ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಸಿಂಹದ ಶಂಕ್ತಿ ಏನೂ ಎಂಬುವುದನ್ನು ನಮ್ಮ ಭಾರತದ ಸೇನೆ ತೋರಿಸಿದೆ. ನಮ್ಮ ಸೇನೆಗೆ ಬಲ ತುಂಬಿರುವ ಇಂಥಹ ಡ್ರೋನ್ಗಳು, ನಮ್ಮ ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸಿವೆ.







