AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink Guava: ಮಧುಮೇಹ ಸ್ನೇಹಿಯಾದ ಗುಲಾಬಿ ಪೇರಳೆ ನೀಡುವ ಆರೋಗ್ಯ ಪ್ರಯೋಜನಗಳೇನು?

ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ಮತ್ತು ಹೆಚ್ಚಿನ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗುಲಾಬಿ ಪೇರಳೆ, ನಿಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ಅವು ಮಧುಮೇಹ ಸ್ನೇಹಿಯಾಗಿವೆ. ಹಾಗಾಗಿಯೇ ಜನರು ಇದನ್ನು "ಸೂಪರ್ ಫುಡ್" ಎಂದು ಕರೆಯುತ್ತಾರೆ. ಹಾಗಾದರೆ ಗುಲಾಬಿ ಪೇರಳೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳಾವವು? ಇದು ಬಿಳಿ ಪೇರಳೆಗಿಂತ ಉತ್ತಮವೇ? ಇಲ್ಲಿದೆ ಮಾಹಿತಿ.

Pink Guava: ಮಧುಮೇಹ ಸ್ನೇಹಿಯಾದ ಗುಲಾಬಿ ಪೇರಳೆ ನೀಡುವ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2023 | 6:32 PM

ನೀವು ಪೇರಳೆ ಹಣ್ಣನ್ನು ತಿನ್ನಲು ಇಷ್ಟಪಡುತ್ತೀರಾ? ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ಗುಲಾಬಿ ಪೇರಳೆ ಅಥವಾ ಕೆಂಪು ಪೇರಳೆ ಅಥವಾ ಚಂದ್ರ ಪೇರಳೆ ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಈ ಪೇರಳೆಯನ್ನು ತಪ್ಪದೇ ತಿನ್ನಬೇಕು. ಗುಲಾಬಿ ಬಣ್ಣವನ್ನು ಹೊಂದಿರುವ ಈ ಪೇರಳೆ ಹಣ್ಣುಗಳು ನೋಡುವುದಕ್ಕೆ ಮಾತ್ರ ಸುಂದರವಾಗಿ ಕಾಣುವುದಲ್ಲ, ಅವುಗಳಲ್ಲಿರುವ ಅನೇಕ ಪೋಷಕಾಂಶಗಳು ಕೂಡ ದೇಹಕ್ಕೆ ಮುಖ್ಯವಾದದ್ದಾಗಿದೆ. ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ಮತ್ತು ಹೆಚ್ಚಿನ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ನಿಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ಅವು ಮಧುಮೇಹ ಸ್ನೇಹಿಯಾಗಿವೆ. ಹಾಗಾಗಿಯೇ ಜನರು ಇದನ್ನು “ಸೂಪರ್ ಫುಡ್” ಎಂದು ಕರೆಯುತ್ತಾರೆ. ಹಾಗಾದರೆ ಗುಲಾಬಿ ಪೇರಳೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳಾವವು? ಇದು ಬಿಳಿ ಪೇರಳೆಗಿಂತ ಉತ್ತಮವೇ? ಇಲ್ಲಿದೆ ಮಾಹಿತಿ.

ಗುಲಾಬಿ ಪೇರಳೆ ಅಥವಾ ಚಂದ್ರ ಪೇರಳೆಯ ಆರೋಗ್ಯ ಪ್ರಯೋಜನಗಳು;

ಈ ಹಣ್ಣು ಅಗತ್ಯ ಪೋಷಕಾಂಶಗಳಿಂದ ಸಮೃದ್ದವಾಗಿರುವುದರಿಂದ ನಿಮ್ಮನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

1. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಪ್ರತಿ 100 ಗ್ರಾಂಗೆ ಸರಿ ಸುಮಾರು 7 ಗ್ರಾಂ ಫೈಬರ್ ಹೊಂದಿರುವ ಪೇರಳೆ, ಪೆಕ್ಟಿನ್ ನಂತಹ ಇತರ ನಾರುಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಕರಗದ ಫೈಬರ್ ಅನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಫೈಬರ್ ಕೊಲೆಸ್ಟ್ರಾಲ್ ಮತ್ತು ಎಲ್ಡಿಎಲ್ (ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್) ಮಟ್ಟವನ್ನು ಕಡಿಮೆ ಮಾಡುತ್ತದೆ.

2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಗುಲಾಬಿ ಪೇರಳೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. 100 ಗ್ರಾಂ ಪೇರಳೆ ಹಣ್ಣಿನಲ್ಲಿ ಸುಮಾರು 228 ಮಿಲಿ ಗ್ರಾಂ ವಿಟಮಿನ್ ಸಿ ಇರುತ್ತದೆ.

3. ಚರ್ಮದ ಹಾನಿಯಿಂದ ರಕ್ಷಿಸುತ್ತದೆ

ಪೇರಳೆಯಲ್ಲಿ ಬೀಟಾ- ಕ್ಯಾರೋಟಿನ್ ಮತ್ತು ಲೈಕೋಪೀನ್ ಹೇರಳವಾಗಿದೆ, ಇದು ದೇಹದೊಳಗಿನ ಫ್ರೀ ರಾಡಿಕಲ್ಗಳನ್ನು ಎದುರಿಸಲು ಹೆಸರುವಾಸಿಯಾದ ಎರಡು ಉತ್ಕರ್ಷಣ ನಿರೋಧಕಗಳಾಗಿವೆ. ಇದು ನಿಮಗೆ ಚರ್ಮದ ಹಾನಿ ಮತ್ತು ವಯಸ್ಸಾಗುವ ಪ್ರಕ್ರಿಯೆಯ ವಿರುದ್ಧ ರಕ್ಷಣೆ ನೀಡುತ್ತದೆ.

4. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ಇದು ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶ ಹೊಂದಿದ್ದು, ಜೊತೆಗೆ ಇತರ ಪೌಷ್ಠಿಕಾಂಶದ ಪ್ರಯೋಜನಗಳಿಂದ ಗುಲಾಬಿ ಪೇರಳೆ ತಮ್ಮ ತೂಕವನ್ನು ನಿರ್ವಹಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ ಅಥವಾ ಉಪ್ಪು ಬೆರೆಸಿ ತಿನ್ನುವುದರಿಂದ ಆರೋಗ್ಯಕರ ಆಯ್ಕೆಯ ಜೊತೆಗೆ ಇನ್ನಷ್ಟು ರುಚಿಯನ್ನು ಹೆಚ್ಚಿಸಿದ ಹಾಗಾಗುತ್ತದೆ.

5. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಗುಲಾಬಿ ಪೇರಳೆ ಗಮನಾರ್ಹ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಸಹ ಒದಗಿಸುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮತ್ತು ನರ ಸಂಕೇತ ಹಾಗೂ ಸ್ನಾಯು ಸಂಕೋಚನಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಲೇಷಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನವು ಗುಲಾಬಿ ಪೇರಳೆ ದೇಹದ ತೂಕ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ.

ಇದನ್ನೂ ಓದಿ: ಪೇರಳೆ ಮಾತ್ರವಲ್ಲದೆ ಅದರ ಎಲೆಗಳೂ ಆರೋಗ್ಯಕ್ಕೆ ಒಳ್ಳೆಯದು

6. ಮಧುಮೇಹಕ್ಕೆ ಒಳ್ಳೆಯದು

ಗುಲಾಬಿ ಪೇರಳೆ, ಅದರ ಹೇರಳವಾದ ಫೈಬರ್ ಮತ್ತು ನೀರಿನ ಅಂಶದಿಂದಾಗಿ, ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದು 24 ಕ್ಕಿಂತ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಜೊತೆಗೆ ಇದು ರಕ್ತದಲ್ಲಿನ ಗ್ಲೂಕೋಸ್ ಸ್ಪೈಕ್ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಮಧುಮೇಹ ಸ್ನೇಹಿ ಹಣ್ಣಾಗಿದೆ.

ಬಿಳಿ ಅಥವಾ ಗುಲಾಬಿ ಪೇರಳೆ ಇವೆರಡರಲ್ಲಿ ಯಾವುದು ಉತ್ತಮ?

ಗುಲಾಬಿ ಮತ್ತು ಬಿಳಿ ಪೇರಳೆಯನ್ನು ಸಾಮಾನ್ಯವಾಗಿ ನೀವು ಮಾರುಕಟ್ಟೆಯಲ್ಲಿ ಕಾಣಬಹುದು. ಎರಡೂ ಪ್ರಭೇದಗಳು ಕೂಡ ಹೆಚ್ಚು ಪೌಷ್ಟಿಕವಾಗಿವೆ ಎಂದು ತಜ್ಞರು ಹೇಳುತ್ತಾರೆ, ಆದರೆ ಅವುಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಗುಲಾಬಿ ಪೇರಳೆ ಹೆಚ್ಚಿನ ವಿಟಮಿನ್ ಸಿ ಅಂಶಕ್ಕೆ ಹೆಸರುವಾಸಿಯಾಗಿದೆ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಬಿಳಿ ಪೇರಳೆಯಲ್ಲಿ ಇತರ ಅಗತ್ಯ ಪೋಷಕಾಂಶಗಳಿವೆ. ಜೊತೆಗೆ ಎರಡೂ ವಿಧಗಳು ಕೂಡ ಆರೋಗ್ಯಕರ ಆಹಾರದ ಭಾಗವಾಗಬಹುದು. ಅವುಗಳ ನಡುವಿನ ಆಯ್ಕೆಯು ನಿಮ್ಮ ವೈಯಕ್ತಿಕ ಅಭಿರುಚಿ ಮತ್ತು ಪಾಕಶಾಲೆಯ ಆದ್ಯತೆಗಳನ್ನು ಅವಲಂಬಿಸಿ ಆರಿಸಿಕೊಳ್ಳಬೇಕು.

ಸಮತೋಲಿತ ಆಹಾರದ ಭಾಗವಾಗಿ ನೀವು ಗುಲಾಬಿ ಪೇರಳೆಗಳನ್ನು ನಿಯಮಿತವಾಗಿ ಸೇವಿಸಬಹುದು, ಆದರೆ ಎಲ್ಲಾ ಆಹಾರದಂತೆ, ಮಿತಗೊಳಿಸುವುದು ಕೂಡ ಮುಖ್ಯ. ಗುಲಾಬಿ ಪೇರಳೆಗಳನ್ನು ಪ್ರತಿದಿನ ಸೇವನೆ ಮಾಡದೆಯೇ ವಾರಕ್ಕೆ ಮೂರು ಅಥವಾ ನಾಲ್ಕು ಬಾರಿ ತಿನ್ನುವುದು ಆರೋಗ್ಯಕರ ಆಹಾರದ ಭಾಗವಾಗಬಹುದು, ಪೋಷಕಾಂಶಗಳ ಉತ್ತಮ ಸೇವನೆಯನ್ನು ಖಚಿತಪಡಿಸಿಕೊಳ್ಳಲು ನೀವು ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಸಹ ಇದರ ಜೊತೆ ತಿನ್ನುವುದು ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ