Pizza: ಪಿಜ್ಜಾ ತಿನ್ನೋಕೆ ಇಷ್ಟಾನಾ?; ಅದರ ಅದ್ಭುತ ಪ್ರಯೋಜನಗಳಿವು
Pizza Benefits: ಪಿಜ್ಜಾ ನಗರ ಪ್ರದೇಶದಲ್ಲಿ ಸಾರ್ವತ್ರಿಕವಾಗಿ ಜನರು ಇಷ್ಟಪಡುವ ಆಹಾರಗಳಲ್ಲಿ ಒಂದು. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಪಿಜ್ಜಾ ತಿನ್ನುತ್ತಾರೆ. ಈ ಪಿಜ್ಜಾವನ್ನು ಮೈದಾದಿಂದ ತಯಾರಿಸುವುದರಿಂದ ಜೀರ್ಣಕ್ರಿಯೆಗೆ ಕಷ್ಟಕರವಾಗಿರುತ್ತದೆ ಎಂಬ ನಂಬಿಕೆಯಿದೆ. ಆದರೆ, ಪಿಜ್ಜಾ ಸೇವನೆಯಿಂದ ಆರೋಗ್ಯಕ್ಕೆ ಕೂಡ ಅನೇಕ ರೀತಿಯ ಪ್ರಯೋಜನಗಳಿವೆ ಎಂಬ ವಿಷಯ ನಿಮಗೆ ಗೊತ್ತಾ?
ಪಿಜ್ಜಾ ಇಟಾಲಿಯನ್ ಮೂಲದ ಭಕ್ಷ್ಯವಾಗಿದೆ. ನೇಪಲ್ಸ್ ನಗರದಲ್ಲಿ ಪಿಜ್ಜಾವನ್ನು ಮೊದಲು ಆರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಪಿಜ್ಜಾವನ್ನು (Pizza) ಟೊಮ್ಯಾಟೊ ಆಧಾರಿತ ಸಾಸ್ ಮತ್ತು ಚೀಸ್ ನೊಂದಿಗೆ ಮಾಡಲಾಗುತ್ತದೆ. ಆದರೆ, ಫ್ಲೇವರ್, ಪದಾರ್ಥಗಳು ಅವರವರ ಇಷ್ಟಕ್ಕೆ ತಕ್ಕಂತೆ ಬದಲಾಗುತ್ತವೆ. ಈ ಇಟಾಲಿಯನ್ ಆಹಾರವು (Italian Food) ಜನಪ್ರಿಯ ಆಹಾರವಾಗಿದೆ. ಕೆಲವು ಅಂದಾಜಿನ ಪ್ರಕಾರ, ದಿ ವೀಕ್‌ನಲ್ಲಿ ಪ್ರಕಟವಾದ 2015ರ ಅಂಕಿಅಂಶಗಳ ಪ್ರಕಾರ, ಅಮೆರಿಕಾದಲ್ಲಿ ವಾರ್ಷಿಕವಾಗಿ 3 ಶತಕೋಟಿ ಪಿಜ್ಜಾಗಳನ್ನು ಸೇವಿಸಲಾಗುತ್ತದೆ.
ಪಿಜ್ಜಾವನ್ನು ನಾವು ಹೇಗೆ ಸೇವಿಸುತ್ತೇವೆ ಎಂಬುದರ ಆಧಾರದ ಮೇಲೆ ಅದು ನಮ್ಮ ಆರೋಗ್ಯಕ್ಕೆ ಉತ್ತಮವೇ ಎಂಬುದು ನಿರ್ಧರಿತವಾಗುತ್ತದೆ. ಹಸಿರು ಸಲಾಡ್ ಅಥವಾ ಇತರ ತರಕಾರಿಗಳೊಂದಿಗೆ ಒಂದೇ ಸ್ಲೈಸ್ ಪಿಜ್ಜಾವನ್ನು ಸೇವಿಸಿದಾಗ ಅದು ನಿಮ್ಮ ದೇಹವನ್ನು ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಸೋಡಿಯಂನಿಂದ ತುಂಬಿಸದೆ ಪೋಷಕಾಂಶಗಳನ್ನು ತುಂಬುತ್ತದೆ. ಸಂಸ್ಕರಿಸಿದ ಮಾಂಸದಿಂದ ಮಾಡಿದ ಪಿಜ್ಜಾ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮ ಎಂದು ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: Menstrual Cramps: ಪಿರಿಯಡ್ ಸಮಯದಲ್ಲಿ ತಡೆಯಲಾರದ ಹೊಟ್ಟೆನೋವಿಗೆ ಇಲ್ಲಿದೆ ಪರಿಹಾರ
ಪಿಜ್ಜಾ ತಿನ್ನುವುದರಿಂದ ಆಗುವ 6 ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ…
- ಪಿಜ್ಜಾವು ಸಾಮಾನ್ಯವಾಗಿ ಚೀಸ್ ಅನ್ನು ಹೊಂದಿರುತ್ತದೆ ಮತ್ತು ಮಾಂಸದ ಪದಾರ್ಥಗಳಾದ ಚಿಕನ್, ಹ್ಯಾಮ್ ಅಥವಾ ಸಾಸೇಜ್ ಅನ್ನು ಒಳಗೊಂಡಿರುತ್ತದೆ. ಇದು ಪ್ರೋಟೀನ್ ಅನ್ನು ನೀಡುತ್ತದೆ.
- ಪಿಜ್ಜಾ ಪೌಷ್ಟಿಕಾಂಶದ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಅದರ ಘಟಕಗಳು ಸಮತೋಲಿತ ಆಹಾರದ ಉತ್ತಮ ಮೂಲವಾಗಿದೆ.
- ಪಿಜ್ಜಾದಲ್ಲಿ ಬಳಸುವ ಘಟಕಾಂಶಗಳಲ್ಲಿ ಚೀಸ್ ಕೂಡ ಒಂದಾಗಿದೆ. ಇದು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಇದು ಮೂಳೆಯ ಆರೋಗ್ಯ ಮತ್ತು ಸ್ನಾಯುವಿನ ಕಾರ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
- ಪಿಜ್ಜಾದಲ್ಲಿನ ಟೊಮ್ಯಾಟೊ ಸಾಸ್ ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
- ನೀವು ನೇರವಾಗಿ ತರಕಾರಿಗಳನ್ನು ತಿನ್ನಲು ಇಷ್ಟಪಡದಿದ್ದರೆ, ಸಾಸ್ ಮತ್ತು ಚೀಸ್ನೊಂದಿಗೆ ಸಂಯೋಜಿಸಲ್ಪಟ್ಟ ನಿಮ್ಮ ಪಿಜ್ಜಾದ ಮೇಲೆ ತರಕಾರಿಗಳನ್ನು ಹಾಕಿಕೊಂಡು ತಿನ್ನಿರಿ.
- ನಿಮ್ಮ ಪಿಜ್ಜಾ ಕ್ರಸ್ಟ್ ಅನ್ನು ಮೈದಾದ ಬದಲು ಸಂಪೂರ್ಣ ಧಾನ್ಯದೊಂದಿಗೆ ಮಾಡಿ. ಅದು ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ