ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ? ಇಲ್ಲಿದೆ ಕಾರಣ

ಸಾಮಾನ್ಯವಾಗಿ ದೇಶದೆಲ್ಲೆಡೆ ಹೆಚ್ಚಾಗಿ ಪೊಲೀಸರು ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ. ಆದ್ರೆ ಕೊಲ್ಕತ್ತಾ ಪೊಲೀಸರು ಮಾತ್ರ ಬಿಳಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಾರೆ. ಇತರೆ ರಾಜ್ಯಗಳಿಗಿಂತ ಕೊಲ್ಕತ್ತಾ ಪೊಲೀಸರ ಸಮವಸ್ತ್ರ ಏಕೆ ಭಿನ್ನವಾಗಿದೆ, ಇದೇ ರೀತಿ ಬೇರೆ ರಾಜ್ಯಗಳಲ್ಲೂ ಯುನಿಫಾರ್ಮ್‌ನಲ್ಲಿ ಬದಲಾವಣೆಗಳಿವೆ ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ? ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 07, 2025 | 5:54 PM

ನಾವು ನೋಡಿರುವಂತೆ ಪೊಲೀಸರು (Police)  ಸಾಮಾನ್ಯವಾಗಿ ಖಾಕಿ ಸಮವಸ್ತ್ರಗಳನ್ನೇ (Uniform) ಧರಿಸುತ್ತಾರೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಹೆಚ್ಚಿನ ಕಡೆ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ಖಾಕಿ ಸಮವಸ್ತ್ರವನ್ನೇ ಧರಿಸುತ್ತಾರೆ. ವಾಸ್ತವವಾಗಿ ಪೊಲೀಸರು ಖಾಕಿ ಸಮವಸ್ತ್ರವನ್ನು ಧರಿಸುವ ಕ್ರಮ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಪ್ರಾರಂಭವಾಯಿತು.  ಬ್ರಿಟಿಷ್ ಆಳ್ವಿಕೆಯಲ್ಲಿ ಪೊಲೀಸ್ ಇಲಾಖೆ  ರಚನೆಯಾದಾಗ, ಪೊಲೀಸರ ಸಮವಸ್ತ್ರ ಬಿಳಿ ಬಣ್ಣದಲ್ಲಿತ್ತು.  ಆದರೆ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪೊಲೀಸರು ಬಹಳಷ್ಟು ತೊಂದರೆಗಳನ್ನು ಎದುರಿಸಲು ಪ್ರಾರಂಭಿಸಿದರು.  ಮತ್ತು ಆ ಕೊಳೆಯನ್ನು ಮರೆಮಾಚಲು ಪೊಲೀಸರು ಅದಕ್ಕೆ ವಿವಿಧ ಬಣ್ಣಗಳನ್ನು ಬಳಿಯಲು ಪ್ರಾರಂಭಿಸಿದರು.ಅಂತಹ ಪರಿಸ್ಥಿತಿಯಲ್ಲಿ ಖಾಕಿ ಬಣ್ಣದ ಸಮವಸ್ತ್ರವನ್ನು ಪರಿಚಯಿಸಲಾಯಿತು. ಅಂದಿನಿಂದ ಭಾರತದಲ್ಲಿ ಪೊಲೀಸರು ಖಾಕಿ ಸಮವಸ್ತ್ರವನ್ನೇ ಧರಿಸುತ್ತಾರೆ. ಆದರೆ ಕೊಲ್ಕತ್ತಾ ಪೊಲೀಸರು (Kolkata Police) ಮಾತ್ರ ಬಿಳಿ ಬಣ್ಣದ ಯುನಿಫಾರ್ಮ್‌ ಧರಿಸುತ್ತಾರೆ. ಇದರ ಹಿಂದಿನ ಕಾರಣ ಏನು ಎಂಬುದನ್ನು ನೋಡೋಣ.

ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ?

ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಪೊಲೀಸರು ಖಾಕಿ ಸಮವಸ್ತ್ರವನ್ನೇ ಧರಿಸುತ್ತಾರೆ. ಪೊಲೀಸರ ಖಾಕಿ ಸಮವಸ್ತ್ರವನ್ನು ಅವರ ದೊಡ್ಡ ಗುರುತೆಂದೇ ಪರಿಗಣಿಸಲಾಗಿದೆ. ಒಂದೇ ವ್ಯತ್ಯಾಸವೆಂದರೆ ಕೆಲವು ಸ್ಥಳಗಳಲ್ಲಿ ಪೊಲೀಸರ ಖಾಕಿ ಬಟ್ಟೆ ಬಣ್ಣವು ಸ್ವಲ್ಪ ಹಗುರವಾಗಿದ್ದೆ, ಕೆಲವು ಸ್ಥಳಗಳಲ್ಲಿ ಪೊಲೀಸರ ಬಟ್ಟೆ ಗಾಢ ಖಾಕಿ ಬಣ್ಣದಲ್ಲಿರುತ್ತದೆ. ಆದ್ರೆ ಕೊಲ್ಕತ್ತಾ ಪೊಲೀಸರು ಮಾತ್ರ ಬಿಳಿ ಬಣ್ಣದ ಸಮವಸ್ತ್ರ ಧರಿಸುತ್ತಾರೆ. ಇತ್ತ ಪುದುಚೇರಿಯ ಕಾನ್‌ಸ್ಟೇಬಲ್‌ಗಳು ಖಾಕಿ ಸಮವಸ್ತ್ರವನ್ನು ಧರಿಸಿದರೂ ಅದರೊಂದಿಗೆ ಅಚ್ಚ ಕೆಂಪು ಬಣ್ಣದ ಟೋಪಿಯನ್ನು ಧರಿಸುತ್ತಾರೆ. ಇನ್ನೂ ದೆಹಲಿ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಗಳು ಬಿಳಿ ಮತ್ತು ನೀಲಿ ಸಮವಸ್ತ್ರ ಧರಿಸುತ್ತಾರೆ. ಅಷ್ಟಕ್ಕೂ ಕೊಲ್ಕತ್ತಾ ಪೊಲೀಸರು ಬಿಳಿ ಬಣ್ಣದ ಯುನಿಫಾರ್ಮ್‌ ಏಕೆ ಧರಿಸುತ್ತಾರೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಒಂದು ಎಲೆಯನ್ನು ಆಯ್ಕೆ ಮಾಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಪರೀಕ್ಷಿಸಿ

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ವಿಶ್ವ ಅಥ್ಲೆಟಿಕ್ಸ್‌ ದಿನವನ್ನು ಆಚರಿಸುವ ಉದ್ದೇಶವೇನು?
ಈ ರೀತಿ ಮನೆಯಲ್ಲೇ ಮಾಡಿ ನೋಡಿ ಟೇಸ್ಟಿಯಾಗಿರುವ ಚಿಕನ್‌ ಉಪ್ಪಿನಕಾಯಿ
ಬೇಸಿಗೆಯಲ್ಲಿ ಈ 5 ವಸ್ತುಗಳು ನಿಮ್ಮ ಪರ್ಸ್‌ನಲ್ಲಿ ಇರಬೇಕು

ಕೋಲ್ಕತ್ತಾದಲ್ಲಿ ಪೊಲೀಸರು ಬಿಳಿ ಯುನಿಫಾರ್ಮ್‌ ಧರಿಸುವಂತೆ ಇಡೀ ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಿಳಿ ಯುನಿಫಾರ್ಮ್‌ ಧರಿಸೊಲ್ಲ. ಕೊಲ್ಕತ್ತಾ ಬಿಟ್ಟು ಈ ರಾಜ್ಯದ ಇತರೆ ಭಾಗಗಳಲ್ಲಿ ಪೊಲೀಸರು ಖಾಕಿ ಬಟ್ಟೆಯನ್ನೇ ಧರಿಸುತ್ತಾರೆ. ಇದು ಇತಿಹಾಸ ಮತ್ತು ವಿಜ್ಞಾನ ಎರಡಕ್ಕೂ ಸಂಬಂಧಿಸಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಪೊಲೀಸ್ ಇಲಾಖೆ  ರಚನೆಯಾದಾಗ, ಪೊಲೀಸರ ಸಮವಸ್ತ್ರ ಬಿಳಿ ಬಣ್ಣದಲ್ಲಿತ್ತು.  ಆದರೆ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪೊಲೀಸರು ಬಹಳಷ್ಟು ತೊಂದರೆಗಳನ್ನು ಎದುರಿಸಲು ಪ್ರಾರಂಭಿಸಿದರು.  ಮತ್ತು ಆ ಕೊಳೆಯನ್ನು ಮರೆಮಾಚಲು ಪೊಲೀಸರು ಅದಕ್ಕೆ ಚಹಾ ಎಲೆಗಳು ಸೇರಿದಂತೆ ವಿವಿಧ ಬಣ್ಣಗಳನ್ನು ಬಳಿಯಲು ಪ್ರಾರಂಭಿಸಿದರು. ಇದರಿಂದ ಸಮವಸ್ತ್ರದ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು. ನಂತರ ಈ ಸಮವಸ್ತ್ರವನ್ನು ಬ್ರಿಟಿಷ್‌ ಅಧಿಕಾರಿಗಳು ಖಾಕಿ ಬಣ್ಣಕ್ಕೆ ಬದಲಾಯಿಸಲಾಯಿತು.  ಅದರಂತೆ ಎರಡು ವರ್ಷಗಳ ನಂತರ ಕೊಲ್ಕತ್ತಾದಲ್ಲೂ ಸರ್ ಲುಮ್ಸ್ಡೆನ್ ಬಿಳಿ ಬಣ್ಣದಿಂದ ಖಾಕಿಗೆ ಬದಲಾಯಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ ಕೋಲ್ಕತ್ತಾ ಪೊಲೀಸರು ಇದನ್ನು ನಿರಾಕರಿಸಿದರು.

ಏಕೆಂದರೆ ಕೋಲ್ಕತ್ತಾ ಕರಾವಳಿ ಪ್ರದೇಶವಾದ್ದರಿಂದ ಅಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತೀವ್ರ ತಾಪಮಾನವಿದೆ. ಅಂತಹ ಸಂದರ್ಭದಲ್ಲಿ ಖಾಕಿ ಬಣ್ಣದ ಬಟ್ಟೆ ಧರಿಸಿದಾಗ ದೇಹ ಇನ್ನಷ್ಟು ಬಿಸಿಯಾಗುತ್ತದೆ. ಅದಕ್ಕಾಗಿ ಖಾಕಿ ಯುನಿಫಾರ್ಮ್‌ ಬೇಡವೆಂದು ನಿರಾಕರಿಸಿದರು. ಮತ್ತು ಬಿಳಿ ಬಣ್ಣವು ಶಾಖವನ್ನು ಹೀರಿಕೊಳ್ಳುವ ಕಾರಣ,  ಸೂರ್ಯನ ಬೆಳಕು ಬಿಳಿ  ಸಮವಸ್ತ್ರದಿಂದ ಪ್ರತಿಫಲಿಸುತ್ತದೆ ಮತ್ತು ಇದರಿಂದ ದೇಹಕ್ಕೆ ಬಿಸಿ ಅನುಭವ ಆಗುವುದಿಲ್ಲ ಅದಕ್ಕಾಗಿ ಕೊಲ್ಕತ್ತಾದಲ್ಲಿ ಪೊಲೀಸರಿಗೆ ಬಿಳಿ ಬಣ್ಣದ ಸಮವಸ್ತ್ರ ನೀಡಲಾಯಿತು.

ಖಾಕಿ ಬಣ್ಣವನ್ನು ಏಕೆ ಆಯ್ಕೆ ಮಾಡಲಾಯಿತು?

ವಾಸ್ತವವಾಗಿ, ಖಾಕಿ ಬಣ್ಣವು ಧೂಳು, ಮಣ್ಣು ಮತ್ತು ಇತರ ನೈಸರ್ಗಿಕ ಅಂಶಗಳೊಂದಿಗೆ ಸುಲಭವಾಗಿ ಹೊಂದಿಕೆಯಾಗುತ್ತದೆ, ಇದು ಕೊಳೆಯಾದ ನಂತರವೂ ಸ್ವಚ್ಛವಾಗಿಯೇ ಇದ್ದಂತೆ ಕಾಣುತ್ತದೆ. ಇದಲ್ಲದೆ, ಗಾಢ ಬಣ್ಣಗಳಿಗೆ ಹೋಲಿಸಿದರೆ ಖಾಕಿ ಕಡಿಮೆ ಗೋಚರತೆಯನ್ನು ಹೊಂದಿದೆ.  ಇದು ಪೊಲೀಸರು ಕಾರ್ಯಾಚರಣೆಯ ಸಮಯದಲ್ಲಿ ಅಡಗಿಕೊಳ್ಳಲು ಮತ್ತು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿ ಖಾಕಿ ಬಣ್ಣವನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಖಾಕಿ ಬಣ್ಣವನ್ನು ಶಾಂತ ಮತ್ತು ಸಂಯಮದ ಬಣ್ಣವೆಂದು ಪರಿಗಣಿಸಲಾಗುತ್ತದೆ ಅಷ್ಟೇ ಅಲ್ಲದೆ  ಇದು ಪೊಲೀಸ್ ಪಡೆಗಳ ವೃತ್ತಿಪರತೆ ಮತ್ತು ಶಿಸ್ತಿನ ಸ್ವರೂಪವನ್ನು ತೋರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ