AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Covid Impact: ಕೋವಿಡ್ ಬಳಿಕ ಆನ್​ಲೈನ್ ಮದುವೆ ವೇದಿಕೆಯತ್ತ ಎಲ್ಲರ ಚಿತ್ತ

ಕೋವಿಡ್​ಗೂ ಮುನ್ನ ಮದುವೆಯೆಂಬ ಕಲ್ಪನೆಯೇ ಬೇರೆಯ ರೀತಿ ಇತ್ತು. ಸುಂದರ ಕಲ್ಯಾಣ ಮಂಟಪ, ಸಾವಿರಾರು ಮಂದಿ ನೆಂಟರಿಷ್ಟರು, ವಿವಿಧ ಬಗೆಯ ಭಕ್ಷ್ಯಗಳು ಭೋಜನ, ಆಕರ್ಷಕ ಉಡುಗೊರೆಗಳು ಇತ್ಯಾದಿ, ಇತ್ಯಾದಿ.

Post Covid Impact: ಕೋವಿಡ್ ಬಳಿಕ ಆನ್​ಲೈನ್ ಮದುವೆ ವೇದಿಕೆಯತ್ತ ಎಲ್ಲರ ಚಿತ್ತ
Marriage
TV9 Web
| Updated By: ನಯನಾ ರಾಜೀವ್|

Updated on: Nov 03, 2022 | 4:06 PM

Share

ಕೋವಿಡ್​ಗೂ ಮುನ್ನ ಮದುವೆಯೆಂಬ ಕಲ್ಪನೆಯೇ ಬೇರೆಯ ರೀತಿ ಇತ್ತು. ಸುಂದರ ಕಲ್ಯಾಣ ಮಂಟಪ, ಸಾವಿರಾರು ಮಂದಿ ನೆಂಟರಿಷ್ಟರು, ವಿವಿಧ ಬಗೆಯ ಭಕ್ಷ್ಯಗಳು ಭೋಜನ, ಆಕರ್ಷಕ ಉಡುಗೊರೆಗಳು ಇತ್ಯಾದಿ, ಇತ್ಯಾದಿ.

ಆದರೆ ಕೋವಿಡ್ ಬಳಿಕ ವಧುವರರ ಹೆಸರೂ ಜ್ಞಾಪಕದಲ್ಲಿರುವುದಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆಗೆ ತೀರಾ ಹತ್ತಿರದವರನ್ನು ಮಾತ್ರ ಕರೆಯಲಾಗುತ್ತದೆ. ಮೊದಲೆಲ್ಲಾ ಪ್ರತಿಯೊಬ್ಬರ ಮನೆಗೂ ಹೋಗಿ ಆಮಂತ್ರಣ ನೀಡಲಾಗುತ್ತಿತ್ತು ಆದರೆ ಈಗ ಪ್ರತಿಯೊಬ್ಬರು ಕರೆ ಮಾಡಿ ಕರೆಯುವ ಪರಿಪಾಠ ಹೆಚ್ಚಾಗಿದೆ.

ಮದುವೆಯನ್ನು ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಬುಕಿಂಗ್ ಕೂಡ ಮಾಡಿಕೊಳ್ಳಲಾಗುತ್ತದೆ. ಡೆಸ್ಟಿನೇಷನ್, ಆಹಾರ, ಅಲಂಕಾರ ಸೇರಿದ ಇತರೆ ಮಾಹಿತಿಯನ್ನು ನೀಡಿದರೆ ಸಾಕು, ಅಲ್ಲಿಯೇ ನಿಂತು ಯಾವ ಕೆಲಸವನ್ನೂ ಮಾಡಬೇಕಿಲ್ಲ, ಮದುವೆಯ ಹಿಂದಿನ ದಿನ ಅಲ್ಲಿದ್ದರೆ ಸಾಕು.

ಹಾಗಾಗಿ ಇದೀಗ ಮದುವೆಗೆ ಆನ್​ಲೈನ್​ ಪ್ಲಾಟ್​ಫಾರ್ಮ್​ ಅನ್ನು ಆಶ್ರಯಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ನೆಂಟರಿಷ್ಟರು ಹೆಚ್ಚು ದೊಡ್ಡ ದೊಡ್ಡ ಛತ್ರ ಬೇಕೆಂಬ ತಲೆ ಬಿಸಿಯಿಲ್ಲ, ಸಾವಿರಾರು ಜನರಕ್ಕೆ ಊಟ ಹಾಕುವ ಆಲೋಚನೆಯೂ ಇಲ್ಲ. ನಾವು ನಮ್ಮವರು ಎನ್ನುವ ಕಾನ್ಸೆಪ್ಟ್​ನಲ್ಲಿಯೇ ಈಗಿನ ಮದುವೆಗಳು ನಡೆಯುತ್ತಿವೆ.

ಇನ್ನೊಂದು ವಿಧವೆಂದರೆ ಮದುವೆಯ ಲಿಂಕ್​ ಅನ್ನು ಕಳುಹಿಸಿಬಿಟ್ಟರೆ ಸಾಕು ನೆಂಟರಿಷ್ಟರು ಮನೆಯಲ್ಲಿಯೇ ಆ ಲಿಂಕ್ ಮೂಲಕ ಮದುವೆಯನ್ನು ವೀಕ್ಷಿಸಬಹುದಾಗಿದೆ. ವಧುವರರಿಗೆ ಏನು ಉಡುಗೊರೆ ನೀಡಬೇಕೆನ್ನುವ ತಲೆಬಿಸಿಯೂ ಇಲ್ಲವಾಗಿದೆ.

ಭಾರತದ ಅತಿದೊಡ್ಡ ಆನ್​ಲೈನ್ ವೆಡ್ಡಿಂಗ್ ಪ್ಲಾಟ್​ಫಾರ್ಮ್​ Weddingz.in ನಡೆಸಿರುವ ಸಮೀಕ್ಷೆಯೊಂದರಲ್ಲಿ ಕೋವಿಡ್ ನಂತರ ಶೇ. 63ರಷ್ಟು ಮಂದಿ ಈ ಆನ್​ಲೈನ್​ ವೆಡ್ಡಿಂಗ್ ಪ್ಲಾಟ್​ ಆಶ್ರಯಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಆನ್‌ಲೈನ್ ವಿವಾಹ ವೇದಿಕೆಗಳ ಜಾಗೃತಿ ಮತ್ತು ಬಳಕೆಯಲ್ಲಿ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಸಮೀಕ್ಷೆಯು 63% ಕ್ಕಿಂತ ಹೆಚ್ಚು ಮಂದಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿವಾಹಗಳನ್ನು ಯೋಜಿಸಲು ಬಯಸುತ್ತಾರೆ ಎಂದು ತೋರಿಸುತ್ತದೆ.

ಆನ್‌ಲೈನ್ ವೆಡ್ಡಿಂಗ್ ಪ್ಲಾಟ್‌ಫಾರ್ಮ್‌ಗಳತ್ತ ಒಲವು ತೋರಲು ಕಾರಣಗಳನ್ನು ಅಧ್ಯಯನವು ಬಹಿರಂಗಪಡಿಸುತ್ತದೆ. 60% ಕ್ಕಿಂತ ಹೆಚ್ಚು ವ್ಯಕ್ತಿಗಳು ವಿವಾಹಗಳನ್ನು ಆನ್‌ಲೈನ್‌ನಲ್ಲಿ ಯೋಜಿಸಲು ಬಯಸುತ್ತಾರೆ ಏಕೆಂದರೆ ಇದು ಕೈಗೆಟುಕುವ ಆಯ್ಕೆಯಾಗಿದೆ.

ಸುಮಾರು 70% ಗ್ರಾಹಕರು ಆನ್‌ಲೈನ್ ವಿವಾಹ ಮಾಧ್ಯಮಗಳನ್ನು ಬಳಸಲು ಸುಲಭವಾಗಿದೆ ಎಂದು ಭಾವಿಸುತ್ತಾರೆ. ಒಟ್ಟಾರೆಯಾಗಿ, ಆನ್‌ಲೈನ್ ವಿವಾಹ ವೇದಿಕೆಯು ಬಹು ಅವಶ್ಯಕತೆಗಳಿಗೆ ಒಂದು ಪರಿಹಾರವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ