ಫೆಬ್ರವರಿ 8 ರಂದು ವಿಶ್ವದಾದ್ಯಂತ ಪ್ರಪೋಸ್ ಡೇ(Propose Day) ಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ಪ್ರೇಮಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಅವರನ್ನು ನೀವು ಎಷ್ಟು ಇಷ್ಟ ಪಡುತ್ತೀರಿ ಎಂದು ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಆದರೆ ನಿಮ್ಮ ಅತಿಯಾದ ಪ್ರೇಮ ಅಥವಾ ಪ್ರಪೋಸ್ ಡೇಯಂದು ನೀವು ಮಾಡುವ ತಪ್ಪುಗಳು ನಿಮ್ಮಿಂದ ನಿಮ್ಮ ಪ್ರೇಮಿಯನ್ನು ದೂರ ಮಾಡಬಹುದು. ಆದ್ದರಿಂದ ನೀವು ಪ್ರಪೋಸ್ ಮಾಡುವ ಮುನ್ನ ಈ ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಿ.
ನೀವು ನಿಮ್ಮ ಪ್ರೇಮಿಗೆ ಸರ್ಪ್ರೈಸ್ ನೀಡಲು ಬಯಸಿದರೆ, ಮುಂಚಿತವಾಗಿಯೇ ಸುಳಿವು ನೀಡಿ. ನಿಮ್ಮ ಅನಿರೀಕ್ಷಿತ ಸರ್ಪ್ರೈಸ್ ಕೆಲವೊಮ್ಮೆ ಕೆಡುಕಾಗುವ ಸಾಧ್ಯತೆ ಹೆಚ್ಚಿದೆ. ನೀವು ಸಂಪೂರ್ಣ ವಿಷಯವನ್ನು ವಿವರಿಸದಿರಿ. ಬದಲಾಗಿ ಸರ್ಪ್ರೈಸ್ನ ಸುಳಿವು ನೀಡಿ.
ನೀವು ಬಯಸಿದ ರೀತಿಯಲ್ಲಿ ನೀವು ಎಷ್ಟೇ ಯೋಜಿಸಿದರೂ, ಕೂಡ ನೀವು ಮಾಡುವ ಶುಭಾಶಯಗಳು ಅವರಿಗೂ ವಿಶೇಷವಾಗಿರಲಿ. ಅವರ ಬಗ್ಗೆ ನಿಮಗೆ ಮುಂಚೆಯೇ ತಿಳಿದಿರುವುದರಿಂದ ಅವರ ಇಷ್ಟ ಆಗುವ ರೀತಿಯಲ್ಲಿಯೇ ಶುಭಾಶಯ ತಿಳಿಸಿ.
ಇದನ್ನೂ ಓದಿ: ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ, ಇದರ ಮಹತ್ವ, ಇತಿಹಾಸ ಇಲ್ಲಿದೆ
ವಿಶೇಷವಾಗಿ ಮದುವೆಯ ಪ್ರಸ್ತಾಪಗಳ ಸಂದರ್ಭದಲ್ಲಿ, ಉಂಗುರವನ್ನು ಆಹಾರ ಅಥವಾ ಜ್ಯೂಸ್ಗಳ ಒಳಗಡೆ ಮರೆಮಾಡದಂತೆ ಸಲಹೆ ನೀಡಲಾಗುತ್ತದೆ. ಇದರ ಬದಲಾಗಿ ನೀವೇ ಧೈರ್ಯದಿಂದ ಮದುವೆಯ ಪ್ರಸ್ತಾಪ ಮಾಡಿ.
ನೀವು ನಿಮ್ಮ ಪ್ರೇಮಿಯೊಂದಿಗೆ ಪ್ರೀತಿಯನ್ನು ಪ್ರಸ್ತಾಪಿಸುವ ಸಂದರ್ಭ, ಸನ್ನಿವೇಶಗಳು ಯಾವ ರೀತಿಯಲ್ಲಿದೆ ಎಂದು ತಿಳಿದುಕೊಂಡು ಮುಂದುವರಿಯುವುದು ಅಗತ್ಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:15 pm, Tue, 7 February 23