Propose Day 2023: ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ, ಇದರ ಮಹತ್ವ, ಇತಿಹಾಸ ಇಲ್ಲಿದೆ

Valentine's day 2023: ಪ್ರಣಯ ಸಂಬಂಧದಲ್ಲಿರುವ ಸಂಗಾತಿಗಳಿಗೆ ಪ್ರಪೋಸ್ ಡೇ ಯು ಮಹತ್ವದ ದಿನವಾಗಿದೆ. ತಾವು ಪ್ರೀತಿಸುವ ವ್ಯಕ್ತಿಗೆ ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುವ ದಿನವಾಗಿದೆ.

Propose Day 2023: ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ, ಇದರ ಮಹತ್ವ, ಇತಿಹಾಸ ಇಲ್ಲಿದೆ
Propose Day
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 07, 2023 | 5:51 PM

ಪ್ರಣಯ ಸಂಬಂಧದಲ್ಲಿರುವ ಸಂಗಾತಿಗಳಿಗೆ ಪ್ರಪೋಸ್ ಡೇ (Propose Day 2023) ಯು ಮಹತ್ವದ ದಿನವಾಗಿದೆ. ತಾವು ಪ್ರೀತಿಸುವ ವ್ಯಕ್ತಿಗೆ ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುವ ದಿನವಾಗಿದೆ. ಈ ದಿನದ ಮಹತ್ವ ಮತ್ತು ಇತಿಹಾಸದ ಬಗ್ಗೆ ನೋಡೋಣಾ. ಈ ಬಾರಿಯ ಪ್ರೇಮಿಗಳ ವಾರದ ಪ್ರತಿ ದಿನವೂ ಪ್ರೀತಿ, ನಗು ಮತ್ತು ಸಂತೋಷವನ್ನು ಹೆಚ್ಚಿಸಲು ಸಿದ್ಧರಾಗಿ. ಪ್ರೇಮಿಗಳ ದಿನದ ವಾರವು ಫೆಬ್ರವರಿ 7ರ ಗುಲಾಬಿ ದಿನದಂದು ಪ್ರಾರಂಭವಾಗುತ್ತದೆ ಮತ್ತು 14 ಫೆಬ್ರವರಿಯ ಪ್ರೇಮಿಗಳ ದಿನದವರೆಗೆ ಇರುತ್ತದೆ.

ಪ್ರೇಮಿಗಳ ವಾರದ ಪ್ರತಿ ದಿನವೂ ವಿಭಿನ್ನ ರೀತಿಯಲ್ಲಿ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮೀಸಲಾಗಿರುತ್ತದೆ. ಪ್ರೇಮಿಗಳ ವಾರದ ಎರಡನೇ ದಿನವಾದ ಪ್ರಪೋಸ್ ಡೇಯಂದು ನಿಮ್ಮ ಪ್ರೀತಿಯನ್ನು ನೀವು ಪ್ರೀತಿಸುವ ಜೀವಕ್ಕೆ ತಿಳಿಸಲು ಸಿದ್ಧರಾಗಿ. ಜನರು ತಮ್ಮ ಸಂಬಂಧದಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ತಮ್ಮ ಸಂಗಾತಿಗೆ ಪ್ರಣಯ ಅಥವಾ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಲು ಈ ದಿನವನ್ನು ಬಳಸಲಾಗುತ್ತದೆ. ಈ ಪ್ರಪೋಸ್ ಡೇ ದಿನ, ವಿಶೇಷತೆ ಮತ್ತು ಇತಿಹಾಸದ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.

ಪ್ರಪೋಸ್ ಡೇ ಯಾವಾಗ?

ಪ್ರೇಮಿಗಳ ವಾರದ ಆಚರಣೆಯ ಭಾಗವಾಗಿ ಪ್ರತಿವರ್ಷ ಫೆಬ್ರವರಿ 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ರೋಸ್ ಡೇಯನ್ನು ಅನುಸರಿಸಿ, ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿ ಮತ್ತು ಒಲವು ವ್ಯಕ್ತಪಡಿಸಲು ವ್ಯಾಲೆಂಟೈನ್ಸ್ ವಾರದ ಎರಡನೆ ದಿನದಂದು ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ.

ಪ್ರಪೋಸ್ ಡೇ ಯ ಮಹತ್ವ:

ಪ್ರಣಯ ಸಂಬಂಧದಲ್ಲಿರುವ ಸಂಗಾತಿಗಳಿಗೆ ಪ್ರಪೋಸ್ ಡೇಯು ಮಹತ್ವದ ದಿನವಾಗಿದೆ. ತಾವು ಪ್ರೀತಿಸುವ ವ್ಯಕ್ತಿಗೆ ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸುವ ದಿನವಾಗಿದೆ. ಈ ದಿನವನ್ನು ಅನೇಕರ ಸಂಬಂಧದಲ್ಲಿ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ ಹಾಗೂ ಇದು ಇಬ್ಬರು ವ್ಯಕ್ತಿಗಳ ನಡುವಿನ ಬದ್ಧತೆ ಮತ್ತು ಪ್ರೀತಿಯ ಸಂಕೇತವಾಗಿದೆ.

ಇದನ್ನೂ ಓದಿ:Propose Day Gift Ideas: ಪ್ರಪೋಸ್ ಮಾಡಲು ಈ ಉಡುಗೊರೆಗಳನ್ನು ನೀಡಿ ! ಇವುಗಳು ಪ್ರೀತಿಯ ಸಂಕೇತ

ಈ ದಿನದಂದು, ಅನೇಕ ಜನರು ತಮ್ಮ ಸಂಗಾತಿಗೆ ವಿಶೇಷ ಉಡುಗೊರೆಯನ್ನು ನೀಡುವ ಮೂಲಕ ಅಥವಾ ಪ್ರಣಯ ಪ್ರವಾಸವನ್ನು ಯೋಜಿಸುವ ಮೂಲಕ ವಿಶೇಷ ಮತ್ತು ಸ್ಮರಣೀಯ ರೀತಿಯಲ್ಲಿ ಪ್ರಪೋಸ್ ಮಾಡುತ್ತಾರೆ. ಇದು ಪ್ರೀತಿ ಮತ್ತು ಬದ್ಧತೆಯನ್ನು ಆಚರಿಸಲು ಮತ್ತು ಒಟ್ಟಿಗೆ ಭವಿಷ್ಯದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುವ ದಿನವಾಗಿದೆ.

ಪ್ರಪೋಸ್ ಡೇ ಯ ಇತಿಹಾಸ:

ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್ ಆಚರಣೆಯ ಭಾಗವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಇದನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಾಲೆಂಟೈನ್ಸ್ ವಾರದ ಮೂಲಗಳು ಮತ್ತು ಅದರ ಸಂಬಂಧಿತ ದಿನಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾರಂಭವಾಯಿತು ಹಾಗೂ ನಂತರದಲ್ಲಿ ಭಾರತ ಸೇರಿದಂತೆ ಇತರ ದೇಶಗಳಿಗೆ ಹರಡಿತು ಎಂದು ನಂಬಲಾಗಿದೆ.

ಪ್ರಪೋಸ್ ಡೇ ಇತಿಹಾಸದ ಬಗ್ಗೆ ಹೆಚ್ಚಿನ ದಾಖಲೆಗಳಿಲ್ಲ ಮತ್ತು ಅದರ ಮೂಲವು ಅಸ್ಪಷ್ಟವಾಗಿದೆ. ಕೆಲವೊಂದು ಮಾಹಿತಿಯ ಪ್ರಕಾರ 1477ರಲ್ಲಿ ಆಸ್ಟಿಯನ್ ರಾಜಕುಮಾರ ಮ್ಯಾಕ್ಸಿಮಿಲಿಯನ್, ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ತೊಡಿಸುವ ಮೂಲಕ ಪ್ರಪೋಸ್ ಮಾಡಿದನೆಂದು ನಂಬಲಾಗಿದೆ. 1816ರಲ್ಲಿ ತನ್ನ ಭಾವಿ ಪತಿಯೊಂದಿಗೆ ರಾಜಕುಮಾರಿ ಷಾರ್ಲೆಟ್ ಅವರ ನಿಶ್ವಿತಾರ್ಥವು ಮಹತ್ವದ ಚರ್ಚೆಯಲ್ಲಿತ್ತು ಹಾಗೂ ಈ ದಿನವನ್ನು ವ್ಯಾಲೆಂಟೈನ್ಸ್ ವೀಕ್‌ನ ಪ್ರಪೋಸ್ ಡೇ ಆಗಿ ಆಚರಿಸಲಾಯಿತು. ಪ್ರಪೋಸ್ ಡೇ ಆಚರಣೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ ಹಾಗೂ ಈಗ ಜಗತ್ತಿನ ಎಲ್ಲಾ ಕಡೆ ಸಂಗಾತಿಗಳು ಇದನ್ನು ವ್ಯಾಪಕವಾಗಿ ಆಚರಿಸುತ್ತಾರೆ.

Published On - 5:51 pm, Tue, 7 February 23

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ