Propose Day 2023: ನೀವು ಯಾರೊಂದಿಗಾದರೂ ಪ್ರೀತಿ ವ್ಯಕ್ತ ಪಡಿಸಲು ಬಯಸಿದರೆ, ಈ ದಿನ ಶುಭದಿನ

ಪ್ರತಿಯೊಬ್ಬರೂ ಪ್ರೀತಿಯಲ್ಲಿ ಬೀಳುವುದು ಸಹಜ. ಆದರೆ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ನೀವು ನಿಮ್ಮ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಳ್ಳಲು ಇಂದು(ಫೆ. 08) ಉತ್ತಮ ದಿನವಾಗಿದೆ.

Propose Day 2023: ನೀವು ಯಾರೊಂದಿಗಾದರೂ ಪ್ರೀತಿ ವ್ಯಕ್ತ ಪಡಿಸಲು ಬಯಸಿದರೆ, ಈ ದಿನ ಶುಭದಿನ
ಪ್ರಪೋಸ್ ಡೇ Image Credit source: Amar Ujala
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Feb 08, 2023 | 7:00 AM

ಪ್ರತಿಯೊಬ್ಬರೂ ಪ್ರೀತಿಯಲ್ಲಿ ಬೀಳುವುದು ಸಹಜ. ಆದರೆ ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ನೀವು ನಿಮ್ಮ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಳ್ಳಲು ಇಂದು(ಫೆ. 08) ಉತ್ತಮ ದಿನವಾಗಿದೆ. ಯಾಕೆಂದರೆ ಪ್ರತಿ ವರ್ಷ ಫೆಬ್ರವರಿ 8ರಂದು ವಿಶ್ವದಾದ್ಯಂತ ಪ್ರಪೋಸ್ ಡೇ(Propose Day) ಎಂದು ಆಚರಿಸಲಾಗುತ್ತದೆ. ಇಂದು ನೀವು ಮುಕ್ತವಾಗಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಬಹುದಾಗಿದೆ. ಈ ದಿನ ಬರೀ ಪ್ರೇಮಿಗಳಿಗೆ ಮಾತ್ರವಲ್ಲ ನಿಮ್ಮ ಸಂಗಾತಿಯೊಂದಿಗೆ ಕೂಡ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳಿಕೊಳ್ಳಬಹುದು. ಈ ವಾರ ಪೂರ್ತಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಪರಸ್ಪರ ಪ್ರೀತಿಯನ್ನು ಹಂಚುತ್ತಾ, ಉಡುಗೊರೆಯನ್ನು ನೀಡುತ್ತಾ ಸುಂದರ ಕ್ಷಣಗಳನ್ನು ಕಳೆಯಿರಿ.

ಪ್ರೇಮಿಗಳ ವಾರದ ಮೊದಲೇ ದಿನ ರೋಸ್​​ ಡೇ ಎಂದು ಆಚರಿಸಿದರೆ, ಎರಡನೇ ದಿನದಂದು ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ. ಹೀಗೆ ಪ್ರೇಮಿಗಳ ದಿನಾಚರಣೆಯ ವರೆಗೆ ಹಗ್​ ಡೇ, ಕಿಸ್​​ ಡೇ, ಟೆಡ್ಡಿ ಡೇ ಹಾಗೂ ಚಾಕೋಲೇಟ್​​ ಡೇ ಮುಂತಾದ ದಿನಗಳನ್ನು ಆಚರಿಸಲಾಗುತ್ತದೆ. ಕೇವಲ ಒಡನಾಟವನ್ನು ಬಯಸುವವರು ಮಾತ್ರವಲ್ಲ, ಈಗಾಗಲೇ ಬದ್ಧ ಸಂಬಂಧದಲ್ಲಿರುವ ದಂಪತಿಗಳೂ ಸಹ,ಈ ದಿನದಂದು ತಮ್ಮ ಪ್ರೀತಿಪಾತ್ರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ, ಇದರ ಮಹತ್ವ, ಇತಿಹಾಸ ಇಲ್ಲಿದೆ

ನೀವು ಕೂಡ ಯಾರೊಂದಿಗಾದರೂ ಪ್ರೀತಿ ವ್ಯಕ್ತ ಪಡಿಸಲು ಬಯಸಿದರೆ ನಿಮ್ಮ ಸಂಗಾತಿಯನ್ನು ಅವರಿಗೆ ತುಂಬಾ ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಇಂದು ಅವರೊಂದಿಗೆ ಮುಕ್ತವಾಗಿ ಮಾತಾಡಿ. ಯಾವುದೇ ವಿಷದಲ್ಲೂ ನಾಚಿಕೆ ಪಡದಿರಿ. ನೀವು ಮುಕ್ತವಾಗಿ ಧೈರ್ಯದಿಂದ, ಅವರು ನಿಮಗೆ ಎಷ್ಟು ಮುಖ್ಯ ಎಂದು ಹೇಳಿ. ನೀವು ಧೈರ್ಯದಿಂದ ಅವರಿಗೆ ಭರವಸೆಯನ್ನು ನೀಡುವುದರಿಂದ ಅವರು ನಿಮ್ಮನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರೀತಿ ಪರಿಶುದ್ಧವಾಗಿದ್ದರೆ, ಅವರು ನಿಮ್ಮನ್ನು ಖಂಡಿತಾವಾಗಿಯೂ ಒಪ್ಪಿಕೊಳ್ಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ