Ragi Manni Recipe : ತುಂಬಾ ರುಚಿಕರ ಈ ರಾಗಿ ಮಣ್ಣಿ, ಒಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನ್ನುತ್ತೀರಾ!

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 16, 2024 | 2:06 PM

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರಾಗಿ ಮುದ್ದೆಯನ್ನೇ ಪ್ರಮುಖ ಆಹಾರವಾಗಿ ಸೇವಿಸುತ್ತಾರೆ. ಈ ಸಿರಿಧ್ಯಾನದಿಂದ ರಾಗಿ ದೋಸೆ, ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಇಡ್ಲಿ ಹೀಗೆ ರುಚಿಕರವಾದ ತಿಂಡಿ ತಿನಿಸುಗಳನ್ನು ಮಾಡಿ ಸವಿಯುತ್ತಾರೆ. ನೋಡುವುದಕ್ಕೆ ಕಂದು ಬಣ್ಣದ ಈ ಸಿರಿಧಾನ್ಯವು ದೇಹವನ್ನು ಗಟ್ಟಿ ಮುಟ್ಟಾಗಿಸಿ, ಆರೋಗ್ಯವನ್ನು ಕಾಪಾಡುತ್ತದೆ. ಈ ರಾಗಿಯಿಂದ ರುಚಿಕರವಾದ ರಾಗಿ ಮಣ್ಣಿ ಮಾಡಿ ಸವಿದರೆ ನಾಲಿಗೆಗೂ ರುಚಿ, ದೇಹಕ್ಕೂ ತಂಪು. ಸಣ್ಣ ಮಕ್ಕಳಿಗೆ ಈ ರಾಗಿ ಉತ್ತಮ ಆಹಾರವಾಗಿದೆ. ಮೃದುವಾಗಿರುವ ಈ ರಾಗಿ ಮಣ್ಣಿಯನ್ನು ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಷ್ಟ ಪಟ್ಟು ಸೇವಿಸುತ್ತಾರೆ.

Ragi Manni Recipe : ತುಂಬಾ ರುಚಿಕರ ಈ ರಾಗಿ ಮಣ್ಣಿ, ಒಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನ್ನುತ್ತೀರಾ!
Follow us on

ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದು, ಸೂರ್ಯನು ನೆತ್ತಿಯನ್ನು ಸುಡುತ್ತಿದ್ದಾನೆ. ಬಿಸಿ ಬಿಸಿಯಾದ ವಾತಾವರಣವಿರುವ ಕಾರಣ ಹೊರಗಡೆ ಕಾಲಿಡಲುಗುವುದಿಲ್ಲ. ಬಿಸಿಲಿನ ಝಳದಿಂದ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಸಮಯದಲ್ಲಿ ದೇಹದ ಉಷ್ಣವು ಅಧಿಕವಾಗಿರುವ ಕಾರಣ ತಂಪಾಗಿರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ದೇಹದ ಉಷ್ಣವನ್ನು ಕಡಿಮೆ ಮಾಡುವ ಆಹಾರಗಳಲ್ಲಿ ರಾಗಿಯೂ ಒಂದು. ಈ ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿರುವ ರಾಗಿಯಲ್ಲಿ ಪೌಷ್ಟಿಕಾಂಶಗಳು, ನಾರಿನಂಶ, ವಿಟಮಿನ್ ಗಳು ಮತ್ತು ಖನಿಜಾಂಶಗಳು ಹೇರಳವಾಗಿವೆ. ಹೀಗಾಗಿ ಈ ಬೇಸಿಗೆಯಲ್ಲಿ ರಾಗಿಯಿಂದ ವಿವಿಧ ಬಗೆಯ ರೆಸಿಪಿಗಳನ್ನು ಮಾಡಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ರಾಗಿ ಮಣ್ಣಿ ಮಾಡಲು ಬೇಕಾಗುವ ಸಾಮಗ್ರಿಗಳು :

* ರಾಗಿ ಹಿಟ್ಟು

* ಹಾಲು

* ಬೆಲ್ಲ

* ತುಪ್ಪ

* ನೀರು

* ಏಲಕ್ಕಿ

* ಒಣ ದ್ರಾಕ್ಷಿ ಹಾಗೂ ಗೋಡಂಬಿ

ಇದನ್ನೂ ಓದಿ: ಗರ್ಭಿಣಿಯರು ಏಕೆ ಹೆಚ್ಚು ನಿದ್ರೆ ಮಾಡಬೇಕು?

ರಾಗಿ ಮಣ್ಣಿ ಮಾಡುವ ವಿಧಾನ :

* ರಾಗಿ ಹಿಟ್ಟಿಗೆ ನೀರು ಹಾಕಿ ಚೆನ್ನಾಗಿ ಕಲೆಸಿ ರಾಗಿ ನೀರು ಸೋಸಿ ಪಾತ್ರೆಗೆ ಹಾಕಿಕೊಳ್ಳಿ.

* ಈ ರಾಗಿ ನೀರಿಗೆ ಬೆಲ್ಲದ ಪುಡಿ, ಹಾಲು ಹಾಗೂ ಏಲಕ್ಕಿಪುಡಿ ಸೇರಿಸಿಕೊಂಡು ಗಟ್ಟು ಇರದಂತೆ ಬೆರೆಸಿಕೊಳ್ಳಿ.

* ಈ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಕಡಿಮೆ ಉರಿಯಲ್ಲಿ ಬೇಯಲು ಬಿಡಿ.

* ಒಂದೆರಡು ಚಮಚ ಚಮಚ ತುಪ್ಪ ಸೇರಿಸಿ, ನಂತರದಲ್ಲಿ ಆಗಾಗ ಕೈಯಾಡಿಸುತ್ತಾ ಇರಿ.

* ಇಪ್ಪತ್ತು ನಿಮಿಷಕಾಲ ಬೇಯಲು ಬಿಟ್ಟರೆ ಈ ರಾಗಿ ಮಿಶ್ರಣವು ಗಟ್ಟಿಯಾಗುತ್ತದೆ.

* ಗಟ್ಟಿಯಾದ ಮಿಶ್ರಣವನ್ನು ತುಪ್ಪ ಸವರಿದ ಬಟ್ಟಲಿಗೆ ಸುರಿದು ಎಲ್ಲಾ ಕಡೆಗೆ ಸವರಿ ಬಿಡಿ.

* ಇದರ ಮೇಲೆ ಒಣದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ರಾಗಿ ಮಣ್ಣಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ