Pregnant Health: ಗರ್ಭಿಣಿಯರು ಏಕೆ ಹೆಚ್ಚು ನಿದ್ರೆ ಮಾಡಬೇಕು?

ಗರ್ಭಾವಸ್ಥೆಯು ಮಹಿಳೆಯರ ಜೀವನದ ಪ್ರಮುಖ ಘಟ್ಟವಾಗಿದೆ. ಒಂದು ಜೀವಕ್ಕೆ ಜನ್ಮ ನೀಡುವ ಸಂದರ್ಭದಲ್ಲಿ ಮಹಿಳೆಯಲ್ಲಿ ಸಾಕಷ್ಟು ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಆಗುತ್ತವೆ. ಈ ಸಮಯದಲ್ಲಿ ಎಷ್ಟು ಆರೋಗ್ಯವಾಗಿರುತ್ತಾರೋ ಅಷ್ಟೇ ಆರೋಗ್ಯವಂತ ಮಗು ಹುಟ್ಟುತ್ತದೆ. ಗರ್ಭಿಣಿಯರು ಕಡಿಮೆ ನಿದ್ರೆ ಮಾಡಿದರೆ ಅವರ ಆರೋಗ್ಯದ ಮೇಲಾಗುವ ಪರಿಣಾಮವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Pregnant Health: ಗರ್ಭಿಣಿಯರು ಏಕೆ ಹೆಚ್ಚು ನಿದ್ರೆ ಮಾಡಬೇಕು?
ಗರ್ಭಿಣಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 16, 2024 | 12:37 PM

ನಿದ್ರೆಯ ಸಮಸ್ಯೆ ಹೆಚ್ಚಿನ ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಸುಮಾರು ಶೇ.79ರಷ್ಟು ಗರ್ಭಿಣಿಯರು ನಿದ್ರಾಹೀನತೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಗರ್ಭಾವಸ್ಥೆಯ ಮಧುಮೇಹ, ಅಧಿಕ ರಕ್ತದೊತ್ತಡ, ಸೆಳೆತ, ಅಕಾಲಿಕ ಜನನ ಮತ್ತು ದೀರ್ಘಕಾಲದ ಹೆರಿಗೆಯಂತಹ ಅಪಾಯಗಳನ್ನು ಉಂಟುಮಾಡಬಹುದು. ಹಾರ್ಮೋನುಗಳ ಬದಲಾವಣೆಗಳು, ಆತಂಕ, ಆಸಿಡ್ ರಿಫ್ಲಕ್ಸ್, ಗೊರಕೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಕಾಲು ಸೆಳೆತ, ಬೆನ್ನು ನೋವು ಸೇರಿದಂತೆ ವಿವಿಧ ಅಂಶಗಳು ಗರ್ಭಿಣಿಯಲ್ಲಿ ನಿದ್ರೆಯ ಸಮಸ್ಯೆಗೆ ಕಾರಣವಾಗುತ್ತವೆ.

ಈ ಎಲ್ಲದರ ಜೊತೆಗೆ, ಒತ್ತಡ ಮತ್ತು ಆತಂಕವು ಗರ್ಭಿಣಿಯರ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ನಿದ್ರೆಯ ಕೊರತೆಯು ಅವರ ಪ್ರಸವಾನಂತರದ ಖಿನ್ನತೆಯನ್ನು ಹೆಚ್ಚಿಸಬಹುದು. ಗರ್ಭಾವಸ್ಥೆಯಲ್ಲಿ ಚಿಕಿತ್ಸೆ ನೀಡದ ನಿದ್ರಾ ಸಮಸ್ಯೆ ತಾಯಿಯ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು ಮತ್ತು ಹೆರಿಗೆಯ ನಂತರವೂ ದೀರ್ಘಕಾಲದ ನಿದ್ರಾ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಯಾವ ಭಂಗಿಯಲ್ಲಿ ನಿದ್ರೆ ಮಾಡಬೇಕು: ಯಾವ ಮಲಗುವ ಭಂಗಿಯು ಆರೋಗ್ಯಕ್ಕೆ ಒಳ್ಳೆಯದು?

ಈ ಹಿನ್ನೆಲೆಯಲ್ಲಿ ರಿನ್ಯೂ ಹೆಲ್ತ್‌ಕೇರ್‌ನ ಐವಿಎಫ್ ತಜ್ಞರು ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ರಾಜೀವ್ ಅಗರ್ವಾಲ್ ಗರ್ಭಾವಸ್ಥೆಯಲ್ಲಿ ಮಹಿಳೆಯರ ನಿದ್ರಾ ಭಂಗವನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ.

ಸ್ಥಿರವಾದ ನಿದ್ರೆಯ ವೇಳಾಪಟ್ಟಿ:

ಮಲಗಲು ಹೋಗುವುದು ಮತ್ತು ಪ್ರತಿದಿನ ಅದೇ ಸಮಯದಲ್ಲಿ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಇದು ವಾರಾಂತ್ಯಗಳಲ್ಲಿ ಸಹ, ನಿಮ್ಮ ದೇಹದ ನೈಸರ್ಗಿಕ ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಲಗಲು ಮಾತ್ರ ಹಾಸಿಗೆಯತ್ತ ಹೋಗಿ:

ಟಿವಿ ನೋಡುವುದು ಅಥವಾ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಂತಹ ಚಟುವಟಿಕೆಗಳಿಗೆ ನಿಮ್ಮ ಹಾಸಿಗೆಯನ್ನು ಬಳಸುವುದನ್ನು ತಪ್ಪಿಸಿ. ಇದು ನಿಮ್ಮ ದೇಹಕ್ಕೆ ಹಾಸಿಗೆಯ ಮೇಲೆ ಮಲಗುತ್ತಿದ್ದಂತೆ ನಿದ್ರೆ ಮಾಡಲು ಸಂಯೋಜಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ತಲೆ ಹೊಟ್ಟು ಸಮಸ್ಯೆಗೆ ರಾತ್ರಿ ಮಲಗುವ ಮುನ್ನ ಈ ರೀತಿ ಮಾಡಿ

ಕೆಫೀನ್ ಮತ್ತು ಚಾಕೊಲೇಟ್ ಸೇವನೆ ಮಿತಿಗೊಳಿಸಿ:

ಕೆಫೀನ್ ಮತ್ತು ಚಾಕೊಲೇಟ್ ಉತ್ತೇಜಕಗಳನ್ನು ಒಳಗೊಂಡಿರುತ್ತವೆ. ಅದು ನಿದ್ರೆಗೆ ಅಡ್ಡಿಪಡಿಸುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಇದು ನಿದ್ರೆಗೆ ತೊಂದರೆ ಮಾಡುತ್ತದೆ.

ಆತಂಕವನ್ನು ನಿರ್ವಹಿಸಿ:

ನಿದ್ರೆಯ ಸಮಸ್ಯೆಗಳಿಗೆ ಆತಂಕವು ಮುಖ್ಯ ಕಾರಣವಾಗಿದೆ. ಧ್ಯಾನ ಅಥವಾ ವ್ಯಾಯಾಮದಂತಹ ವಿಶ್ರಾಂತಿ ತಂತ್ರಗಳು ಆತಂಕವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಬೆಚ್ಚನೆ ಸ್ನಾನ ಅಥವಾ ಮಸಾಜ್:

ಬೆಚ್ಚನೆಯ ಸ್ನಾನ ಅಥವಾ ಮಸಾಜ್‌ಗಳು ಮಲಗುವ ಮುನ್ನ ವಿಶ್ರಾಂತಿ ಪಡೆಯಲು, ಒತ್ತಡವನ್ನು ನಿವಾರಿಸಲು ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಉತ್ತಮ ಮಾರ್ಗವಾಗಿದೆ.

ಸ್ಕ್ರೀನಿಂಗ್ ಸಮಯವನ್ನು ಕಡಿಮೆ ಮಾಡಿ:

ಎಲೆಕ್ಟ್ರಾನಿಕ್ ಸಾಧನಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಮಲಗುವ ಮುನ್ನ ಕನಿಷ್ಠ 1 ಗಂಟೆ ಮೊಬೈಲ್, ಕಂಪ್ಯೂಟರ್ ನೋಡುವುದರಿಂದ ದೂರವಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ