
ಇಂದು ಗಿಡ ನೆಟ್ಟು ಪರಿಸರವನ್ನು (Environment) ಉಳಿಸುವವರಿಗಿಂತ, ತಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು ಪ್ರಕೃತಿಯನ್ನು ಹಾಳುಗೆಡವುವರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಜನಗಳ ಮಧ್ಯೆ ಪರಿಸರದ ರಕ್ಷಣೆಗಾಗಿಯೇ ಸಾಲು ಮರದ ತಿಮ್ಮಕ್ಕರಂತಹ ಒಂದಷ್ಟು ಜನ ಇದ್ದಾರೆ. ಅವರಲ್ಲಿ ಮಹಾರಾಷ್ಟ್ರ ಮೂಲದ ಮಾಜಿ ಸೈನಿಕ ರಮೇಶ್ ಖರ್ಮಲೆ (Ramesh Kharmale) ಕೂಡಾ ಒಬ್ರು. ಇವರು ತಮ್ಮ ಬಿಡುವಿನ ಸಮಯದಲ್ಲಿ ಗಿಡಮರಗಳನ್ನು ನೆಟ್ಟು ಪ್ರಕೃತಿಯನ್ನು ರಕ್ಷಿಸುವಂತಹ ಕಾಯಕದಲ್ಲಿ ತೊಡಗಿದ್ದಾರೆ. ಇವರು ಇಲ್ಲಿಯವರೆಗೆ ಸುಮಾರು 450 ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟಿದ್ದು, ಈ ಮೂಲಕ ಬೋಳು ಬೆಟ್ಟಗಳನ್ನು ಹಸಿರು ತಾಣವಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಮಾಜಿ ಸೈನಿಕನ ಈ ಪರಿಸರ ಪ್ರೇಮ ನಮಗೆಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು.
ಪ್ರತಿ ವಾರಾಂತ್ಯದಲ್ಲಿ ರಮೇಶ್ ಖಾರ್ಮಲೆ ತಮ್ಮ ಹೆಂಡತಿ ಮಕ್ಕಳ ಜೊತೆ ಸೇರಿ ಪುಣೆಯ ಜುನ್ನಾರ್‌ನ ಬರಿದಾದ ಬೆಟ್ಟ-ಗುಡ್ಡಗಳಲ್ಲಿ ಗಿಡ ಮರಗಳನ್ನು ನೆಡುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗೆ ಗಿಡ ಮರಗಳನ್ನು ನೆಡುವ ಮೂಲಕ ಮಾಜಿ ಯೋಧ ರಮೇಶ್ ಪರಿಸರ ರಕ್ಷಕನಾಗಿ ಗುರುತಿಸಿಕೊಂಡಿದ್ದಾರೆ.
ರಮೇಶ್ ತಮ್ಮ ಪತ್ನಿ ಸ್ವಾತಿ ಹಾಗೂ ಮಕ್ಕಳಾದ ಮಯೂರೇಶ್ ಮತ್ತು ವೈಷ್ಣವಿಯ ಜೊತೆ ಸೇರಿ ಬರಿದಾದ ಬೆಟ್ಟ ಗುಡ್ಡಗಳನ್ನು ಹಸಿರು ತಾಣವನ್ನಾಗಿ ಪರಿವರ್ತಿಸುವತ್ತ ಶ್ರಮಿಸುತ್ತಿದ್ದಾರೆ. ಬರಿದಾಗ ಗುಡ್ಡಗಳಲ್ಲಿ ಅಲ್ಲಲ್ಲಿ ಗುಂಡಿ ಅಗೆದು ಗಿಡಗಳನ್ನು ನೆಡುವ ಮೂಲಕ ಹಾಗೂ ಗಿಡಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಮಳೆ ನೀರನ್ನು ಮರುಪೂರಣ ಮಾಡಬಹುದಾದ ಸರ್ಪೆಂಟೈನ್ ಹೊಂಡಗಳನ್ನು ನಿರ್ಮಿಸುವ ಮೂಲಕ ಪರಿಸರವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಇವರು ಇಲ್ಲಿಯವರೆಗೆ ಬರೋಬ್ಬರಿ 450 ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟಿದ್ದು, ಇವರ ಈ ಕಾಯಕ ನಮಗೆಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು.
“ಪರಿಸರ ಸಂರಕ್ಷಣೆ ನನ್ನ ಉತ್ಸಾಹ ಜೊತೆ ಜೊತೆಗೆ ಅದು ನನ್ನ ಕರ್ತವ್ಯವೂ ಆಗಿದೆ, ಎರಡು ತಿಂಗಳುಗಳಲ್ಲಿ 300 ಗಂಟೆಗಳ ಕಾಲ ಬೆಟ್ಟದ ಇಳಿಜಾರಿನಲ್ಲಿ 70 ಹೊಂಡಗಳನ್ನು ತೋಡಿದ್ದೇನೆ. ಪ್ರತಿದಿನ ಬೆಳಕ್ಕೆ ನಾನು ನಾನು ಪರ್ವತದ ತುದಿಯಲ್ಲಿ ನಾಲ್ಕು ಗಂಟೆಗಳ ಕಾಲ ನೀರನ್ನು ಹೀರಿಕೊಳ್ಳುವ ಕಂದಕಗಳನ್ನು ಅಗೆಯುತ್ತಿದ್ದೆ” ಎಂದು ಖರ್ಮಲೆ ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಜುನ್ನಾರ್‌ನ ಪ್ರವಾಸಿ ತಾಣಗಳನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿಸುವನಮ್ಮ ಧ್ಯೇಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
“ನಾವು ಕಳೆದ ಜುಲೈನಲ್ಲಿ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರಳಿ ಮರ, ಅತ್ತಿ ಮರ, ಮಹಾಗನಿ, ಬೇವು, ಬಿದಿರಿನಂತ ಕಾಡು ಗಿಡಗಳನ್ನು ನೆಡಲು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೂ ಇಂತಹ 175 ಗಿಡಗಳನ್ನು ನೆಟ್ಟಿದ್ದೇವೆ ನಾಲ್ಕು ಕೊಳಗಳನ್ನು ಸಹ ನಿರ್ಮಿಸಿದ್ದೇವೆ. ಉದ್ಯಾನವನಕ್ಕೆ ಜಾನುವಾರುಗಳು ಪ್ರವೇಶಿಸುವುದನ್ನು ತಡೆಯಲು, ನಾವು ಉದ್ದವಾದ ಕಂದಕಗಳನ್ನು ಅಗೆದಿದ್ದೇವೆ. ಒಂದು ಕಾಲದಲ್ಲಿ, ಬರಿದಾಗಿದ್ದ ಈ ಭೂಮಿ ಇಂದು ನೂರಾರು ಪಕ್ಷಿಗಳನ್ನು ಆಕರ್ಷಿಸುತ್ತಿದೆ” ಎಂದು ರಮೇಶ್ ಪತ್ನಿ ಸ್ವಾತಿ ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯನ್ನೇ ಉದ್ಯಾನವನವನ್ನಾಗಿ ಪರಿವರ್ತಿಸಿದ ಬೆಂಗಳೂರಿನ ದಂಪತಿ; ಹೇಗಿದೆ ನೋಡಿ ಮಿನಿ ಕಾಡು ಮನೆ
ಪರಿಸರ ಸಂರಕ್ಷಣೆಯ ಪಾಠ:
ರಮೇಶ್ ಖರ್ಮಲೆ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಅಭಿಯಾನಗಳು ಮತ್ತು ತರಬೇತಿ ಅವಧಿಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರನ್ನು ತಮ್ಮ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಇಲ್ಲಿಯವರೆಗೆ ಥಾಣೆ, ಕೊಲ್ಹಾಪುರ, ಬಾರಾಮತಿ, ಸೋಲಾಪುರ, ನಾಸಿಕ್, ಕರಾದ್, ಪುಣೆ ಮತ್ತು ಸಾಂಗ್ಲಿಯ ಸುಮಾರು 400 ಕ್ಕೂ ಹೆಚ್ಚು ಶಾಲೆಗಳಿಗೆ ತಮ್ಮ ಖರ್ಚಿನಲ್ಲಿ ಭೇಟಿ ನೀಡಿ ಸುಸ್ಥಿರ ಅರಣ್ಯ ಬೆಳವಣಿಗೆ, ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ, ಜೀವವೈವಿಧ್ಯ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಿದ್ದಾರೆ. ಅಲ್ಲದೆ ಇವರು ಸೋಷಿಯಲ್ ಮೀಡಿಯಾದ ಮೂಲಕ ಹೊಂಡ ಅಗೆಯುವಿಕೆ ಮತ್ತು ಬೀಜ ಸಂರಕ್ಷಣೆಯ, ಗಿಡ ನೆಡುವುದು ಸೇರಿದಂತೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Wed, 11 June 25