ಸಾಂದರ್ಭಿಕ ಚಿತ್ರ
ಕೆಲವರ ಮನೆಯಲ್ಲಿ ಇಲಿಗಳದ್ದೇ ರಾಶಿ ಇರುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ತುಂಡರಿಸುವ ಇವುಗಳಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನೆ ಹೆಚ್ಚು ಅವಲಂಬಿಸಿರುತ್ತಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬಗೆಯ ಇಲಿ ಔಷಧಿಗಳು ಲಭ್ಯವಿವೆ. ಇದನ್ನು ಬಳಸಿ ಈ ಇಲಿಗಳನ್ನು ದೂರವಿಡಬಹುದಾದರೂ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಯೇ ಅಧಿಕ.
ಇಲಿಗಳ ಕಾಟಕ್ಕೆ ಸುಲಭವಾದ ಮನೆ ಮದ್ದುಗಳು
- ಮನೆಯಲ್ಲಿ ಇಲಿಗಳು ತುಂಬಿ ಕೊಂಡಿದ್ದರೆ ಅವುಗಳ ಓಡಾಡುವ ಸ್ಥಳ ಗಳಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿದರೆ ಇಲಿಗಳು ಓಡಿ ಹೋಗುತ್ತವೆ.
- ಮನೆಯ ಮೂಲೆಗಳಲ್ಲಿ ಅಥವಾ ಸಂಧಿಗಳಲ್ಲಿ ಕರ್ಪೂರದ ತುಂಡುಗಳನ್ನು ಇಡುವ ಮೂಲಕ ಇಲಿಗಳ ಕಾಟಕ್ಕೆ ಮುಕ್ತಿ ಹಾಡುವುದು ತುಂಬಾನೇ ಸುಲಭ.
- ಮನೆಯಲ್ಲಿ ಇಲಿಗಳ ಕಾಟವಿದ್ದರೆ ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನೆಸಿಟ್ಟು, ಬಳಿಕ ಆ ನೀರನ್ನು ಮನೆಯ ಮೂಲೆಗಳಲ್ಲಿ ಸಂಧಿಗಳಿಗೆ ಸಿಂಪಡಿಸಿದರೆ ಇಲಿಗಳು ಅತ್ತ ಸುಳಿಯುವುದೇ ಇಲ್ಲ.
- ಇಲಿಗಳು ಹೆಚ್ಚಾಗಿ ಕಾಣಸಿಗುವ ಸ್ಥಳಗಳಲ್ಲಿ ಅಡುಗೆ ಸೋಡಾವನ್ನು ಸಿಂಪಡಿಸಿ ಬೆಳಗ್ಗೆ ಆ ಜಾಗವನ್ನು ಸ್ವಚ್ಛಗೊಳಿಸಿದರೆ ಇಲಿಗಳು ಬರುವುದಿಲ್ಲ.
- ಇಲಿಗಳು ಕಾಣ ಸಿಗುವ ಸ್ಥಳಗಳಲ್ಲಿ ಈರುಳ್ಳಿ ಸಿಪ್ಪೆಯನ್ನು ಅಥವಾ ಈರುಳ್ಳಿಯನ್ನು ಇಟ್ಟರೆ ತಕ್ಷಣವೇ ಇಲಿಗಳು ಓಡಿ ಹೋಗುತ್ತವೆ.
- ಇಲಿಗಳು ಕಾಣಿಸಿಕೊಳ್ಳುವ ಸಂಧಿಗಳಲ್ಲಿ ಪುದೀನಾ ನೀರನ್ನು ಸ್ಪ್ರೇ ಮಾಡಿದರೆ ಇಲಿಗಳನ್ನು ಸುಲಭವಾಗಿ ಓಡಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ