ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿಯಾಗಿಲ್ಲವೇ?; ಇಲ್ಲಿವೆ 5 ಕಾರಣಗಳು

|

Updated on: Apr 13, 2024 | 12:23 PM

ಮದುವೆ ಎರಡು ಜೀವಗಳನ್ನು, ಎರಡು ಕುಟುಂಬಗಳನ್ನು ಬೆಸೆಯುವ ಪವಿತ್ರವಾದ ಬಂಧ. ಆದರೆ, ಮದುವೆಯಾಗಿ 1 ವರ್ಷವಾಗುವುದರೊಳಗೆ ಪರಸ್ಪರರ ನಡುವಿನ ಆಕರ್ಷಣೆ ಕಡಿಮೆಯಾಗಿ, ಅವರ ಸಂಬಂಧವೂ ಹಳಸಲಾರಂಭಿಸುವ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.

ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿಯಾಗಿಲ್ಲವೇ?; ಇಲ್ಲಿವೆ 5 ಕಾರಣಗಳು
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಕೆಲವರು ದಾಂಪತ್ಯದಲ್ಲಿ ನಾವು ಸಂತೋಷವಾಗಿಲ್ಲ ಎಂದು ಭಾವಿಸುತ್ತಾರೆ. ಒಬ್ಬರ ಬಗ್ಗೆ ಇನ್ನೊಬ್ಬರು ಜಡ್ಜ್​ಮೆಂಟಲ್ ಆಗಿರುವುದು, ಒಬ್ಬರ ತಪ್ಪುಗಳನ್ನು ಮತ್ತೊಬ್ಬರು ಎತ್ತಿ ತೋರಿಸುವುದು ಹೀಗೆ ಅದಕ್ಕೆ ಕಾರಣಗಳ ಪಟ್ಟಿ ಬೆಳೆಯುತ್ತದೆ. ಕಾಲಾನಂತರದಲ್ಲಿ ಗಂಡ-ಹೆಂಡತಿ ಮಾತನಾಡಬಹುದಾದ ವಿಷಯಗಳ ಪಟ್ಟಿಯು ಅತ್ಯಂತ ಸೀಮಿತವಾಗುತ್ತದೆ. ಅವರ ಸಂಬಂಧವು ಹೆಚ್ಚು ಹೆಚ್ಚು ನೀರಸವಾಗುತ್ತದೆ. ಇಬ್ಬರಲ್ಲೂ ಅತೃಪ್ತಿ ಹೆಚ್ಚುತ್ತದೆ.

ಮದುವೆಯಾದ ಬಳಿಕ ಸಂತೋಷವನ್ನು ಕಳೆದುಕೊಳ್ಳಲು ಕಾರಣವಾಗುವ 5 ವಿಷಯಗಳಿವು…

1. ನಾವು ಸಂತೋಷವನ್ನು ಹುಡುಕುತ್ತಿರುವಾಗ, ನಮ್ಮ ದಾರಿಯಲ್ಲಿ ಬರುವ ಎಲ್ಲದರ ಬಗ್ಗೆ ನಾವು ಅತೃಪ್ತಿ ಅನುಭವಿಸಬಹುದು. ಅದರ ಬದಲಾಗಿ, ನಾವು ಒಟ್ಟಿಗೆ ಸಂತೋಷದ ನೆನಪುಗಳನ್ನು ರಚಿಸುವತ್ತ ಗಮನಹರಿಸಬೇಕು.

ಇದನ್ನೂ ಓದಿ: ನೀವು ನಿಮ್ಮ ಸಂಬಂಧದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

2. ನಮ್ಮ ಸಂಗಾತಿಯು ಬಯಸಿದ ರೀತಿಯಲ್ಲಿ ನಾವು ಮಾತನಾಡಬಾರದು ಅಥವಾ ವರ್ತಿಸಬಾರದು. ಬದಲಾಗಿ, ನಾವು ನಮ್ಮ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು ಮತ್ತು ನಮ್ಮೊಂದಿಗೆ ಪ್ರಾಮಾಣಿಕವಾಗಿರಬೇಕು ಎಂಬ ಭಾವನೆ.

3. ನಾವು ಕೆಲವು ಬಾರಿ ಕೀಳರಿಮೆಯನ್ನು ಅನುಭವಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ ನಾವು ಅದರ ಬಗ್ಗೆ ನಮ್ಮ ಸಂಗಾತಿಯೊಂದಿಗೆ ಮಾತನಾಡಬೇಕು ಮತ್ತು ಸಂಬಂಧದಲ್ಲಿ ಅಗತ್ಯವಾದ ಆರೋಗ್ಯಕರ ಬದಲಾವಣೆಗಳನ್ನು ತರಬೇಕು.

ಇದನ್ನೂ ಓದಿ: Snoring: ಸಂಗಾತಿಯ ಗೊರಕೆಯಿಂದ ನಿದ್ರೆ ಮಾಡಲು ಆಗುತ್ತಿಲ್ಲವೇ? ಹೀಗೆ ಮಾಡಿ

4. ನಮ್ಮ ಸಂಗಾತಿಯು ಹೇಗಿದ್ದಾರೆಂದು ನಿರ್ಣಯಿಸುವ ಬದಲು, ನಾವು ಅವರನ್ನು ಅಧ್ಯಯನ ಮಾಡಲು ಪ್ರಯತ್ನಿಸಬೇಕು. ನಮ್ಮ ದಾಂಪತ್ಯ ಹಳಿ ತಪ್ಪಲು ಆಧಾರವಾಗಿರುವ ಕಾರಣಗಳನ್ನು ಕಂಡುಹಿಡಿಯಬೇಕು.

5. ಹಳೆಯ ಘಟನೆಗಳನ್ನು ಕೆದಕುತ್ತಾ, ಹೀಯಾಳಿಸುತ್ತಾ ಇರಬಾರದು. ಹಳೆಯದನ್ನು ಅಲ್ಲಿಗೇ ಬಿಟ್ಟು ಮುಂದಿನ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ