ತಿನ್ನುವ ಮೊದಲು ನೆನೆಸಿಡಬೇಕಾದ 5 ಆಹಾರಗಳಿವು
ನಾವು ಯಾವ ರೀತಿಯ ಆಹಾರಗಳನ್ನು ಸೇವಿಸುತ್ತೇವೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಉತ್ತಮ ಪೌಷ್ಟಿಕಾಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಕೆಲವೊಂದು ಆಹಾರಗಳನ್ನು ತಿನ್ನುವ ಮೊದಲು ನೆನೆಸಿದರೆ ಒಳ್ಳೆಯದು.
ನಾವು ತಿನ್ನುವ ಮೊದಲು ಕೆಲವು ಆಹಾರಗಳನ್ನು ನೆನೆಸಿಟ್ಟರೆ ಅದರಿಂದ ಪ್ರಯೋಜನಗಳು ಹೆಚ್ಚು. ಅವುಗಳಲ್ಲಿ ಕಿಡ್ನಿ ಬೀನ್ಸ್, ಬಾದಾಮಿ, ಓಟ್ಸ್, ಕಡಲೆ, ಸೋಯಾಬೀನ್ಸ್ ಕೂಡ ಸೇರಿದೆ. ಈ ಆಹಾರ ಪದಾರ್ಥಗಳನ್ನು ನೆನೆಸುವುದರಿಂದ ಏನೆಲ್ಲ ಉಪಯೋಗಗಳಿವೆ, ಅದನ್ನು ಬಳಸುವುದು ಹೇಗೆ? ಅವುಗಳನ್ನು ಏಕೆ ನೆನೆಸಿಡಬೇಕು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಕಿಡ್ನಿ ಬೀನ್ಸ್:
ಕಿಡ್ನಿ ಬೀನ್ಸ್ ಪ್ರಮುಖ ಕಾಳುಗಳಲ್ಲಿ ಒಂದಾಗಿದೆ. ಇದು ನೆನೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಫೈಟಿಕ್ ಆಸಿಡ್ ಮತ್ತು ಲೆಕ್ಟಿನ್‌ಗಳನ್ನು ವಿಭಜಿಸಲು ಕಿಡ್ನಿ ಬೀನ್ಸ್ ಅನ್ನು ನೆನೆಸಿಡುವುದು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕೆ ಆಗುವ 5 ಪ್ರಯೋಜನಗಳು ಇಲ್ಲಿವೆ
ಕಡಲೆ:
ಕಡಲೆಯನ್ನು ನೆನೆಸದೇ ಹಾಗೇ ಬೇಯಿಸುವುದು ಕಷ್ಟ. ನೆನೆಸುವುದರಿಂದ ಕಡಲೆ ಮೃದುಗೊಳ್ಳುತ್ತದೆ. ಇದರಿಂದ ಕಡಲೆ ಹಾಕಿ ಮಾಡುವ ಅಡುಗೆ ಸಹ ರುಚಿಕರವಾಗುತ್ತದೆ.
ಸೋಯಾಬೀನ್:
ಸೋಯಾಬೀನ್ ಅನ್ನು ಮೃದುಗೊಳಿಸಲು ನೆನೆಸಬೇಕು. ಇದು ಅಡುಗೆ ಮತ್ತು ಸರಿಯಾದ ಜೀರ್ಣಕ್ರಿಯೆಯನ್ನು ಸಹ ಉತ್ತೇಜಿಸುತ್ತದೆ. ಸೋಯಾಬೀನ್‌ಗಳನ್ನು ನೆನೆಸುವುದು ಜೀರ್ಣಕ್ರಿಯೆಯ ಸಮಯದಲ್ಲಿ ಅನಿಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಓಟ್ಸ್:
ಓಟ್ಸ್ ಅನ್ನು ನೆನೆಸುವುದು ಪೋಷಕಾಂಶಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಅನುಕೂಲಗಳಿವೆ.
ಇದನ್ನೂ ಓದಿ: ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ
ಬಾದಾಮಿ:
ಬಾದಾಮಿಯು ದೀರ್ಘಕಾಲ ನೆನೆಸಿದ ಬೀಜಗಳಾಗಿವೆ. ಅದು ನೆನೆಯಲು ಕನಿಷ್ಠ 8 ಗಂಟೆಗಳ ಅಗತ್ಯವಿದೆ. ಇದು ಜೀರ್ಣಕ್ರಿಯೆಯ ಸಾಧ್ಯತೆಯನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಶುದ್ಧೀಕರಿಸುವ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಕ್ರಿಯಗೊಳಿಸುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ