Kannada News Lifestyle Relationship Tips : Mother must teach these things to daughter before marriage Kannada News
Relationship Tips : ಪ್ರತಿ ಹೆಣ್ಣು ಮಗಳಿಗೆ ತಾಯಿಯು ಈ ವಿಷಯ ಕಲಿಸಿಕೊಟ್ರೆ ಜೀವನ ಸುಖಕರವಾಗಿರುವುದು ಗ್ಯಾರಂಟಿ
ಮದುವೆ ಎನ್ನುವುದು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟ. ಈ ವೇಳೆಯಲ್ಲಿ ಹೊಸ ಮನೆ, ಸದಸ್ಯರು ಹಾಗೂ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅದಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಮಾನಸಿಕವಾದ ಸಿದ್ಧತೆಯು ಕೂಡ ಅಷ್ಟೇ ಮುಖ್ಯ. ಈ ಸಮಯದಲ್ಲಿ ಹೆಣ್ಣಿನ ತಾಯಿಯು ಈ ಕೆಲವು ವಿಚಾರಗಳ ಬಗ್ಗೆ ಆಕೆಗೆ ಹೇಳಿಕೊಟ್ಟರೆ, ಮುಂದಿನ ಜೀವನವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ.
Follow us on
ಮದುವೆ ಎರಡು ಕುಟುಂಬಗಳ ಬೆಸುಗೆ ಮಾತ್ರವಲ್ಲದೇ ಎರಡು ಮನಸ್ಸುಗಳ ಸಮ್ಮಿಲನ. ಈ ಬಂಧದಿಂದ ಹೆಣ್ಣು ಗಂಡಿನ ಬದುಕಿನಲ್ಲಿ ಮಹತ್ತರದ ಬದಲಾವಣೆಯಾಗುತ್ತದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾಳೆಯಾದರೂ, ತನ್ನ ಜೀವಮಾನವನ್ನು ತನ್ನ ಪತಿ ಮಕ್ಕಳ ಸಂತೋಷಕ್ಕಾಗಿ ಮೀಸಲಿಡುತ್ತಾಳೆ. ಮದುವೆಗೆ ಕೆಲವೇ ಕೆಲವು ದಿನವಿರುವಾಗಲೇ ತನ್ನ ಗಂಡನ ಮನೆಯ ವಾತಾವರಣವು ಹೇಗಿರುತ್ತದೆಯೋ ಎನ್ನುವ ಸಣ್ಣ ಭಯವೊಂದು ಕಾಡುತ್ತದೆ. ಈ ವೇಳೆಯಲ್ಲಿ ಆ ಭಯವನ್ನು ದೂರ ಮಾಡುವ ಕೆಲಸದೊಂದಿಗೆ ಈ ಕೆಲವು ಸೂಕ್ಷ್ಮ ವಿಚಾರಗಳನ್ನು ತಾಯಿಯು ಮಗಳಿಗೆ ಹೇಳಿಕೊಡಲೇಬೇಕು.
ಎಲ್ಲಾ ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದಿರು : ಹೊಸ ಮನೆ ಎಂದ ಮೇಲೆ ಬೇರೆ ಬೇರೆ ಗುಣ ಸ್ವಭಾವ ಹೊಂದಿರುವ ಜನರಿರುತ್ತಾರೆ. ಕೆಲವರಿಗೆ ಹೊಸದಾಗಿ ಕಾಲಿಟ್ಟ ಹೆಣ್ಣು ಮಗಳ ನಡವಳಿಕೆಗಳು ಇಷ್ಟವಾಗದೇ ಇರಬಹುದು. ಈ ವೇಳೆಯಲ್ಲಿ ವಿರುದ್ಧವಾಗಿ ಮಾತನಾಡುವವರು ಇರುತ್ತಾರೆ. ಅತಿಯಾಗಿ ಪ್ರೀತಿ ಮಾಡುವವರ ಜನರ ನಡುವೆ ನಿನ್ನನ್ನು ಇಷ್ಟ ಪಡದವರ ಜನರ ಬಗ್ಗೆ ಹೆಚ್ಚು ಯೋಚಿಸುವುದು ಸರಿಯಲ್ಲ ಎಂದು ತಿಳಿ ಹೇಳುವುದು ಮುಖ್ಯ.
ಎಲ್ಲರೊಂದಿಗೆ ಬೆರೆತು ಬಾಳುವುದನ್ನು ಕಲಿ : ಹೆಣ್ಣು ತನ್ನ ತವರು ಮನೆಯಲ್ಲಿ ಹೇಗೆ ಇದ್ದರೂ ಕೂಡ ತನ್ನ ಗಂಡನ ಮನೆಯಲ್ಲಿ ಎಲ್ಲರನ್ನು ಮುನ್ನೆಡಿಸಿಕೊಂಡು ಹೋಗುವ ಜವಾಬ್ದಾರಿಯು ಹೆಗಲ ಮೇಲೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ತಾಯಿಯು ತನ್ನ ಎಲ್ಲರ ನಿರ್ಧಾರಗಳಿಗೆ ತಲೆಬಾಗಿ, ಕುಟುಂಬದ ಸಂತೋಷವನ್ನು ಅರಿತು ನಡೆಯುವುದು ಹೇಗೆ ಎನ್ನುವುದನ್ನು ಕಲಿಸಿಕೊಡಬೇಕು.
ಸಮಯವು ಎಲ್ಲ ಅನುಭವ ನೀಡುತ್ತದೆ : ಮದುವೆಯಾದ ಆರಂಭದ ದಿನಗಳಲ್ಲಿ ಹೊಂದಾಣಿಕೆ ಎನ್ನುವುದು ಕಷ್ಟವಾಗಬಹುದು. ಆದರೆ ದಿನ ಕಳೆಯುತ್ತ ಹೋದಂತೆ ಎಲ್ಲರನ್ನು ಹಾಗೂ ಎಲ್ಲವನ್ನು ಇಷ್ಟಪಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಯ ಕಳೆಯುತ್ತಿದ್ದಂತೆ ಜೀವನವು ಎಲ್ಲಾ ಅನುಭವವನ್ನು ನೀಡುತ್ತದೆ ಎಂದು ತಾಯಿಯು ತಿಳಿ ಹಳಬೇಕು.
ಸ್ವಾಭಿಮಾನದೊಂದಿಗೆ ರಾಜಿ ಬೇಡ : ಹೊಸ ಮನೆಯಲ್ಲಿ ಹೊಂದಿಕೊಳ್ಳುವ ವೇಳೆಯಲ್ಲಿ ತನ್ನ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಆದರೆ ಕೆಲವೊಮ್ಮೆ ಎಲ್ಲಾ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಜೀವನ ನಡೆಸುತ್ತಾರೆ. ಆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಹೇಗೆ ಬದುಕಬೇಕು ಎನ್ನುವ ಪಾಠವನ್ನು ತಾಯಿಯು ಮಗಳಿಗೆ ಬೋಧಿಸಬೇಕು.
ಕ್ಷಮಿಸುವ ಗುಣವಿರಲಿ : ಜೀವನದಲ್ಲಿ ತಪ್ಪು ಮಾಡದವರು ಯಾರಿಲ್ಲ ಹೇಳಿ, ಹೀಗಾಗಿ ಸಣ್ಣ ಪುಟ್ಟ ತಪ್ಪುಗಳಾದಾಗ ಕ್ಷಮೆ ಕೇಳುವುದರ ಜೊತೆ ಕ್ಷಮಿಸುವುದು ಗುಣವನ್ನು ಹೊಂದಿರಲೇಬೇಕು. ಕುಟುಂಬದಲ್ಲಿ ಸಣ್ಣ ಪುಟ್ಟ ತಪ್ಪುಗಳಾದಾಗ ಅದನ್ನು ದೊಡ್ಡದು ಮಾಡದೇ ಕ್ಷಮಿಸಿ ಮುನ್ನೆಡುವ ಬಗ್ಗೆ ತಾಯಿಯು ಮದುವೆಯಾಗಿ ಹೋಗುವ ಮಗಳಿಗೆ ತಿಳಿಸಬೇಕು.
ಆರ್ಥಿಕವಾಗಿ ಸದೃಢತೆ ಇರಲಿ: ಗಂಡನ ಮನೆಯ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದು ಎಷ್ಟು ಮುಖ್ಯವೋ ಅನಿವಾರ್ಯವೆನಿಸಿದಾಗ ಕೆಲಸಕ್ಕೆ ಹೋಗಬೇಕಾಗುತ್ತದೆ. ಕುಟುಂಬವನ್ನು ಮುನ್ನಡೆಸಲು ಸಂದರ್ಭ ಒದಗಿದಾಗ ಕೆಲಸದಲ್ಲಿ ತೊಡಗಿ ಆರ್ಥಿಕವಾಗಿ ಸದೃಢರಾಗು ಎನ್ನುವುದನ್ನು ಹೇಳಿಕೊಡುವುದು ತಾಯಿಯಾದವಳ ಕರ್ತವ್ಯವಾಗಿದೆ.
ಅತ್ತೆಯನ್ನು ತಾಯಿಯಂತೆ ಕಾಣುವ ಮನೋಭಾವವಿರಲಿ : ಮದುವೆಯ ಬಳಿಕ ಅತ್ತೆ ಮತ್ತು ಸೊಸೆ ಇಬ್ಬರನ್ನೂ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇಬ್ಬರಿಗೂ ಒಬ್ಬರಿಗೊಬ್ಬರು ಹೆಚ್ಚು ತಿಳಿದಿರುವುದಿಲ್ಲ. ಅತ್ತೆ ಕೆಲವೊಮ್ಮೆ ಒಂದು ಮಾತು ಜೋರಾಗಿಯೇ ಹೇಳಬಹುದು. ನಿನ್ನ ಒಳ್ಳೆಯದಕ್ಕೆ ಎಂದು ಭಾವಿಸಿ ಅತ್ತೆಯನ್ನು ತಾಯಿಯಾಗಿ ನೋಡುವುದನ್ನು ಕಲಿ ಎನ್ನುವ ಮಾತು ಮಗಳಿಗೆ ತಾಯಿ ಹೇಳಿಕೊಡುವುದರಿಂದ ಸಂಸಾರ ಸುಖಕರವಾಗಿ ಸಾಧ್ಯ.