ಸಂಗಾತಿಗಳ ನಡುವೆ ಕೋಪ ಉಂಟಾದಾಗ ಒಂದೆರಡು ಮಾತು ಬಾಯಿತಪ್ಪಿ ಬಂದು ಬಿಡುತ್ತದೆ. ಇಂತಹ ಸಮಯದಲ್ಲಿ ನಾವು ಅದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಜಗಳದ ಭರದಲ್ಲಿ ನಾವು ನಮ್ಮನ್ನು ಯಾರು ನೋಡುತ್ತಿದ್ದಾರೆ, ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ, ನಾವು ಹೇಳುವ ಮಾತಿನಿಂದ ನಮ್ಮ ಸಂಗಾತಿಯ ಮನಸಿಗೆ ಎಷ್ಟು ನೋವಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಯೋಚನೆ ಮಾಡುವುದೇ ಇಲ್ಲ.
ಬಹುತೇಕ ಸಂದರ್ಭಗಳಲ್ಲಿ ವಾದ ಮುಗಿದ ಬಳಿಕ ನಾವು ಏನು ಮಾತನಾಡಿದ್ದೇವೆ ಎಂಬುದನ್ನು ಸಂಗಾತಿಗಳು ಮರೆತುಬಿಡುತ್ತಾರೆ. ಆದರೆ, ಕೋಪದ ಭರದಲ್ಲಿ ಆಡಿದ ಕೆಲವು ಮಾತುಗಳು ಕೆಲವೊಮ್ಮೆ ಆಳವಾಗಿ ಬೇರೂರಿ ಬಿಡುತ್ತವೆ. ವಾದದ ಸಮಯದಲ್ಲಿ ಹೇಳುವ ಕೆಲವು ವಿಷಯಗಳು ಇತರ ವ್ಯಕ್ತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಬಹುದು. ಇದು ನಿಮ್ಮ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ನೀವು ಕೋಪದಲ್ಲಿ ಹೇಳಿದ ವಿಷಯಗಳು ಅವರನ್ನು ನಿಜವಾಗಿಯೂ ತೀವ್ರವಾಗಿ ನೋಯಿಸಬಹುದು. ಹೀಗಾಗಿ, ವಾದದ ಸಮಯದಲ್ಲಿ ಯಾವ ವಿಷಯಗಳನ್ನು ನೀವು ಮಾತನಾಡಬಾರದು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಹೆಚ್ಚಿಸುವ 8 ಪೌಷ್ಟಿಕ ಆಹಾರಗಳಿವು
ಅವರನ್ನು ಎಂದಿಗೂ ಯಾರೊಂದಿಗೂ ಹೋಲಿಸಬೇಡಿ:
ಪುರುಷ ಅಥವಾ ಮಹಿಳೆ ಯಾರೇ ಆಗಿರಲಿ. ಅವರು ತಮ್ಮ ಸಂಗಾತಿ ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ಇದು ಅವರಲ್ಲಿ ಅಸೂಯೆ, ಅಸುರಕ್ಷಿತ ಭಾವನೆಯನ್ನು ಮೂಡಿಸುತ್ತದೆ. ಹೀಗಾಗಿ, ನಿಮ್ಮ ಸಂಗಾತಿಯನ್ನು ಬೇರೆಯವರೊಂದಿಗೆ ಹೋಲಿಸಬೇಡಿ.
ಅವರ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆ ಬಗ್ಗೆ ಮಾತನಾಡಬೇಡಿ:
ಮಾನಸಿಕ ಆರೋಗ್ಯವು ಒಂದು ಸೂಕ್ಷ್ಮ ವಿಷಯವಾಗಿದೆ. ನಿಮ್ಮ ಸಂಗಾತಿ ಕೂಡ ಮಾನಸಿಕ ಸಮಸ್ಯೆ ಅಥವಾ ಮಾನಸಿಕತೆಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿರಬಹುದು. ಅದನ್ನು ನಿಮ್ಮ ಜಗಳದ ಸಂದರ್ಭದಲ್ಲಿ ಎಂದಿಗೂ ಮಾತನಾಡಬೇಡಿ. ಇದು ಅವರ ಮನಸಿಗೆ ನೋವುಂಟುಮಾಡುವುದು ಮಾತ್ರವಲ್ಲದೆ ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು.
ಇದನ್ನೂ ಓದಿ: ಹೃದಯದ ಆರೋಗ್ಯದಿಂದ ಜೀರ್ಣಕ್ರಿಯೆವರೆಗೆ; ನಿಮ್ಮ ಡಯೆಟ್ನಲ್ಲಿ ಎಪ್ರಿಕಾಟ್ ಪಾತ್ರವೇನು?
ಕುಟುಂಬಗಳನ್ನು ನಿಮ್ಮ ಜಗಳದಲ್ಲಿ ಎಳೆದು ತರಬೇಡಿ:
ಸಂಗಾತಿಗಳು ವಾದ ಅಥವಾ ಜಗಳ ಮಾಡುವಾಗ ಪರಿಸ್ಪರರ ಕುಟುಂಬವನ್ನು ಮಧ್ಯೆ ಎಳೆದು ತರುವುದು ಒಳ್ಳೆಯದಲ್ಲ. ಜಗಳವು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಇರುತ್ತದೆ. ಹಾಗಾದರೆ, ಪರಸ್ಪರರ ಕುಟುಂಬದ ಬಗ್ಗೆ ಕೀಳರಿಮೆ ಉಂಟಾಗುವಂತೆ ಮಾತನಾಡುವುದು ಸರಿಯಲ್ಲ. ಇದು ಜಗಳವನ್ನು ಉತ್ತುಂಗಕ್ಕೇರಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ