National Tourism Day: ಜ. 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ; ಭಾರತದ ಆದಾಯದ ಭಾಗವೇ ಪ್ರವಾಸೋದ್ಯಮ!
ಭಾರತವು ವೈವಿದ್ಯತೆಯಿಂದ ಕೂಡಿದ ದೇಶವಾಗಿದ್ದು ಆಚಾರ ವಿಚಾರಗಳು ಸಂಸ್ಕೃತಿ ಸಂಪ್ರದಾಯ, ಆಹಾರ ಪದ್ಧತಿಗಳು ಭಿನ್ನವಾಗಿದ್ದು, ಕಣ್ಮನ ಸೆಳೆಯುವ ವಿವಿಧ ಪ್ರವಾಸೀಯ ತಾಣಗಳನ್ನು ಒಳಗೊಂಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರವಾಸಿಗರ ಕಣ್ಮನ ಸೆಳೆಯುವ ವಿವಿಧ ತಾಣಗಳನ್ನು ಹೊಂದಿದೆ. ಈ ಪ್ರವಾಸಿ ತಾಣಗಳನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷವು ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಆಚರಣೆಯ ಹಿಂದಿನ ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಪ್ರವಾಸ ಎಂದರೆ ಯಾರಿಗೆ ಇಷ್ಟ ಹೇಳಿ, ನಾಳೆ ಪ್ರವಾಸಕ್ಕೆ ಹೋಗುವುದೆಂದರೆ ಇವತ್ತು ನಿದ್ದೆ ಕೂಡ ಬರುವುದಿಲ್ಲ. ಅಷ್ಟರ ಮಟ್ಟಿಗೆ ಈ ಪ್ರವಾಸವೆನ್ನುವುದು ಎಲ್ಲಾ ಟೆನ್ಶನ್ ಗಳನ್ನು ಮರೆಸಿ ರಿಲ್ಯಾಕ್ಸ್ ಆಗಿಸುತ್ತದೆ. ಹೀಗಾಗಿ ಬಿಡುವು ಸಿಕ್ಕ ಕೂಡಲೇ ವಿವಿಧ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗಿರುವ ಕಾರಣ ಭಾರತದಲ್ಲಿ ಪ್ರವಾಸಿ ತಾಣಗಳಿಗೇನು ಕೊರತೆಯಿಲ್ಲ. ಪ್ರತಿ ರಾಜ್ಯದಲ್ಲಿಯೂ ವಿವಿಧ ಆಕರ್ಷಿಣೀಯ ತಾಣಗಳಿದ್ದು, ರಜೆಯ ಸಮಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈ ತಾಣಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದ್ದು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಇಂತಹ ತಾಣಗಳಿಂದಲೇ ಆದಾಯವು ಬರುತ್ತಿದೆ ಎನ್ನುವುದು ಗಮರ್ನಾಹ ಸಂಗತಿಯಾಗಿದೆ.
ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಇತಿಹಾಸ:
ಭಾರತದಲ್ಲಿ ಪ್ರವಾಸೋದ್ಯಮ ದಿನವನ್ನು ಜನವರಿ 25 ರಂದು ಆಚರಿಸಲಾಗುತ್ತಿದ್ದು, 1948ರಲ್ಲಿ ದೇಶಕ್ಕೆ ಸ್ವಾತಂತ್ರ್ಯದ ಬಳಿಕ, ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಸಾರಿಗೆ ಸಮಿತಿಯನ್ನು ರಚಿಸಲಾಯಿತು. 1998 ರಲ್ಲಿ ಪ್ರವಾಸೋದ್ಯಮ ಮತ್ತು ಸಂಪರ್ಕ ಸಚಿವಾಲಯದ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಆರಂಭಿಸಲಾಯಿತು.
ಇದನ್ನೂ ಓದಿ: ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಯಾವೆಲ್ಲಾ ಅರ್ಹತೆಗಳಿರಬೇಕು? ಇದರ ಹಿಂದಿರುವ ಮಹತ್ವ ಏನು?
ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಮಹತ್ವ:
ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸುವುದರ ಉದ್ದೇಶವೇನೆಂದರೆ ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯ ನಿರೀಕ್ಷೆಗಳು ಹಾಗೂ ಭಾರತದ ಆರ್ಥಿಕ ಅಭಿವೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದಾಗಿದೆ. ಹೀಗಾಗಿ ರಾಷ್ಟ್ರೀಯ ಪ್ರವಾಸೋದ್ಯಮ ದಿನದಂದು ರಾಜ್ಯಗಳು ತಮ್ಮ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೆಮಿನಾರ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: