ಸಿಹಿ ತಿಂಡಿ ಇಷ್ಟ ಪಡುವವರು ಮನೆಯಲ್ಲಿ ರುಚಿಯಾದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಿರಿ

ಗೃಹಿಣಿಯರಿಗೆ ಅಡುಗೆ ಮನೆಗಿಂತ ಇಷ್ಟವಾದ ಸ್ಥಳ ಮತ್ತೊಂದಿಲ್ಲ. ಹೀಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವ ಕಾರಣ ದಿನಕ್ಕೊಂದು ಬಗೆಯ ಆಹಾರವನ್ನು ತಯಾರಿಸಿ ಮನೆ ಮಂದಿಗೆಲ್ಲಾ ಉಣಬಡಿಸುತ್ತಾರೆ. ಹಬ್ಬದ ದಿನ ಬಿಟ್ಟು ಉಳಿದ ದಿನ ಸಿಹಿತಿನಿಸನ್ನು ಮಾಡಿ ಮನೆಯವರಿಗೆ ಬಡಿಸಿದರೆ ಮನೆಯ ಮೊಗದಲ್ಲಿ ಸಂತೋಷ ಕಾಣುತ್ತದೆ. ಹೀಗಾಗಿ ಮನೆಯ ಮಂದಿಯನ್ನು ವಿಧವಿಧವಾದ ಅಡುಗೆಯ ಮೂಲಕ ಖುಷಿ ಪಡಿಸುವ ಪ್ರಯತ್ನದಲ್ಲಿದ್ದರೆ ಮನೆಯಲ್ಲೇ ಸಿಗುವ ಕೆಲವು ಸಾಮಗ್ರಿಗಳಿಂದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಲು ನೀಡಬಹುದು. ಹಾಗಾದ್ರೆ ಈ ಅವಲಕ್ಕಿ ಕೇಸರಿ ಬಾತ್ ಈ ಸಿಂಪಲ್ ರೆಸಿಪಿ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

ಸಿಹಿ ತಿಂಡಿ ಇಷ್ಟ ಪಡುವವರು ಮನೆಯಲ್ಲಿ ರುಚಿಯಾದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಿರಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2024 | 3:16 PM

ಸಿಹಿತಿಂಡಿಯನ್ನು ಯಾರು ಇಷ್ಟ ಪಡಲ್ಲ ಹೇಳಿ, ಎಲ್ಲರೂ ಕೂಡ ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಸಿಹಿ ತಿಂಡಿಗಳನ್ನು ಹಬ್ಬಹರಿದಿನಗಳಲ್ಲಿಯೇ ಮಾಡುವುದೇ ಹೆಚ್ಚು. ಸಿಹಿ ತಿಂಡಿಯನ್ನು ತಿನ್ನಲು ಆಸೆಯಾಗಿದ್ದರೆ, ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳಿಂದ ಸುಲಭವಾಗಿ ಮಾಡಬಹುದಾದ ಕೆಲವು ಸಿಹಿ ತಿಂಡಿಗಳಿವೆ. ಅದರಲ್ಲಿ ಈ ಅವಲಕ್ಕಿ ಕೇಸರಿ ಬಾತ್ ಕೂಡ ಒಂದು. ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ, ಈ ಅವಲಕ್ಕಿ ಕೇಸರಿ ಬಾತ್ ಮಾಡಿ ರುಚಿ ಸವಿಯಬಹುದು.

ಅವಲಕ್ಕಿ ಕೇಸರಿ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ಸಕ್ಕರೆ, ಕಾಲು ಕಪ್ ತುಪ್ಪ, ಕೇಸರಿ ಬಣ್ಣದ ಫುಡ್ ಕಲರ್, ಏಲಕ್ಕಿ ಪುಡಿ, ನೀರು ಹಾಗೂ ಗೋಡಂಬಿ.

ಅವಲಕ್ಕಿ ಕೇಸರಿ ಬಾತ್ ಮಾಡುವ ವಿಧಾನ:

* ಮೊದಲಿಗೆ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಗೋಡಂಬಿ ಹಾಕಿ ಹುರಿದುಕೊಳ್ಳಿ. ಹುರಿದ ಗೋಡಂಬಿಯನ್ನು ತೆಗೆದಿಟ್ಟುಕೊಳ್ಳಿ.

* ಆ ಬಳಿಕ ಅವಲಕ್ಕಿಯನ್ನು ತುಸು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಸಣ್ಣಗೆ ರುಬ್ಬಿಕೊಳ್ಳಿ.

ಇದನ್ನೂ ಓದಿ:ಪ್ಯಾಶನ್ ಫ್ರೂಟ್​​​ನ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಈ ಹಣ್ಣಿನ ವಿಶೇಷತೆ

* ಒಂದು ಕಪ್ ನೀರು ಹಾಕಿ ಬಿಸಿ ಮಾಡಿಕೊಂಡು, ನೀರು ಕುದಿಯುತ್ತಿದ್ದಂತೆ ಅದಕ್ಕೆ ಪುಡಿ ಮಾಡಿಟ್ಟುಕೊಂಡಟ್ಟುಕೊಂಡ ಅವಲಕ್ಕಿಯನ್ನು ಸೇರಿಸಿ ಕಲಸಿಕೊಳ್ಳಿ.

* ಈ ಮಿಶ್ರಣಕ್ಕೆ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ದಪ್ಪಗಾಗುತ್ತಿದ್ದಂತೆಗುತ್ತಿದ್ದಂತೆ ಅದಕ್ಕೆ ಸಕ್ಕರೆ, ತುಪ್ಪ ಸೇರಿಸಿ ಕೈಯಾಡಿ. ತಳ ಬಿಡುತ್ತಿದ್ದಂತೆ ಏಲಕ್ಕಿ ಪುಡಿ, ಗೋಡಂಬಿ ಹಾಕಿದರೆ ರುಚಿ ರುಚಿಯಾದ ಅವಲಕ್ಕಿ ಕೇಸರಿಬಾತ್ ಸವಿಯಲು ಸಿದ್ಧವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್