SUPERFOODS: ಪ್ಯಾಶನ್ ಫ್ರೂಟ್​​​ನ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಈ ಹಣ್ಣಿನ ವಿಶೇಷತೆ

ಮಾರುಕಟ್ಟೆಯಲ್ಲಿ ಅತ್ಯಂತ ವಿಶಿಷ್ಟವಾದ ಹಣ್ಣುಗಳಲ್ಲಿ ಇದು ಒಂದಾಗಿದೆ. ಈ ಹಣ್ಣು ನೋಡುವುದಕ್ಕೆ ಸ್ವಲ್ಪ ವಿಚಿತ್ರವಾಗಿ ಕಂಡರೂ ಕೂಡ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ. ಒಟ್ಟಾರೆಯಾಗಿ, ಈ ಹಣ್ಣು ಪೌಷ್ಠಿಕಾಂಶ ತುಂಬಿರುವ ಶಕ್ತಿ ಕೇಂದ್ರವಾಗಿದೆ. ಹಾಗಾದರೆ ಪ್ಯಾಷನ್ ಫ್ರೂಟ್ ನ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ.

SUPERFOODS: ಪ್ಯಾಶನ್ ಫ್ರೂಟ್​​​ನ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಈ ಹಣ್ಣಿನ ವಿಶೇಷತೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2024 | 11:34 AM

ನೀವು ಪ್ಯಾಷನ್ ಫ್ರೂಟ್ ಪ್ರೀಯರಾ? ಹಾಗಿದ್ದರೆ ಆ ಹಣ್ಣಿನ ಬಗ್ಗೆ ನೀವೆಷ್ಟು ತಿಳಿದುಕೊಂಡಿದ್ದೀರಿ? ಹೊರ ಭಾಗದಲ್ಲಿ ಗಾಢ ಬಣ್ಣವನ್ನು ಹೊಂದಿರುವ ಈ ಹಣ್ಣು ಮಾರುಕಟ್ಟೆಯಲ್ಲಿ ಅತ್ಯಂತ ವಿಶಿಷ್ಟವಾದ ಹಣ್ಣುಗಳಲ್ಲಿ ಒಂದಾಗಿದೆ. ಇದು ನೋಡುವುದಕ್ಕೆ ಸ್ವಲ್ಪ ವಿಚಿತ್ರವಾಗಿ ಕಂಡರೂ ಕೂಡ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ. ಒಟ್ಟಾರೆಯಾಗಿ, ಈ ಹಣ್ಣು ಪೌಷ್ಠಿಕಾಂಶ ತುಂಬಿರುವ ಶಕ್ತಿ ಕೇಂದ್ರವಾಗಿದೆ. ಹಾಗಾದರೆ ಪ್ಯಾಷನ್ ಫ್ರೂಟ್ ನ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ಯಾಷನ್ ಫ್ರೂಟ್ ಆರೋಗ್ಯಕರವೇ?

ರೋಗನಿರೋಧಕ ಶಕ್ತಿಯ ವಿಷಯಕ್ಕೆ ಬಂದಾಗ ಪ್ಯಾಷನ್ ಫ್ರೂಟ್ ಇದರಿಂದ ಭಿನ್ನವಾಗಿಲ್ಲ. ಈ ಹಣ್ಣಿನಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು, ವಿಶೇಷವಾಗಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ ಎಂದು ಆಹಾರ ತಜ್ಞ ಗರಿಮಾ ಗೋಯಲ್ ಹೇಳುತ್ತಾರೆ. ಹೆಚ್ಚುವರಿಯಾಗಿ, ಅವು ಉತ್ತಮ ಪ್ರಮಾಣದ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಸಹ ಹೊಂದಿರುತ್ತವೆ. ಅವು ಫೈಬರ್ ನ ಉತ್ತಮ ಮೂಲವಾಗಿದೆ.

ಪ್ಯಾಶನ್ ಫ್ರೂಟ್ ನ ಪ್ರಯೋಜನಗಳೇನು?

1. ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ: ವಿಟಮಿನ್ ಸಿ ಮತ್ತು ಪಾಲಿಫಿನಾಲ್ಗಳು ಸೇರಿದಂತೆ ಪ್ಯಾಷನ್ ಫ್ರೂಟ್ ನಲ್ಲಿರುವ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ತುಲನಾತ್ಮಕವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತದೆ: ಪ್ಯಾಶನ್ ಫ್ರೂಟ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತದೆ, ಅಂದರೆ ಅವು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಹಾಗಾಗಿ ಮಧುಮೇಹಿಗಳಿಗೆ ಸೇವಿಸಲು ಸುರಕ್ಷಿತವಾಗಿವೆ.

3. ತೂಕ ನಿರ್ವಹಣೆ ಮಾಡುತ್ತದೆ: ಈ ಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ಫೈಬರ್ ಅಂಶವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಇದರಿಂದಾಗಿ ಆಗಾಗ ತಿನ್ನುವುದನ್ನು ನೀವು ತಡೆಯಬಹುದಾಗಿದೆ. ಅಲ್ಲದೆ, ಫೈಬರ್ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ನಿಯಮಿತವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳುತ್ತದೆ. ನ್ಯೂಟ್ರಿಷನ್ ರಿಸರ್ಚ್ನಲ್ಲಿ ಪ್ರಕಟವಾದ ಈ ಅಧ್ಯಯನವು ಪ್ಯಾಷನ್ ಫ್ರೂಟ್ ಸಿಪ್ಪೆಯು ಕೂಡ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:

4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಇತರ ಪ್ರಬಲ ಉತ್ಕರ್ಷಣ ನಿರೋಧಕಗಳು ಸೋಂಕಿನ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಫಿಶ್ ನ್ಯೂಟ್ರಿಷನ್ ಅಂಡ್ ಫೀಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿಯೂ ಕೂಡ ಇದನ್ನೇ ವಿವರಿಸಲಾಗಿದೆ ಎಂಬುದನ್ನು ತಜ್ಞರು ಹೇಳುತ್ತಾರೆ.

5. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ರಕ್ತದೊತ್ತಡವನ್ನು ನಿಯಂತ್ರಿಸಲು ವ್ಯಾಯಾಮ ಬೇಕಾದರೂ ಕೂಡ, ಪ್ಯಾಷನ್ ಹಣ್ಣಿನ ಪೊಟ್ಯಾಸಿಯಮ್ ಅಂಶವು ಅದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದರ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ನೀವು ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ? ಅದರ ಪರಿಣಾಮ ಇಲ್ಲಿದೆ  

ಹೆಚ್ಚು ಹೆಚ್ಚು ಪ್ಯಾಷನ್ ಫ್ರೂಟ್ ಸೇವನೆ ಮಾಡಬಹುದೇ?

ಅತಿಯಾಗಿ ಏನೂ ಒಳ್ಳೆಯದಲ್ಲ,ಈ ಮಾತು ಈ ಹಣ್ಣಿಗೂ ಅನ್ವಯಿಸುತ್ತದೆ. “ಪ್ಯಾಶನ್ ಫ್ರೂಟ್ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ, ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾಲೊರಿ ಸೇವನೆ ಹೆಚ್ಚಾಗುತ್ತದೆ, ಕೆಲವೊಮ್ಮೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಇದರಲ್ಲಿರುವ ನಾರಿನಂಶದಿಂದಾಗಿ ಜೀರ್ಣಕಾರಿ ಕ್ರಿಯೆಗೆ ತೊಂದರೆಯಾಗಬಹುದು”ಎಂದು ಆಹಾರ ತಜ್ಞ ಗರಿಮಾ ಗೋಯಲ್ ಹೇಳುತ್ತಾರೆ. ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿಗಳಿಗೆ, ಪ್ಯಾಷನ್ ಹಣ್ಣನ್ನು ತಪ್ಪಿಸುವುದು ಸೂಕ್ತವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: