ಆಹಾರಕ್ರಮದಿಂದ ಹಿಡಿದು ಲೈಂಗಿಕ ಚಟುವಟಿಕೆಗಳವರೆಗೆ, ಸಿಸೇರಿಯನ್ ಹೆರಿಗೆಯ ನಂತರ ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ಸಿಸೇರಿಯನ್ ಹೆರಿಗೆಯ ನಂತರ ಬಾಣಂತಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಈ ಸಮಯದಲ್ಲಿ ಸಣ್ಣದೊಂದು ತಪ್ಪಾದರೂ ಕಾಲ ನಂತರದಲ್ಲಿ ಅನೇಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಿಸೇರಿಯನ್ ಹೆರಿಗೆಯ ನಂತರ ಅನೇಕ ಕೆಲಸಗಳನ್ನು ಮಾಡದಂತೆ ವೈದ್ಯರು ಸಲಹೆ ನೀಡುತ್ತಾರೆ.

ಆಹಾರಕ್ರಮದಿಂದ ಹಿಡಿದು ಲೈಂಗಿಕ ಚಟುವಟಿಕೆಗಳವರೆಗೆ, ಸಿಸೇರಿಯನ್ ಹೆರಿಗೆಯ ನಂತರ ನೀವು ತಿಳಿದುಕೊಳ್ಳಬೇಕಾದ ವಿಷಯಗಳು
C-section TipsImage Credit source: hiehelpcenter
Follow us
|

Updated on: Jan 11, 2024 | 1:00 PM

ಸಿಸೇರಿಯನ್ ಹೆರಿಗೆಯ ನಂತರ, ಬಾಣಂತಿಯರಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಈ ಸಮಯದಲ್ಲಿ ಸಣ್ಣದೊಂದು ತಪ್ಪಾದರೂ ಕಾಲ ನಂತರದಲ್ಲಿ ಅನೇಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಸಿಸೇರಿಯನ್ ನಂತರ ನಡಿಗೆ ಅಥವಾ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡುವ ಮೊದಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಆಹಾರಕ್ರಮದಿಂದ ಹಿಡಿದು ಲೈಂಗಿಕ ಚಟುವಟಿಕೆಗಳವರೆಗೆ, ಸಿಸೇರಿಯನ್ ಹೆರಿಗೆಯ ನಂತರ ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಕುರಿತು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರಿದ್ಧಿಮಾ ಶೆಟ್ಟಿ ನೀಡಿರುವ ವಿವರವಾದ ಮಾಹಿತಿ ಇಲ್ಲಿದೆ.

ಸಿಸೇರಿಯನ್ ಹೆರಿಗೆಯ ನಂತರ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು:

1. ವೈದ್ಯರ ಸಲಹೆಯನ್ನು ಪಾಲಿಸಿ:

ಸಿಸೇರಿಯನ್ ಹೆರಿಗೆಯ ನಂತರ ಗಾಯ ಸಂಪೂರ್ಣವಾಗಿ ಒಣಗಿ ಚೇತರಿಸಿಕೊಳ್ಳಲು 4-8 ವಾರಗಳು ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ 48 ಗಂಟೆಗಳ ಕಾಲ ಸ್ನಾನ ಮಾಡುವುದು ಸೂಕ್ತವಲ್ಲ. ಒದ್ದೆಯಾಗುವುದರಿಂದ ಶಸ್ತ್ರಚಿಕಿತ್ಸೆಯ ಗಾಯಗಳು ಒದ್ದೆಯಾಗಬಹುದು. ಸೋಂಕಿನ ಅಪಾಯ ಹೆಚ್ಚಾಗಬಹುದು.

2. ಲೈಂಗಿಕ ಚಟುವಟಿಕೆ:

ಸಿಸೇರಿಯನ್ ಹೆರಿಗೆಯ ನಂತರ, ಕೆಲವು ವಾರಗಳವರೆಗೆ ಯೋನಿಯೊಳಗೆ ಏನೂ ಹೋಗಬಾರದು. ಸಾಮಾನ್ಯವಾಗಿ, 6 ವಾರಗಳ ನಂತರ ಅಥವಾ ವೈದ್ಯರ ಅನುಮತಿಯ ನಂತರವೇ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಿ ಎಂದು ಡಾ.ರಿದ್ಧಿಮಾ ಶೆಟ್ಟಿ ಸಲಹೆ ನೀಡುತ್ತಾರೆ.

3. ತೂಕ ನಷ್ಟಕ್ಕೆ ಡಯಟಿಂಗ್ ಮಾಡಬೇಡಿ:

ಹೆರಿಗೆಯಾದ 6-12 ತಿಂಗಳ ನಂತರವೇ ತೂಕ ನಷ್ಟದ ಬಗ್ಗೆ ಯೋಚನೆ ಮಾಡಿ. ಹೆರಿಗೆಯ ನಂತರ 6 ವಾರಗಳಲ್ಲಿ ಹೆಚ್ಚಿನ ಮಹಿಳೆಯರು ಅರ್ಧದಷ್ಟು ತೂಕವನ್ನು ಕಳೆದುಕೊಳ್ಳುತ್ತಾರೆ. ಪ್ರತಿನಿತ್ಯ ಅಗತ್ಯ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಓಡುವುದು, ಕಠಿಣ ವ್ಯಾಯಾಮ ಮಾಡುವುದು ಮತ್ತು ಅವಸರದಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಮತ್ತು ಇಳಿಯುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು . ಹೆರಿಗೆಯಾದ ತಕ್ಷಣ ತೂಕವನ್ನು ಕಳೆದುಕೊಳ್ಳಲು ಡಯಟಿಂಗ್​​ನಲ್ಲಿ ತೊಡಗಿಸಿಕೊಳ್ಳಬೇಡಿ. ಯಾಕೆಂದರೆ ನೀವು ಸ್ತನ್ಯಪಾನ ಮಾಡುತ್ತಿದ್ದರೆ, ನಿಮಗೆ ಎರಡು ಪಟ್ಟು ಪೋಷಣೆಯ ಅಗತ್ಯವಿರುತ್ತದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಒತ್ತಡ ಹೆಚ್ಚಾದರೆ ಗರ್ಭಪಾತಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?

4. ಸ್ತನ್ಯಪಾನ:

ನೀವು ಸ್ತನ್ಯಪಾನ ಮಾಡಲು ಸಾಧ್ಯವಾಗದಿದ್ದರೆ, ತಪ್ಪಿತಸ್ಥರೆಂದು ಭಾವಿಸಬೇಡಿ. ಇದು ಸಾಮಾನ್ಯ ಸಮಸ್ಯೆಯಾಗಿರಬಹುದು. ಹಾಗಾಗಿ ಅದರ ಬಗ್ಗೆ ಹೆಚ್ಚು ಯೋಚಿಸಬೇಡಿ. ಈ ಸಮಯದಲ್ಲಿ ವೈದ್ಯರ ಸಲಹೆಯನ್ನು ಎಚ್ಚರಿಕೆಯಿಂದ ಪಾಲಿಸುವುದು ಅತ್ಯಂತ ಅಗತ್ಯ.

5. ಜ್ವರದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ:

ಜ್ವರವು 100 ಫ್ಯಾರನ್‌ಹೀಟ್‌ಗಿಂತ ಹೆಚ್ಚಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮಗು ಮತ್ತು ತಾಯಿ ಇಬ್ಬರ ಆರೋಗ್ಯಕ್ಕೂ ಇದು ಮುಖ್ಯವಾಗಿದೆ. ಕೆಲವೊಮ್ಮೆ ನೋವು ಹಾಗೂ ಸೋಂಕಿನಿಂದ ಜ್ವರ ಬಂದಿರುವ ಸಾಧ್ಯತೆ ಇದೆ. ನೀವು ದುರ್ವಾಸನೆಯ ಯೋನಿ ಸ್ರಾವ ಅಥವಾ ನೋವನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸಿ .

6. ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ:

ಸಾಮಾನ್ಯವಾಗಿ ಹೆರಿಗೆಯ ನಂತರ, ಹಾರ್ಮೋನುಗಳ ಬದಲಾವಣೆಯಿಂದಾಗಿ ತಾಯಂದಿರು ಪ್ರಸವಾನಂತರದ ಖಿನ್ನತೆಗೆ ಒಳಗಾಗುತ್ತಾರೆ. ನೀವು ತ್ವರಿತ ಮನಸ್ಥಿತಿಯನ್ನು ಹೊಂದಿದ್ದರೆ, ಮನಶ್ಶಾಸ್ತ್ರಜ್ಞ ಅಥವಾ ಚಿಕಿತ್ಸಕರನ್ನು ಭೇಟಿ ಮಾಡಲು ಹಿಂಜರಿಯಬೇಡಿ ಎಂಬುದನ್ನು ನೆನಪಿನಲ್ಲಿಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ