Stress and Pregnancy: ಗರ್ಭಾವಸ್ಥೆಯಲ್ಲಿ ಒತ್ತಡ ಹೆಚ್ಚಾದರೆ ಗರ್ಭಪಾತಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?

ಗರ್ಭಾವಸ್ಥೆಯಲ್ಲಿ ಒತ್ತಡವು ಗರ್ಭಿಣಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಪ್ರಸವಪೂರ್ವ ಒತ್ತಡವು ಬೆಳೆಯುತ್ತಿರಯವ ಭ್ರೂಣದ ಮೇಲೆ ಹೇಗೆ ಹಾನಿಯುಂಟು ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

Stress and Pregnancy: ಗರ್ಭಾವಸ್ಥೆಯಲ್ಲಿ ಒತ್ತಡ ಹೆಚ್ಚಾದರೆ ಗರ್ಭಪಾತಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?
Stress and Pregnancy
Follow us
ಅಕ್ಷತಾ ವರ್ಕಾಡಿ
|

Updated on:Jan 11, 2024 | 11:49 AM

ಗರ್ಭಾವಸ್ಥೆ ಪ್ರತೀ ಮಹಿಳೆಯ ಜೀವನದಲ್ಲಿ ವಿಶೇಷವಾಗಿದೆ. ಆದರೆ ಕುಟುಂಬದ ಹಾಗೂ ವೈಯಕ್ತಿಕ ಸಮಸ್ಯೆಗಳು ಗರ್ಭಾವಸ್ಥೆಯಲ್ಲಿ ಮಹಿಳೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಅತಿಯಾದ ಚಿಂತೆ, ಒತ್ತಡದಲ್ಲಿರುವುದು ಹುಟ್ಟಲಿರುವ ಮಗುವಿನ ಬೆಳವಣಿಗೆ ಮೇಲೆ ಕೆಟ್ಟ ಪ್ರಭಾವ ಬೀರಬಹುದು ಎಂದು ಸಂಶೋಧನೆ ತೋರಿಸಿದೆ. ದೆಹಲಿಯ ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ ಸಾಕ್ಷಿ ಗೋಯೆಲ್ ಹೇಳುವಂತೆ ಗರ್ಭಾವಸ್ಥೆಯಲ್ಲಿ ಒತ್ತಡವು ಅಕಾಲಿಕ ಹೆರಿಗೆ, ಕಡಿಮೆ ತೂಕದ ಜನನಕ್ಕೆ ಕಾರಣವಾಗುತ್ತದೆ ಎಂದು ಸಲಹೆ ನೀಡುತ್ತಾರೆ.

ಗರ್ಭಾವಸ್ಥೆಯಲ್ಲಿ ಒತ್ತಡ:

ಗರ್ಭಿಣಿ ಮಹಿಳೆಯು ಒತ್ತಡವನ್ನು ಅನುಭವಿಸಿದಾಗ, ಆಕೆಯ ದೇಹವು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಂತಹ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ಕೆಲವು ಸಂದರ್ಭಗಳಲ್ಲಿ ಸಹಾಯಕವಾಗಿದ್ದರೂ, ಗರ್ಭಾವಸ್ಥೆಯಲ್ಲಿ ಗರ್ಭಾಶಯದಲ್ಲಿ ಹೆಚ್ಚಿನ ಮಟ್ಟದ ಒತ್ತಡದ ಹಾರ್ಮೋನುಗಳು ಬೆಳವಣಿಗೆಯ ಭ್ರೂಣದ ಸೂಕ್ಷ್ಮ ಸಮತೋಲನವನ್ನು ಅಡ್ಡಿಪಡಿಸಬಹುದು, ಭ್ರೂಣದ ನರವೈಜ್ಞಾನಿಕ ಮತ್ತು ಶಾರೀರಿಕ ಬೆಳವಣಿಗೆಯ ಮೇಲೆ ಸಂಭಾವ್ಯವಾಗಿ ಪರಿಣಾಮ ಬೀರಬಹುದು.

ಮಗುವಿನ ಮೇಲೆ ಗರ್ಭಾವಸ್ಥೆಯ ಒತ್ತಡದ ಅಡ್ಡಪರಿಣಾಮಗಳು:

1. ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ:

ತಾಯಿಯ ಒತ್ತಡವು ಭ್ರೂಣದ ಮೆದುಳಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಬೆಳವಣಿಗೆ ಹೊಂದುತ್ತಿರುವ ಭ್ರೂಣದ ಮೆದುಳಿಗೆ ಈ ಒತ್ತಡದ ಹಾರ್ಮೋನ್‌ಗಳು ತುಂಬಾ ಅಪಾಯಕಾರಿಯಾಗಿದೆ. ಹೆಚ್ಚಿನ ಮಟ್ಟದ ಒತ್ತಡ ಹಾರ್ಮೋನ್​​ ಆದ ಕಾರ್ಟಿಸೋಲ್‌ಗೆ ಒಡ್ಡಿಕೊಳ್ಳುವುದರಿಂದ ಮೆದುಳಿನ ರಚನೆ ಮತ್ತು ಕಾರ್ಯಚಟುವಟಿಕೆಗಳ ರಚನೆಗೆ ಅಡ್ಡಿಯಾಗಬಹುದು. ಇದು ಮಗುವಿನ ಅರಿವಿನ, ಭಾವನಾತ್ಮಕ ಮತ್ತು ನಡವಳಿಕೆಯ ಕಾರ್ಯಗಳಿಗೆ ದೀರ್ಘಾವಧಿಯ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಡಾ ಗೋಯೆಲ್ ಹೇಳುತ್ತಾರೆ.

ಇದನ್ನೂ ಓದಿ:  ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

2. ಅವಧಿಪೂರ್ವ ಜನನ ಮತ್ತು ಕಡಿಮೆ ತೂಕದ ಜನನ:

“ಗರ್ಭಾವಸ್ಥೆಯಲ್ಲಿನ ಒತ್ತಡವು ಕಡಿಮೆ ಜನನ ತೂಕಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಡಿಮೆ ಜನನ ತೂಕವು ಬೆಳವಣಿಗೆಯ ವಿಳಂಬಗಳು, ಜನ್ಮದಲ್ಲಿ ತೊಡಕುಗಳು ಮತ್ತು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕಡಿಮೆ ಜನನ ತೂಕದೊಂದಿಗೆ ಜನಿಸಿದ ಶಿಶುಗಳು ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.

3. ಮಗುವಿನ ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ:

ಗರ್ಭಾವಸ್ಥೆಯಲ್ಲಿ ತಾಯಿಯ ಒತ್ತಡವು ಹುಟ್ಟಲಿರುವ ಮಗುವಿನ ಮೇಲೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಡಾ ಗೋಯೆಲ್ ಹೇಳುತ್ತಾರೆ. ಒತ್ತಡದ ತಾಯಂದಿರಿಗೆ ಜನಿಸಿದ ಮಕ್ಕಳು ನಂತರದ ಜೀವನದಲ್ಲಿ ಆತಂಕ, ಖಿನ್ನತೆ ಮತ್ತು ನಡವಳಿಕೆಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Thu, 11 January 24