Kannada News Lifestyle Relationship Tips : Simple ways to express your love, without saying i love you Word Kannada News
Relationship Tips : ಐ ಲವ್ ಯು ಹೇಳದೇ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿ, ಇಲ್ಲಿದೆ ಟಿಪ್ಸ್
ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ನಿಜವಾದ ಪ್ರೀತಿಗೆ ಕೊನೆಯಿಲ್ಲ. ಆದರೆ ಈಗಿನ ಕಾಲದಲ್ಲಿ ಟೈಮ್ ಪಾಸ್ ಗಾಗಿಯೇ ಲವ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಎಲ್ಲರ ಮುಂದೆ ಐ ಲವ್ ಯು ಹೇಳಿದರೆ ಅಥವಾ ದಿನಕ್ಕೆ ನೂರಾರು ಸಲ ಐ ಲವ್ ಯು ಎಂದು ಹೇಳಿದರೆ ಪ್ರೀತಿಯಿದೆ ಎಂದರ್ಥ ಎನ್ನುವಂತಾಗಿದೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸಲು ಇದಲ್ಲದೆ ಬೇರೆ ವಿಧಾನವು ಇದೆ. ನೀವು ನಿಮ್ಮ ಪ್ರೇಮಿಗೆ ಅಥವಾ ಸಂಗಾತಿಗೆ ಐ ಲವ್ ಯು ಎಂದು ಹೇಳಲು ಸಂಕೋಚವಾಗುತ್ತಿದ್ದರೆ ಈ ರೀತಿಯಾಗಿ ಪ್ರೀತಿ ವ್ಯಕ್ತಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.
Follow us on
ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವಿನ ಧುರವಾದ ಭಾವನೆ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾಗಿ ಪ್ರೀತಿಸೋರು ಸಿಗೋದು ಕಷ್ಟ. ಈ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ಅದಲ್ಲದೇ ಎಷ್ಟೋ ಸಲ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು ಕೂಡ ಬೇರೆಯಾಗುತ್ತಾರೆ. ನೀವು ನಿಮ್ಮ ಸಂಗಾತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ನಾನು ನಿನ್ನನ್ನು ಪ್ರೀತಿಸುತ್ತೇವೆ ಎಂದೇಳಬೇಕಿಲ್ಲ. ನಿಮ್ಮ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಈ ಕೆಲವು ಸಲಹೆಗಳು ಇಲ್ಲಿದೆ.
ಸಂಗಾತಿಯ ಸಣ್ಣ ಪುಟ್ಟ ವಿಷಯಗಳಿಗೂ ಗಮನ ಕೊಡಿ : ಪ್ರೇಮ ಸಂಬಂಧದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಒಂದು. ನಮ್ಮವರು ಎನ್ನಿಸಿಕೊಂಡವರ ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು. ಆದರೆ ಪ್ರಾರಂಭದಲ್ಲಿ ಇದೇನು ಇಷ್ಟು ಸಣ್ಣ ವಿಷಯವೆಂದೆನಿಸಬಹುದು. ಆದರೆ ಈ ಸಣ್ಣಸಣ್ಣ ವಿಷಯಗಳೇ ಇಬ್ಬರೂ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಸಂಗಾತಿಯ ಸಣ್ಣ ಪುಟ್ಟ ವಿಷಯಗಳತ್ತ ಹೆಚ್ಚು ಗಮನ ಕೊಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬಹುದು.
ದೀರ್ಘವಾದ ಅಪ್ಪುಗೆಯಿರಲಿ : ಸಂಗಾತಿಗಳಿಬ್ಬರೂ ಐಲವ್ ಯು ಎಂದು ಹೇಳಲೇ ಬೇಕೆಂದೇನಿಲ್ಲ. ಆದರೆ ದೀರ್ಘವಾದ ಅಪ್ಪುಗೆಯು ಕೂಡ ನನಗೆ ನಿಮ್ಮ ಮೇಲೆ ಪ್ರೀತಿಯಿದೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಇಲ್ಲದಿದ್ದರೆ ಸಂಗಾತಿಯ ಮಾತುಗಳಿಗೆ ಕಿವಿ ಆಗುವಾಗ ಅಪ್ಪುಗೆಯನ್ನು ನೀಡಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.
ನಿಮ್ಮವರಿಗಾಗಿ ಸಮಯ ನೀಡಿ : ಯಾವುದೇ ಸಂಬಂಧವಿರಲಿ ಸಮಯಕ್ಕಿಂತ ಮತ್ತೊಂದು ಅಮೂಲ್ಯವಾದ ವಸ್ತುವಿಲ್ಲ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಸಮಯ ನೀಡುವುದು ಕೂಡ ಒಂದು. ಇಬ್ಬರೂ ಜೊತೆಯಾಹಿ ಒಳ್ಳೆಯ ಸಮಯವನ್ನು ಕಳೆಯುವುದು. ಈ ವೇಳೆಯಲ್ಲಿ ನಿಮ್ಮವರ ಬೇಕು ಬೇಡಗಳು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ನಿಮ್ಮ ಸಂಗಾತಿಗೆ ನೀವು ನೀಡುವ ಸಮಯವು ಖುಷಿ ತರಬಹುದು. ನಿಮ್ಮ ಮೇಲಿನ ಪ್ರೀತಿ ಯನ್ನು ಹೆಚ್ಚಿಸುತ್ತದೆ.
ಮೆಚ್ಚುಗೆಯ ಮಾತುಗಳಿರಲಿ : ಸಂಗಾತಿಗಳಿಬ್ಬರೂ ಐಲವ್ ಯು ಹೇಳದೇನೇ ಮೆಚ್ಚುಗೆಯ ಮಾತುಗಳನ್ನು ಒಬ್ಬರು ಇನ್ನೊಬ್ಬರ ಮನಸ್ಸನ್ನು ಗೆಲ್ಲಬಹುದು. ನಿಮ್ಮ ಸಂಗಾತಿಯು ಮಾಡುವ ಅಡುಗೆ, ಮನೆ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿ. ನಿಮ್ಮವರು ಯಾವುದೇ ಕೆಲಸವು ನನ್ನ ಕೈಯಲ್ಲಿ ಆಗುವುದಲ್ಲ ಎಂದು ಕುಳಿತಿದ್ದಾಗ ಅವರಿಗೆ ಧೈರ್ಯ ತುಂಬಿ ಆ ಕೆಲಸದಲ್ಲಿ ತೊಡಗಿ ಕೊಳ್ಳುತ್ತವೆ. ನಿಮ್ಮ ಈ ಮಾತುಗಳು ನಿಮಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ.