Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2024: ದೀಪಾವಳಿಗೆ ಪಟಾಕಿ ಸಿಡಿಸುವ ಮುನ್ನ ಈ ವಿಷ್ಯ ನೆನಪಿನಲ್ಲಿಟ್ಟುಕೊಳ್ಳಿ

ದೀಪಾವಳಿ ಬಂತೆಂದರೆ ಸಾಕು ಎಲ್ಲರೂ ಪಟಾಕಿಯೊಂದಿಗೆ ದೀಪಾವಳಿ ಆಚರಿಸಲು ಇಷ್ಟಪಡುತ್ತಾರೆ. ಆದರೆ ಅಪಘಾತಗಳನ್ನು ತಪ್ಪಿಸಲು ಸುರಕ್ಷಿತವಾಗಿ ಹಬ್ಬ ಆಚರಿಸಲು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

Deepavali 2024: ದೀಪಾವಳಿಗೆ ಪಟಾಕಿ ಸಿಡಿಸುವ ಮುನ್ನ ಈ ವಿಷ್ಯ ನೆನಪಿನಲ್ಲಿಟ್ಟುಕೊಳ್ಳಿ
Follow us
ಅಕ್ಷತಾ ವರ್ಕಾಡಿ
|

Updated on:Oct 19, 2024 | 2:43 PM

ದೀಪಾವಳಿ ಬಂತೆಂದರೆ ಎಲ್ಲರಿಗೂ ಉತ್ಸಾಹ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಪಟಾಕಿಯೊಂದಿಗೆ ದೀಪಾವಳಿ ಆಚರಿಸಲು ಇಷ್ಟಪಡುತ್ತಾರೆ. ಆದರೆ ಆ ಮಂಗಳಕರ ದಿನದಂದು, ಅಪಘಾತಗಳನ್ನು ತಪ್ಪಿಸಲು ಸುರಕ್ಷಿತವಾಗಿ ಹಬ್ಬ ಆಚರಿಸಲು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

  1. ಪಟಾಕಿ ಸಿಡಿಸುವಾಗ ಹತ್ತಿರದಲ್ಲಿ ಒಂದು ಬಕೆಟ್ ನೀರು ಇಡುವುದು ಮುಖ್ಯ. ಪಟಾಕಿ ಸಿಡಿಸುವಾಗ ಹತ್ತಿ ಬಟ್ಟೆ ಧರಿಸಿ. ಪಾಲಿಯೆಸ್ಟರ್ ಉಡುಪುಗಳನ್ನು ಧರಿಸಬೇಡಿ.
  2. ಮಕ್ಕಳು ಸ್ಫೋಟಿಸಿದಾಗ ಅವರ ಕೈಗಳಿಗೆ ಕೈಗವಸುಗಳನ್ನು ಹಾಕಿ. ಪಟಾಕಿಯ ಬೆಳಕು ಕಣ್ಣಿಗೆ ಹಾನಿಯಾಗಬಹುದು ಆದ್ದರಿಂದ ಕನ್ನಡಕ ಧರಿಸಿ. ನಿಮಗೆ ಉಸಿರಾಟದ ತೊಂದರೆ ಇದ್ದರೆ ಫೇಸ್ ಮಾಸ್ಕ್ ಧರಿಸಿ.
  3. ಯಾವುದೇ ಸ್ಫೋಟಕಗಳ ಬಳಿ ಹೆಚ್ಚು ಹೊತ್ತು ನಿಲ್ಲಬೇಡಿ. ಯಾವಾಗ ಬೇಕಾದರೂ ಪಟಾಕಿ ಸಿಡಿಯಬಹುದು. ಹಾಗಾಗಿ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಸಲು ಬಿಡಬೇಡಿ.
  4. ವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸದೇ ಸಮೀಪದಲ್ಲಿ ಮೈದಾನವಿದ್ದರೆ ಅದನ್ನು ಬಳಸಿ. ನಿಮ್ಮ ಸುತ್ತಮುತ್ತಲಿನ ವೃದ್ಧರು, ರೋಗಿಗಳು ಅಥವಾ ಮಕ್ಕಳಿಗೆ ತೊಂದರೆಯಾಗುವಂತೆ ಜೋರಾಗಿ ಪಟಾಕಿ ಸಿಡಿಸಬೇಡಿ.
  5. ಸುಟ್ಟ ಗಾಯಗಳಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಗಾಯದ ಜಾಗಕ್ಕೆ ಯಾವುದೇ ಕಾರಣಕ್ಕೂ ಮಣ್ಣು, ಅರಿಶಿನ, ಕಾಫಿ ಪುಡಿ, ಪೆನ್ ಇಂಕ್, ಸೀಮೆಸುಣ್ಣ ಇತ್ಯಾದಿಗಳನ್ನು ಹಾಕಬಾರದು. ಇದು ಗಾಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Thu, 17 October 24