Relationship Tips : ಐ ಲವ್ ಯು ಹೇಳದೇ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿ, ಇಲ್ಲಿದೆ ಟಿಪ್ಸ್

ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ನಿಜವಾದ ಪ್ರೀತಿಗೆ ಕೊನೆಯಿಲ್ಲ. ಆದರೆ ಈಗಿನ ಕಾಲದಲ್ಲಿ ಟೈಮ್ ಪಾಸ್ ಗಾಗಿಯೇ ಲವ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಎಲ್ಲರ ಮುಂದೆ ಐ ಲವ್ ಯು ಹೇಳಿದರೆ ಅಥವಾ ದಿನಕ್ಕೆ ನೂರಾರು ಸಲ ಐ ಲವ್ ಯು ಎಂದು ಹೇಳಿದರೆ ಪ್ರೀತಿಯಿದೆ ಎಂದರ್ಥ ಎನ್ನುವಂತಾಗಿದೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸಲು ಇದಲ್ಲದೆ ಬೇರೆ ವಿಧಾನವು ಇದೆ. ನೀವು ನಿಮ್ಮ ಪ್ರೇಮಿಗೆ ಅಥವಾ ಸಂಗಾತಿಗೆ ಐ ಲವ್ ಯು ಎಂದು ಹೇಳಲು ಸಂಕೋಚವಾಗುತ್ತಿದ್ದರೆ ಈ ರೀತಿಯಾಗಿ ಪ್ರೀತಿ ವ್ಯಕ್ತಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.

Relationship Tips : ಐ ಲವ್ ಯು ಹೇಳದೇ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿ, ಇಲ್ಲಿದೆ ಟಿಪ್ಸ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 17, 2024 | 4:36 PM

ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವಿನ ಧುರವಾದ ಭಾವನೆ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾಗಿ ಪ್ರೀತಿಸೋರು ಸಿಗೋದು ಕಷ್ಟ. ಈ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ಅದಲ್ಲದೇ ಎಷ್ಟೋ ಸಲ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು ಕೂಡ ಬೇರೆಯಾಗುತ್ತಾರೆ. ನೀವು ನಿಮ್ಮ ಸಂಗಾತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ನಾನು ನಿನ್ನನ್ನು ಪ್ರೀತಿಸುತ್ತೇವೆ ಎಂದೇಳಬೇಕಿಲ್ಲ. ನಿಮ್ಮ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಈ ಕೆಲವು ಸಲಹೆಗಳು ಇಲ್ಲಿದೆ.

  • ಸಂಗಾತಿಯ ಸಣ್ಣ ಪುಟ್ಟ ವಿಷಯಗಳಿಗೂ ಗಮನ ಕೊಡಿ : ಪ್ರೇಮ ಸಂಬಂಧದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಒಂದು. ನಮ್ಮವರು ಎನ್ನಿಸಿಕೊಂಡವರ ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು. ಆದರೆ ಪ್ರಾರಂಭದಲ್ಲಿ ಇದೇನು ಇಷ್ಟು ಸಣ್ಣ ವಿಷಯವೆಂದೆನಿಸಬಹುದು. ಆದರೆ ಈ ಸಣ್ಣಸಣ್ಣ ವಿಷಯಗಳೇ ಇಬ್ಬರೂ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಸಂಗಾತಿಯ ಸಣ್ಣ ಪುಟ್ಟ ವಿಷಯಗಳತ್ತ ಹೆಚ್ಚು ಗಮನ ಕೊಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬಹುದು.
  • ದೀರ್ಘವಾದ ಅಪ್ಪುಗೆಯಿರಲಿ : ಸಂಗಾತಿಗಳಿಬ್ಬರೂ ಐಲವ್ ಯು ಎಂದು ಹೇಳಲೇ ಬೇಕೆಂದೇನಿಲ್ಲ. ಆದರೆ ದೀರ್ಘವಾದ ಅಪ್ಪುಗೆಯು ಕೂಡ ನನಗೆ ನಿಮ್ಮ ಮೇಲೆ ಪ್ರೀತಿಯಿದೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಇಲ್ಲದಿದ್ದರೆ ಸಂಗಾತಿಯ ಮಾತುಗಳಿಗೆ ಕಿವಿ ಆಗುವಾಗ ಅಪ್ಪುಗೆಯನ್ನು ನೀಡಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.
  • ನಿಮ್ಮವರಿಗಾಗಿ ಸಮಯ ನೀಡಿ : ಯಾವುದೇ ಸಂಬಂಧವಿರಲಿ ಸಮಯಕ್ಕಿಂತ ಮತ್ತೊಂದು ಅಮೂಲ್ಯವಾದ ವಸ್ತುವಿಲ್ಲ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಸಮಯ ನೀಡುವುದು ಕೂಡ ಒಂದು. ಇಬ್ಬರೂ ಜೊತೆಯಾಹಿ ಒಳ್ಳೆಯ ಸಮಯವನ್ನು ಕಳೆಯುವುದು. ಈ ವೇಳೆಯಲ್ಲಿ ನಿಮ್ಮವರ ಬೇಕು ಬೇಡಗಳು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ನಿಮ್ಮ ಸಂಗಾತಿಗೆ ನೀವು ನೀಡುವ ಸಮಯವು ಖುಷಿ ತರಬಹುದು. ನಿಮ್ಮ ಮೇಲಿನ ಪ್ರೀತಿ ಯನ್ನು ಹೆಚ್ಚಿಸುತ್ತದೆ.
  • ಮೆಚ್ಚುಗೆಯ ಮಾತುಗಳಿರಲಿ : ಸಂಗಾತಿಗಳಿಬ್ಬರೂ ಐಲವ್ ಯು ಹೇಳದೇನೇ ಮೆಚ್ಚುಗೆಯ ಮಾತುಗಳನ್ನು ಒಬ್ಬರು ಇನ್ನೊಬ್ಬರ ಮನಸ್ಸನ್ನು ಗೆಲ್ಲಬಹುದು. ನಿಮ್ಮ ಸಂಗಾತಿಯು ಮಾಡುವ ಅಡುಗೆ, ಮನೆ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿ. ನಿಮ್ಮವರು ಯಾವುದೇ ಕೆಲಸವು ನನ್ನ ಕೈಯಲ್ಲಿ ಆಗುವುದಲ್ಲ ಎಂದು ಕುಳಿತಿದ್ದಾಗ ಅವರಿಗೆ ಧೈರ್ಯ ತುಂಬಿ ಆ ಕೆಲಸದಲ್ಲಿ ತೊಡಗಿ ಕೊಳ್ಳುತ್ತವೆ. ನಿಮ್ಮ ಈ ಮಾತುಗಳು ನಿಮಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್