Deepavali 2024: ಬೆಳಕಿನ ಹಬ್ಬಕ್ಕೆ ಝಗಮಗಿಸುವ ದೀಪಾಲಂಕಾರ ಹೀಗಿರಲಿ

ದೀಪಗಳ ಹಬ್ಬ ಈ ದೀಪಾವಳಿ, ಭಾರತದಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿದ್ದು, ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಹಬ್ಬಕ್ಕೆ ಮನೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಲು ಪ್ಲಾನ್ ಹಾಕಿಕೊಂಡಿರಬಹುದು. ಆದರೆ, ದೀಪಾವಳಿಯ ಸೊಬಗನ್ನು ಹೆಚ್ಚಿಸಲು ಈ ರೀತಿಯ ದೀಪಗಳನ್ನು ಬಳಕೆ ಮಾಡಿ. ಹಾಗಾದ್ರೆ ಝಗಮಗಿಸುವ ದೀಪಗಳ ಅಲಂಕಾರಕ್ಕೆ ಕೆಲವು ಟಿಪ್ಸ್ ಗಳು ಇಲ್ಲಿದೆ.

Deepavali 2024: ಬೆಳಕಿನ ಹಬ್ಬಕ್ಕೆ ಝಗಮಗಿಸುವ ದೀಪಾಲಂಕಾರ ಹೀಗಿರಲಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2024 | 2:09 PM

ನವರಾತ್ರಿ ಹಬ್ಬವೇನೋ ಮುಗಿದಾಯಿತು, ಇನ್ನೇನು ಕೆಲವೇ ದಿನಗಳಲ್ಲಿ ದೀಪಗಳ ಹಬ್ಬ ದೀಪಾವಳಿ ಬರುತ್ತದೆ. ಈ ಹಬ್ಬದ ಹೆಸರು ಕೇಳಿದ ಕೂಡಲೇ ಮೊದಲು ನೆನಪಾಗುವುದೇ ಈ ದೀಪಗಳು. ಈ ಬೆಳಕಿನ ಹಬ್ಬ ದೀಪಾವಳಿಯು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಹಬ್ಬವಾಗಿದೆ. ಮನೆಮಂದಿಯೆಲ್ಲಾ ಸಂಭ್ರಮದಿಂದ ಆಚರಿಸುವ ಈ ಹಬ್ಬದಲ್ಲಿ ದೀಪಗಳೇ ಹೆಚ್ಚು ಪ್ರಾಮುಖ್ಯವಾದುದು. ಮಣ್ಣಿನ ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಾರೆ. ಆದರೆ ಈ ರೀತಿಯ ಝಗಮಗಿಸುವ ದೀಪಗಳಿಂದ ಮನೆಯನ್ನು ಅಲಂಕರಿಸಿಕೊಳ್ಳಬಹುದು.

  • ಗೂಡುದೀಪಗಳು : ದೀಪಗಳ ಹಬ್ಬಕ್ಕೆ ಗೂಡುದೀಪಗಳಿಲ್ಲದೇ ಹೋದರೆ ಹೇಗೆ ಹೇಳಿ, ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಗೂಡುದೀಪಗಳು ಲಭ್ಯವಿದ್ದು, ಇವುಗಳನ್ನು ಖರೀದಿಸಿ ಮನೆಯನ್ನು ಅಲಂಕರಿಸಬಹುದು. ಇಲ್ಲದಿದ್ದರೆ ಸಮಯವಿದ್ದರೆ ನಿಮ್ಮ ಕೈಯಾರೆ ಈ ದೀಪಗಳನ್ನು ತಯಾರಿಸಿ ಅಲಂಕಾರಕ್ಕೆ ಬಳಸಿಕೊಳ್ಳಿ.
  • ಹ್ಯಾಂಗಿಂಗ್ ದೀಪಗಳು : ದೀಪಾವಳಿಗೆ ನಿಮ್ಮಮನೆಯಲ್ಲಿ ದೀಪಗಳಿಂದ ಝಗಮಗಿಸಬೇಕಾದರೆ ತೂಗಾಡುವ ಹ್ಯಾಂಗಿಂಗ್ ದೀಪಗಳಿಂದ ಅಲಂಕರಿಸಿ. ಮನೆಯಲ್ಲೇ ಪೇಪರ್ ಅಥವಾ ಪ್ಲಾಸ್ಟಿಕ್ ಬಾಟಲಿಗಳ ಬಳಸಿ ಗೂಡುದೀಪವನ್ನು ತಯಾರಿಸಿ ಅಲಂಕಾರಕ್ಕೆ ಬಳಸಿಕೊಳ್ಳಿ.
  • ಸ್ಟ್ರಿಂಗ್ ದೀಪಗಳು : ಸ್ಟ್ರಿಂಗ್ ದೀಪಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ. ಈ ದೀಪಗಳನ್ನಿ ಬೇರೆ ಬೇರೆ ರೂಪಗಳಲ್ಲಿ ಅಲಂಕಾರಕ್ಕಾಗಿ ಬಳಸಬಹುದು. ಮನೆಯ ಪ್ರತಿ ಮೂಲೆಯಲ್ಲಿ ಈ ದೀಪಗಳನ್ನು ಇಟ್ಟು ಹಬ್ಬದ ಕಳೆಯನ್ನು ಹೆಚ್ಚಿಸಬಹುದು.
  • ಲೋಟಸ್ ಲ್ಯಾಂಪ್ಸ್: ಮನೆಯ ವೆರಾಂಡವನ್ನು ಅಲಂಕಾರಕ್ಕಾಗಿ ಈ ದೀಪವನ್ನು ಬಳಸಿಕೊಳ್ಳಬಹುದು. ಈ ಲ್ಯಾಂಪ್‌ಗಳನ್ನು ನೀರಿನಲ್ಲಿ ಹರಿಬಿಡಬಹುದಾಗಿದ್ದು, ಈ ದೀಪಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತದೆ.
  • ರಂಗೋಲಿಯಿಂದ ಕೂಡಿದ ದೀಪಾಲಂಕಾರ : ಹಬ್ಬದ ಕಳೆ ಯನ್ನು ತಂದುಕೊಡುವುದೇ ಈ ರಂಗೋಲಿ. ಈ ದೀಪಗಳ ಹಬ್ಬಕ್ಕೆ ರಂಗೋಲಿಯನ್ನು ಬಿಡಿಸಿ ಅದರ ನಡುವೆ ದೀಪಗಳನ್ನಿಟ್ಟು ಅಲಂಕರಿಸಬಹುದು. ಇಲ್ಲದಿದ್ದರೆ ಹೂವಿನ ಎಸಳುಗಳಿಂದ ರಂಗೋಲಿ ಬಿಡಿಸಿ ಅಲಂಕಾರಕ್ಕಾಗಿ ಮಣ್ಣಿನ ದೀಪಗಳನ್ನು ಬಳಸಬಹುದು. ಈ ರೀತಿಯ ಅಲಂಕಾರಗಳು ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ