Soan Papdi: ಸೋನ್ ಪಾಪ್ಡಿ ಮೊದಲು ತಯಾರಿಸಿದ್ದು ಎಲ್ಲಿ? ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಸೋನ್ ಪಾಪ್ಡಿಯ ಇತಿಹಾಸವು ಮಹಾರಾಷ್ಟ್ರದಲ್ಲಿ ಬೇರೂರಿದೆ ಎಂದು ಕೆಲವೊಂದಿಷ್ಟು ಜನ ಹೇಳಿದರೆ, ಇನ್ನೂ ಕೆಲವರು ಸೋನ್ ಪಾಪ್ಡಿ ರಾಜಸ್ಥಾನದ ರಾಜಮನೆತನದಿಂದ ಹುಟ್ಟಿಕೊಂಡಿತು ಎಂದು ವಾದ ಮಂಡಿಸುತ್ತಿದ್ದಾರೆ. ಹಾಗಿದ್ರೆ ಸೋನ್ ಪಾಪ್ಡಿ ತಯಾರಿಕೆಯು ಎಲ್ಲಿ ಪ್ರಾರಂಭವಾಯಿತು ಮತ್ತು ಅದು ಹೇಗೆ ಪ್ರಸಿದ್ಧವಾಯಿತು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Soan Papdi: ಸೋನ್ ಪಾಪ್ಡಿ ಮೊದಲು ತಯಾರಿಸಿದ್ದು ಎಲ್ಲಿ? ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ
Soan Papdi
Follow us
|

Updated on: Oct 18, 2024 | 5:02 PM

ಬಾಯಲ್ಲಿಟ್ಟರೆ ಕರಗುವಂತ ಸೋನ್ ಪಾಪ್ಡಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಬ್ಬ ಬಂತೆಂದರೆ ಸಾಕು ಚಪ್ಪರಿಸಿಕೊಂಡು ತಿನ್ನುವ ಸಿಹಿಯಲ್ಲಿ ಸೋನ್ ಪಾಪ್ಡಿಯೂ ಕೂಡ ಒಂದು. ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ. ಈ ಸಂತೋಷದ ಹಬ್ಬದ ಸಮಯದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇವೆಲ್ಲವುಗಳ ನಡುವೆ ಹೆಚ್ಚು ಮಾತನಾಡುವ ಸಿಹಿ ಎಂದರೆ ಸೋನ್ ಪಾಪ್ಡಿ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಕೂಡ ಶುರುವಾಗಿದೆ.

ಸೋನ್ ಪಾಪ್ಡಿಯ ಇತಿಹಾಸವು ಮಹಾರಾಷ್ಟ್ರದಲ್ಲಿ ಬೇರೂರಿದೆ ಎಂದು ಕೆಲವೊಂದಿಷ್ಟು ಜನ ಹೇಳಿದರೆ, ಇನ್ನೂ ಕೆಲವರು ಸೋನ್ ಪಾಪ್ಡಿ ರಾಜಸ್ಥಾನದ ರಾಜಮನೆತನದ ಅಡುಗೆಮನೆಯಿಂದ ಹುಟ್ಟಿಕೊಂಡಿತು ಎಂದು ವಾದ ಮಂಡಿಸುತ್ತಿದ್ದಾರೆ. ಹಾಗಿದ್ರೆ ಸೋನ್ ಪಾಪ್ಡಿ ತಯಾರಿಕೆಯು ಎಲ್ಲಿ ಪ್ರಾರಂಭವಾಯಿತು ಮತ್ತು ಅದು ಹೇಗೆ ಪ್ರಸಿದ್ಧವಾಯಿತು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಇಲ್ಲಿ ಸೋನ್ ಪಾಪ್ಡಿಯ ಯಾವುದೇ ದೃಢೀಕೃತ ಇತಿಹಾಸವಿಲ್ಲ. ಆದಾಗ್ಯೂ, ಇದರ ತಯಾರಿಕೆಯು ಮಹಾರಾಷ್ಟ್ರ ಮತ್ತು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ.

ಇದನ್ನೂ ಓದಿ: Deepavali 2024: ಹಬ್ಬಕ್ಕೆ ತ್ವಚೆಯ ಹೊಳಪು ಹೆಚ್ಚಿಸಲು ಈ ಆಹಾರ ಸೇವನೆ ಇರಲಿ

ಪಿಸ್ಮನಿಯೆ ಒಂದು ವಿಶೇಷ ರೀತಿಯ ಟರ್ಕಿಶ್ ಸಿಹಿತಿಂಡಿ. ಇದರಿಂದ ಸೋನ್ ಪಾಪ್ಡಿ ಸ್ಫೂರ್ತಿ ಪಡೆದಿದ್ದಾರೆ ಎಂದು ಕೆಲವರು ನಂಬುತ್ತಾರೆ. ಆದಾಗ್ಯೂ, ಪಿಸ್ಮಾನಿಯೊವನ್ನು ಹಿಟ್ಟು, ಬೆಣ್ಣೆ, ಸಕ್ಕರೆ ಮತ್ತು ಪಿಸ್ತಾಗಳಿಂದ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ, ಸೋನ್ ಪಾಪ್ಡಿ ಮಾಡಲು ಹುರಿದ ಹಿಟ್ಟು, ಸಕ್ಕರೆ ಬಳಸಲಾಗುತ್ತದೆ.

ಸೋನ್ ಪಾಪ್ಡಿಯನ್ನು ಹಲವು ಹೆಸರುಗಳು:

ಮಹಾರಾಷ್ಟ್ರದಿಂದ ಹುಟ್ಟಿದ ಸೋನ್ ಪಾಪ್ಡಿ ಗುಜರಾತ್, ರಾಜಸ್ಥಾನ ಮತ್ತು ಪಂಜಾಬ್, ಉತ್ತರ ಪ್ರದೇಶದ ಮೂಲಕ ಬಂಗಾಳವನ್ನು ತಲುಪಿ ಇಂದು ದೇಶಾದ್ಯಂತ ವ್ಯಾಪಿಸಿದೆ. ಅಂದಹಾಗೆ, ಸೋನ್ ಪಾಪ್ಡಿ ಮಹಾರಾಷ್ಟ್ರಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಇದನ್ನು ಸಾನ್ ಪಾಪ್ಡಿ, ಸೋಹನ್ ಪಾಪ್ಡಿ ಮತ್ತು ಶೋಮ್ ಪಾಪ್ಡಿ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸೋನ್ ಪಾಪ್ಡಿಯಂತೆಯೇ, ಪಾಟಿಸಾ ಎಂಬ ಮತ್ತೊಂದು ಸಿಹಿತಿಂಡಿ ಇದೆ. ವಾಸ್ತವವಾಗಿ, ಇದು ದೇಶದ ಅತ್ಯಂತ ಪ್ರಸಿದ್ಧ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಆದರೆ ಇದಕ್ಕೆ ಹೋಲಿಸಿದರೆ, ಪಾಟಿಸಾ ಸ್ವಲ್ಪ ಗಟ್ಟಿಯಾದ ಸಿಹಿಯಾಗಿದೆ.

ಸೋನ್ ಪಾಪ್ಡಿ ಹಬ್ಬದ ವಿಶೇಷ ಸಿಹಿಯಾಗುತ್ತದೆ ಏಕೆಂದರೆ ಅದು ದೀರ್ಘಕಾಲದವರೆಗೆ ಕೆಡುವುದಿಲ್ಲ. ಇದು ಎಲ್ಲೆಡೆ ಸುಲಭವಾಗಿ ಲಭ್ಯವಿರುವುದು ಮಾತ್ರವಲ್ಲದೆ, ಇಂದು ಅನೇಕ ಬ್ರಾಂಡೆಡ್ ಕಂಪನಿಗಳು ಸೋನ್ ಪಾಪ್ಡಿ ಗಿಫ್ಟ್ ಪ್ಯಾಕ್ ಅನ್ನು ಸಹ ನೀಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು