Deepavali 2024: ಹಬ್ಬಕ್ಕೆ ತ್ವಚೆಯ ಹೊಳಪು ಹೆಚ್ಚಿಸಲು ಈ ಆಹಾರ ಸೇವನೆ ಇರಲಿ
ಹಬ್ಬದ ಸಮಯದಲ್ಲಿ ನಾವು ನಮ್ಮ ದೈಹಿಕ ಆರೋಗ್ಯವನ್ನು ಹೇಗೆ ಕಾಳಜಿ ವಹಿಸುತ್ತೇವೆ. ಅದೇ ರೀತಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗುತ್ತದೆ. ಹಬ್ಬಕ್ಕೆ ಹೊಳೆಯುವ ಚರ್ಮವನ್ನು ಪಡೆಯಲು ಕೆಲವು ಆಹಾರಗಳ ಸೇವನೆಯನ್ನು ಮಾಡುವುದು ಒಳ್ಳೆಯದು. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸಲು ತಜ್ಞರ ಸಲಹೆಗಳು ಇಲ್ಲಿವೆ.
ಹಬ್ಬ ಎಂದ ಮೇಲೆ ಸಡಗರ ಸಂಭ್ರಮವಿರುತ್ತದೆ, ಆದರೆ ಹೆಣ್ಣು ಮಕ್ಕಳು ಹಬ್ಬಕ್ಕೆ ತಯಾರಿ ನಡೆಸುವುದರ ಜೊತೆಗೆ ತಮ್ಮ ಸೌಂದರ್ಯ ಹಾಗೂ ಅಲಂಕಾರದ ಕಡೆಗೂ ಗಮನ ನೀಡುತ್ತಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತದೆ.ಹಬ್ಬ ಹರಿದಿನಗಳಲ್ಲಿ ತ್ವಚೆಯ ಆರೈಕೆಯೂ ಬಹಳ ಮುಖ್ಯ. ಈ ವಿಶೇಷ ದಿನ ಗಳಲ್ಲಿ ಮೇಕಪ್ ಮಾಡುವುದನ್ನು ಹೊರತು ಪಡಿಸಿ ಅದಕ್ಕೂ ಮೊದಲು ಹೊಳೆಯುವ ಚರ್ಮಕ್ಕಾಗಿ ಈ ಆಹಾರವನ್ನು ತಪ್ಪದೇ ಸೇವಿಸುವುದು ಪರಿಣಾಮಕಾರಿಯಾಗಿದೆ.
- ಕಿತ್ತಳೆ, ಹಾಗಲಕಾಯಿ ಮತ್ತು ಕೀವಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹೀಗಾಗಿ ಈ ಹಣ್ಣನ್ನು ಹೆಚ್ಚು ಸೇವಿಸಿ ಮುಖದ ಕಾಂತಿಯನ್ನು ಇಮ್ಮಡಿಗೊಳಿಸಬಹುದು.
- ದಿನನಿತ್ಯ ಆಹಾರದಲ್ಲಿ ಪಾಲಕ್, ಮೆಂತ್ಯೆ ಸೇರಿದಂತೆ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಿ. ಇದು ತ್ವಚೆಗೆ ವಿಟಮಿನ್ ಗಳನ್ನು ಒದಗಿಸಿ ಚರ್ಮವನ್ನು ಕಾಂತಿಯುತವನ್ನಾಗಿಸಲು ಸಹಾಯ ಮಾಡುತ್ತದೆ.
- ಬಾದಾಮಿ, ವಾಲ್‌ನಟ್ಸ್, ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿವೆ. ಇದು ರಾಡಿಕಲ್ ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಬ್ಬ ಹರಿದಿನಗಳಲ್ಲಿ ಕಾಂತಿಯುತ ತ್ವಚೆ ಪಡೆಯಲು ಇದರ ಸೇವಿಸಬಹುದು.
- ಮೊಸರು ಮತ್ತು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಸೇವನೆಯೂ, ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸಿ, ಮೃದುವಾಗಿಸುತ್ತದೆ.
- ಅರಿಶಿನ ಮತ್ತು ಶುಂಠಿ ನಿಮ್ಮ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಶುಂಠಿಯ ಉರಿಯೂತದ ಗುಣಲಕ್ಷಣಗಳು ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು ಅರಶಿನ ಹಾಲು ಹಾಗೂ ಶುಂಠಿ ಚಹಾದ ಮೂಲಕ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
- ಹಬ್ಬದ ನಿಮ್ಮ ತ್ವಚೆಯನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ಬಹಳ ಮುಖ್ಯ, ಪ್ರತಿದಿನ 8-10 ಗ್ಲಾಸ್ ನೀರು ಕುಡಿಯಿರಿ. ಅದಲ್ಲದೇ, ತೆಂಗಿನ ನೀರು ಮತ್ತು ತಾಜಾ ಹಣ್ಣುಗಳ ರಸದ ಸೇವನೆಯೂ ಚರ್ಮವನ್ನು ಪೋಷಿಸುವುದಲ್ಲದೆ, ತ್ವಚೆಯ ಕಾಂತಿಗೆ ಸಹಾಯಕವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ