ಪರಿಶುದ್ಧವಾದ ಪ್ರೀತಿಯನ್ನು ಬಯಸುವ ಪ್ರತಿಯೊಂದು ಪ್ರೇಮಿಗೂ ಕೂಡ, ಏನೇ ಸಮಸ್ಯೆ ಬಂದರೂ ಕೂಡ ಸಂಬಂಧವನ್ನು ಸದಾ ಉಳಿಸಲು ಬಯಸುತ್ತಾರೆ. ಜೊತೆಗೆ ಜೀವನಪೂರ್ತಿ ಈ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಆದ್ದರಿಂದ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿ ಶಾಶ್ವತವಾಗಿ ಉಳಿಸಿಕೊಂಡು ಹೋಗಬೇಕಾದರೆ ಈ ಯಾವಾತ್ತಿಗೂ ಈ ತಪ್ಪುಗಳನ್ನು ಮಾಡದಿರಿ. ನಿಮ್ಮ ಈ ಗುಣಗಳು ನಿಮ್ಮ ಸಂಗಾತಿಯೊಂದಿನ ಸಂಬಂಧದಲ್ಲಿ ಬಿರುಕು ಮೂಡಿಸಲು ಕಾರಣವಾಗಬಹುದು.
ಯಾವುದೇ ಒಂದು ಸಂಬಂಧದಲ್ಲಿ ಪರಸ್ಪರ ನಂಬಿಕೆ ಅಗತ್ಯವಾಗಿದೆ. ನಿಮ್ಮ ಮೇಲೆ ನಂಬಿಕೆ ಅಥವಾ ನೀವು ಅವರ ಮೇಲೆ ನಂಬಿಕೆ ಇಡಲು ಸಾಧ್ಯವಾಗದಿದ್ದರೆ, ಈ ಸಂಬಂದವನ್ನು ಮುಂದುವರಿಸುವುದು ಉತ್ತಮವಲ್ಲ. ಆದ್ದರಿಂದ ನೀವು ಈ ಸಂಬಂಧವನ್ನು ಜೀವನಪೂರ್ತಿ ಇರಬೇಕು ಎಂದು ಬಯಸಿದರೆ ಮೊದಲಿಗೆ ಪರಸ್ಪರ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯ.
ನಿಮ್ಮ ಸಂಗಾತಿಯ ಹಿಂದಿನ ಸಂಬಂಧಗಳು ಅಥವಾ ಅನುಭವಗಳ ಬಗ್ಗೆ ತಿಳಿದುಕೊಳ್ಳುವುದು ಅಸೂಯೆ ಅಥವಾ ಅಭದ್ರತೆಗೆ ಕಾರಣವಾಗಬಹುದು, ಅವುಗಳು ಪ್ರಸ್ತುತ ನಿಮ್ಮ ಸಂಬಂಧಕ್ಕೆ ಸಂಬಂಧಿಸದಿದ್ದರೂ ಸಹ, ಹಿಂದಿನ ಸಂಬಂಧದ ಬಗ್ಗೆ ಕೆಣಕುವುದು ಸೂಕ್ತವಲ್ಲ. ಸಂಬಂಧದಲ್ಲಿ ಅಸೂಯೆ ನಿಮ್ಮ ಸಂಬಂಧದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ನಿಮ್ಮ ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ತಿಳಿದಿದೆಯೇ?
ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಚರ್ಚೆಗೆ ಹೋಗದಿರಿ. ಇದು ಜಗಳಕ್ಕೆ ಮತ್ತು ಸಾಕಷ್ಟು ಭಿನ್ನಾಬಿಪ್ರಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಅವರೊಂದಿಗೆ ಆರೋಗ್ಯಕರವಾಗಿ ಮಾತುಕತೆ ನಡೆಸಿ. ಅವರ ಆರೋಗ್ಯದ ಬಗ್ಗೆ ಮಾತಾಡಿ.
ನಿಮ್ಮ ಸಂಗಾತಿಯನ್ನು ಸದಾ ಗೌರವದಿಂದ ಕಾಣುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನಿಮ್ಮಿಬ್ಬರ ನಡುವೆ ತಿರಸ್ಕಾರ ಭಾವನೆ ಹೆಚ್ಚಾಗುತ್ತಾ ಹೋದ ಹಾಗೆ ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ. ನಿಮ್ಮಿಬರ ನಡುವಿನ ಮಾತುಕತೆ ಸರಿಯಾಗಿ ಇಲ್ಲದಿದ್ದಾಗ ಅಲ್ಲಿ ಬಿನ್ನಾಭಿಪ್ರಾಯಗಳು, ನಕಾರಾತ್ಮಕ ಭಾವನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಿಮಗೆ ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಮುಕ್ತ ಮಾತುಕತೆಯಿಂದ ನಿಮ್ಮ ಸಂಗಾತಿಗೆ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳು ಸಾಧ್ಯವಿದೆ.
ನಿಮ್ಮ ಸಂಗಾತಿಯ ಜೀವನದಲ್ಲಿ ಕೆಟ್ಟ ಘಟನೆ ನಡೆದಿರಬಹುದು. ಅದನ್ನು ಆದಷ್ಟು ಅವರ ಜೀವನದಿಂದ ಮರೆಯುವಂತೆ ಮಾಡಿ. ಬದಲಾಗಿ ಆ ಕೆಟ್ಟ ಘಟನೆಗಳನ್ನೇ ಮತ್ತೇ ಮತ್ತೆ ನೆನಪಿಸಿ ಅವರ ಭಾವನೆಗೆ ದಕ್ಕೆಯುಂಟು ಮಾಡದಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:52 pm, Wed, 8 March 23