Women’s Day 2023: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ

International Women’s Day: ಪ್ರತಿವರ್ಷ ಮಾರ್ಚ್​ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯನ್ನು ಮಾರ್ಚ್​ನಲ್ಲೇ ಆಚರಿಸಲು ಕಾರಣವೇನು? ಇದರ ಹಿನ್ನೆಲೆ ಏನು ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.

Women's Day 2023: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ
ಸಾಂಧರ್ಬಿಕ ಚಿತ್ರ (ಬಲಗಡೆ) ನೀರಾ ಆರ್ಯ (ಎಡಚಿತ್ರ)
Follow us
ವಿವೇಕ ಬಿರಾದಾರ
|

Updated on:Mar 08, 2023 | 8:58 AM

ಹಿಂದಿನ ದಿನಗಳಿಗೆ ಹೋಲಿಸಿದರೆ ಸದ್ಯ ಮಹಿಳೆಯರು ಎಲ್ಲ ರಂಗದಲ್ಲೂ ಬೆಳೆದು ನಿಂತಿದ್ದಾರೆ. ಎಲ್ಲ ಕ್ಷೇತ್ರದಲ್ಲು ಸಾಧನೆಯನ್ನು ಮಾಡಿದ್ದಾರೆ. ಪುರುಷ ಸಮಾನವಾಗಿ ನಾವು ಇದ್ದೇವೆ ಎಂದು ಸಾಬೀತು ಮಾಡುತ್ತಿದ್ದಾರೆ. ಪ್ರತಿವರ್ಷ ಮಾರ್ಚ್​ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (International Women’s Day) ಆಚರಿಲಸಾಗುತ್ತದೆ. ಮಹಿಳಾ ದಿನಾಚರಣೆಯನ್ನು (Women’s Day) ಮಾರ್ಚನಲ್ಲೇ ಆಚರಿಸಲು ಕಾರಣವೇನು, ಇದರ ಹಿನ್ನೆಲೆ ಏನು ಎಂಬುವುದರ ಕುರಿತು ಇಲ್ಲಿದೆ ಮಾಹಿತಿ.

 ಯಾವಾಗ ಮಹಿಳಾ ದಿನಾಚರಣೆ ಆರಂಭವಾಯ್ತು?

ವಿಶ್ವಸಂಸ್ಥೆಯು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಯುಎನ್​ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಮಾರ್ಚ್​ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಯುಎನ್ ಥೀಮ್ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದು ಘೋಷಿಸಿದೆ.

ಪುರಾಣಗಳಲ್ಲಿ, ಸ್ವತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ಅನೇಕ ನಾರಿಯರ ದಿಟ್ಟತನವನ್ನು ಕಾಣಬಹುದಾಗಿದೆ. ಸ್ವತಂತ್ರ್ಯ ಹೋರಾಟದ ಮುನ್ನೆಲೆಗೆ ಮತ್ತು ಗುಪ್ತವಾಗಿದ್ದುಕೊಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನ ಮತ್ತು ಜೀವವನ್ನು ಮುಡಿಪಾಗಿಟ್ಟಿದ್ದನ್ನು ಓದಿದ್ದೇವೆ ಮತ್ತು ಕೇಳಿದ್ದೇವೆ. ಇಂದಿಗೂ ಅನೇಕ ಮಹಿಳೆಯರು ಸಮಾಜ, ದೇಶಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ ಹಾಗೂ ಕೊಡಲಿದ್ದಾರೆ. ಹೀಗೆ ಇತಿಹಾಸ ಪುಟಗಳಲ್ಲಿ ಕೆಲವು ಮಹಿಳೆಯರ ನಾರಿಶಕ್ತಿಯನ್ನು ತಿಳಿಯೋಣ

ಸುಭಾಷ ಚಂದ್ರ ಬೋಸ್​ ರನ್ನು ಉಳಿಸಲು ಪತಿಯನ್ನೇ ಸಂಹಾರ ಮಾಡಿದ ನೀರಾ ಆರ್ಯ

ನೇತಾಜಿ ಸುಭಾಷ ಚಂದ್ರ ಬೋಸ್ (Subhas Chandra Bose)​​ ಅವರು ಸ್ಥಾಪಿಸಿದ್ದ ದಿ ಇಂಡಿಯನ್ ನ್ಯಾಷನಲ್ ಆರ್ಮಿ (INA) ಅಥವಾ ಆಝಾದ್ ಹಿಂದ್ ಫೌಜ್ (Azad Hind Fauz) ಸಂಘಟನೆಯಲ್ಲಿದ್ದರು ಓರ್ವ ದಿಟ್ಟ ಮಹಿಳೆ. ಅವರೇ ನೀರಾ ಆರ್ಯ. ಇವರು ನೇತಾಜಿ ಸುಭಾಷ ಚಂದ್ರ ಬೋಸ್​ ಅವರನ್ನು ಉಳಿಸಲು ಪತಿಯನ್ನೇ ಸಂಹಾರ ಮಾಡಿದ್ದಾರೆ. ಹೌದು ಆಶ್ಚರ್ಯವೆನಿಸಿದರು ಸತ್ಯ…

ನೀರಾ ಆರ್ಯ ಅವರು ಮಾರ್ಚ್ 5, 1902 ರಂದು ತ್ತರ ಪ್ರದೇಶದ ಭಾಘಪತ್‌ ಜಿಲ್ಲೆಯ ಖೇಕ್ರಾ ನಗರದಲ್ಲಿ ಜನಿಸಿದರು. ಇವರ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಕಲ್ಕತ್ತಾದಲ್ಲಿ ಮುಗಿಸಿದರು. ನೀರಾ ಆರ್ಯ ಬ್ರಿಟಿಷ್ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದ ಜೈಶಂಕರ್ ದಾಸ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ನೀರಾ ಆರ್ಯ ಸುಭಾಷ್​ ಚಂದ್ರ ಬೋಸ್​ ಅವರ ಭಾಷಣಗಳಿಂದ ಪ್ರೇರೇಪಿತರಾದ, ಅವರಿಂದ ಸ್ಪೂರ್ತಿಗೊಂಡು ಅವರ ತಂಡ ಸೇರಿದರು. ನಂತರ INAಯ ಝಾನ್ಸಿ ರಾಣಿ ರೆಜಿಮೆಂಟ್‌ನ ಜವಾಬ್ದಾರಿಯನ್ನು ಹೊತ್ತುಕೊಂಡರು.

ಬ್ರಿಟೀಷರಿಗೆ ನೇತಾಜಿಯವರನ್ನು ಕಂಡರೆ ಸಿಟ್ಟು, ಭಯ ಎಲ್ಲವು ಇತ್ತು. ಅಷ್ಟರಮಟ್ಟಿಗೆ ನೇತಾಜಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಬ್ರಿಟೀಷರು ಹೇಗಾದರು ಮಾಡಿ ಸುಭಾಷ ಚಂದ್ರ ಬೋಸ್ ಅವರನ್ನು ಮುಗಿಸಬೇಕು ಎಂದು ಹೊಂಚು ಹಾಕುತ್ತಿದ್ದರು. ಬ್ರಿಟೀಷರಿಗೆ ಜೈಶಂಕರ್ ದಾಸ್‌ ಪತ್ನಿ ನೀರಾ ಆರ್ಯ ಐಎನ್​ಎ ಸೇರಿರುವ ವಿಷಯ ತಿಳಿದಿತ್ತು. ಹೀಗಾಗಿ ಈಕೆಯ ಸಹಾಯ ಪಡೆದು, ಸಾಧ್ಯವಾದರೆ ನೇತಾಜಿಯವರನ್ನು ಕೊಲ್ಲುವ ಜವಾಬ್ದಾರಿಯನ್ನು ನೀರಾ ಪತಿ ಜೈಶಂಕರ್ ದಾಸ್‌ಗೆ ನೀಡಿದ್ದರು.

ಈ ಹಿನ್ನೆಲೆ ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ನೀಡುವಂತೆ ಜೈಶಂಕರ್ ಪದೇ ಪದೇ ಪತ್ನಿ ನೀರಾ ಆರ್ಯ ಅವರನ್ನು ಪೀಡಿಸುತ್ತಿದ್ದನು. ಆದರೆ ನೀರಾ ಮಾತ್ರ ಯಾವುದೇ ವಿಷಯವನ್ನು ಆತನಲ್ಲಿ ಬಾಯಿ ಬಿಟ್ಟಿರಲಿಲ್ಲ. ಆದರೆ ಜೈ ಶಂಕರ್​​ ನೇತಾಜಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದನು. ಆಗ ಜೈಶಂಕರ್​ ದಾಸ್​​, ನೇತಾಜಿಯವರನ್ನು ಹತ್ಯೆಗೈಯಲೂ ಸಿದ್ದನಾಗಿ, ಅವರಿದ್ದ ಸ್ಥಳಕ್ಕೆ ಹೋಗಿ ಅವರ ಮೇಲೆ ಗುಂಡು ಹಾರಿಸಿದನು. ಆಗ ನೇತಾಜಿಯವರು ಪಾರಾಗಿದ್ದರು. ಬಳಿಕ ಮತ್ತೊಮ್ಮೆ ಜೈ ಶಂಕರ್​ ನೇತಾಜಿಯವರ ಮೇಲೆ ಆಕ್ರಮಣ ನಡೆಸುವ ಮುನ್ನ ಸ್ವತಃ ನೀರಾ ಆರ್ಯ ಅವರೇ, ಪತಿ ಜೈ ಶಂಕರ್‌ ಅನ್ನು ಹರಿತವಾದ ಖಡ್ಗದಿಂದಲೇ ಕೊಂದು ಹಾಕಿದರು.

ಗಂಡನ ಹತ್ಯೆ ಕಾರಣಕ್ಕಾಗಿ ನೀರಾ ಆರ್ಯ ಅವರನ್ನು ಬ್ರಿಟಿಷರು ಬಂಧಿಸಿ ಅಂಡಮಾನ್ ಜೈಲಿಗಟ್ಟಿದ್ದರು. ಅಲ್ಲಿಯೂ ನೇತಾಜಿ ಬಗ್ಗೆ ಮಾಹಿತಿ ನೀಡುವಂತೆ ಸಾಕಷ್ಟು ಚಿತ್ರಹಿಂಸೆಯನ್ನು ಬ್ರಿಟಿಷರು ನೀಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ನೀರಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಜುಲೈ 26, 1998 ರಂದು ಹೈದರಾಬಾದ್​ನಲ್ಲಿ ಕೊನೆಯುಸಿರೆಳೆದರು.

Published On - 8:33 am, Wed, 8 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ