ನಿಮ್ಮ ಸಂಬಂಧವನ್ನು ಕಡೆವರೆಗೂ ಉಳಿಸಿಕೊಳ್ಳಲು ಬಯಸಿದರೆ, ಈ ಗುಣಗಳನ್ನು ಬಿಟ್ಟು ಬಿಡಿ

ಪರಿಶುದ್ಧವಾದ ಪ್ರೀತಿಯನ್ನು ಬಯಸುವ ಪ್ರತಿಯೊಂದು ಪ್ರೇಮಿಯೂ ಕೂಡ, ಏನೇ ಸಮಸ್ಯೆ ಬಂದರೂ ಕೂಡ ಸಂಬಂಧವನ್ನು ಸದಾ ಉಳಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿ ಶಾಶ್ವತವಾಗಿ ಉಳಿಸಿಕೊಂಡು ಹೋಗಬೇಕಾದರೆ ಈ ಯಾವಾತ್ತಿಗೂ ಈ ತಪ್ಪುಗಳನ್ನು ಮಾಡದಿರಿ.

ನಿಮ್ಮ ಸಂಬಂಧವನ್ನು ಕಡೆವರೆಗೂ ಉಳಿಸಿಕೊಳ್ಳಲು ಬಯಸಿದರೆ, ಈ ಗುಣಗಳನ್ನು ಬಿಟ್ಟು ಬಿಡಿ
ಆರೋಗ್ಯಕರ ಸಂಬಂಧImage Credit source: Dating Scopes
Follow us
ಅಕ್ಷತಾ ವರ್ಕಾಡಿ
|

Updated on:Mar 08, 2023 | 3:54 PM

ಪರಿಶುದ್ಧವಾದ ಪ್ರೀತಿಯನ್ನು ಬಯಸುವ ಪ್ರತಿಯೊಂದು ಪ್ರೇಮಿಗೂ ಕೂಡ, ಏನೇ ಸಮಸ್ಯೆ ಬಂದರೂ ಕೂಡ ಸಂಬಂಧವನ್ನು ಸದಾ ಉಳಿಸಲು ಬಯಸುತ್ತಾರೆ. ಜೊತೆಗೆ ಜೀವನಪೂರ್ತಿ ಈ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಆದ್ದರಿಂದ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿ ಶಾಶ್ವತವಾಗಿ ಉಳಿಸಿಕೊಂಡು ಹೋಗಬೇಕಾದರೆ ಈ ಯಾವಾತ್ತಿಗೂ ಈ ತಪ್ಪುಗಳನ್ನು ಮಾಡದಿರಿ. ನಿಮ್ಮ ಈ ಗುಣಗಳು ನಿಮ್ಮ ಸಂಗಾತಿಯೊಂದಿನ ಸಂಬಂಧದಲ್ಲಿ ಬಿರುಕು ಮೂಡಿಸಲು ಕಾರಣವಾಗಬಹುದು.

ನಂಬಿಕೆಯ ಸಮಸ್ಯೆಗಳು:

ಯಾವುದೇ ಒಂದು ಸಂಬಂಧದಲ್ಲಿ ಪರಸ್ಪರ ನಂಬಿಕೆ ಅಗತ್ಯವಾಗಿದೆ. ನಿಮ್ಮ ಮೇಲೆ ನಂಬಿಕೆ ಅಥವಾ ನೀವು ಅವರ ಮೇಲೆ ನಂಬಿಕೆ ಇಡಲು ಸಾಧ್ಯವಾಗದಿದ್ದರೆ, ಈ ಸಂಬಂದವನ್ನು ಮುಂದುವರಿಸುವುದು ಉತ್ತಮವಲ್ಲ. ಆದ್ದರಿಂದ ನೀವು ಈ ಸಂಬಂಧವನ್ನು ಜೀವನಪೂರ್ತಿ ಇರಬೇಕು ಎಂದು ಬಯಸಿದರೆ ಮೊದಲಿಗೆ ಪರಸ್ಪರ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯ.

ಅಭದ್ರತೆ ಮತ್ತು ಅಸೂಯೆ:

ನಿಮ್ಮ ಸಂಗಾತಿಯ ಹಿಂದಿನ ಸಂಬಂಧಗಳು ಅಥವಾ ಅನುಭವಗಳ ಬಗ್ಗೆ ತಿಳಿದುಕೊಳ್ಳುವುದು ಅಸೂಯೆ ಅಥವಾ ಅಭದ್ರತೆಗೆ ಕಾರಣವಾಗಬಹುದು, ಅವುಗಳು ಪ್ರಸ್ತುತ ನಿಮ್ಮ ಸಂಬಂಧಕ್ಕೆ ಸಂಬಂಧಿಸದಿದ್ದರೂ ಸಹ, ಹಿಂದಿನ ಸಂಬಂಧದ ಬಗ್ಗೆ ಕೆಣಕುವುದು ಸೂಕ್ತವಲ್ಲ. ಸಂಬಂಧದಲ್ಲಿ ಅಸೂಯೆ ನಿಮ್ಮ ಸಂಬಂಧದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ನಿಮ್ಮ ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ತಿಳಿದಿದೆಯೇ?

ಅನಗತ್ಯ ಚರ್ಚೆ:

ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಚರ್ಚೆಗೆ ಹೋಗದಿರಿ. ಇದು ಜಗಳಕ್ಕೆ ಮತ್ತು ಸಾಕಷ್ಟು ಭಿನ್ನಾಬಿಪ್ರಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಅವರೊಂದಿಗೆ ಆರೋಗ್ಯಕರವಾಗಿ ಮಾತುಕತೆ ನಡೆಸಿ. ಅವರ ಆರೋಗ್ಯದ ಬಗ್ಗೆ ಮಾತಾಡಿ.

ತಿರಸ್ಕಾರ:

ನಿಮ್ಮ ಸಂಗಾತಿಯನ್ನು ಸದಾ ಗೌರವದಿಂದ ಕಾಣುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನಿಮ್ಮಿಬ್ಬರ ನಡುವೆ ತಿರಸ್ಕಾರ ಭಾವನೆ ಹೆಚ್ಚಾಗುತ್ತಾ ಹೋದ ಹಾಗೆ ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ. ನಿಮ್ಮಿಬರ ನಡುವಿನ ಮಾತುಕತೆ ಸರಿಯಾಗಿ ಇಲ್ಲದಿದ್ದಾಗ ಅಲ್ಲಿ ಬಿನ್ನಾಭಿಪ್ರಾಯಗಳು, ನಕಾರಾತ್ಮಕ ಭಾವನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಿಮಗೆ ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಮುಕ್ತ ಮಾತುಕತೆಯಿಂದ ನಿಮ್ಮ ಸಂಗಾತಿಗೆ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳು ಸಾಧ್ಯವಿದೆ.

ಭಾವನೆಗಳಿಗೆ ದಕ್ಕೆ:

ನಿಮ್ಮ ಸಂಗಾತಿಯ ಜೀವನದಲ್ಲಿ ಕೆಟ್ಟ ಘಟನೆ ನಡೆದಿರಬಹುದು. ಅದನ್ನು ಆದಷ್ಟು ಅವರ ಜೀವನದಿಂದ ಮರೆಯುವಂತೆ ಮಾಡಿ. ಬದಲಾಗಿ ಆ ಕೆಟ್ಟ ಘಟನೆಗಳನ್ನೇ ಮತ್ತೇ ಮತ್ತೆ ನೆನಪಿಸಿ ಅವರ ಭಾವನೆಗೆ ದಕ್ಕೆಯುಂಟು ಮಾಡದಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:52 pm, Wed, 8 March 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್