International Women’s Day: ಪರಸ್ಪರ ಬೆಂಬಲದ ಪರಿಕಲ್ಪನೆಯೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
Google Doodle: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023 ಅಂಗವಾಗಿ ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಮಹಿಳೆಯರು ತಮ್ಮ ದೈನಂದಿನ ಬದುಕಿನಲ್ಲಿ ಪರಸ್ಪರ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ವಿಧಾನಕ್ಕೆ ಒತ್ತು ನೀಡಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಬಾರಿ ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಮಹಿಳೆಯರಿಗೆ ತಮ್ಮ ದೈನಂದಿನ ಬದುಕಿನಲ್ಲಿ ಪರಸ್ಪರ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ವಿಧಾನಕ್ಕೆ ಒತ್ತು ನೀಡಿದೆ. ಮಹಿಳೆಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವುದು, ಕೆಲವರು ಅವರ ಮಾತನ್ನು ಗಮನವಿಟ್ಟು ಆಲಿಸುತ್ತಿರುವುದು. ಅದೇ ಸಮಯದಲ್ಲಿ, ಇಬ್ಬರು ಮಹಿಳೆಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿರುವುದು, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಸೇವೆಯನ್ನು ಕೂಡ ಗೂಗಲ್ ಸ್ಮರಿಸಿದೆ.
ವಿಶೇಷ ಡೂಡಲ್‌ನಲ್ಲಿನ ಪ್ರತಿ GOOGLE ಅಕ್ಷರದೊಳಗಿನ ವಿಗ್ನೆಟ್‌ಗಳು ಪ್ರಪಂಚದಾದ್ಯಂತದ ಮಹಿಳೆಯರು ಪರಸ್ಪರ ಪ್ರಗತಿಗೆ ಮತ್ತು ಪರಸ್ಪರರ ಜೀವನದ ಗುಣಮಟ್ಟವನ್ನು ಸುಧಾರಿಸಲು ಪರಸ್ಪರ ಬೆಂಬಲಿಸುವ ಹಲವು ಕ್ಷೇತ್ರಗಳಲ್ಲಿ ಕೆಲವನ್ನು ಹೈಲೈಟ್ ಮಾಡಿದೆ.
ಈ ವರ್ಷ ನಮ್ಮ ಥೀಮ್ ಮಹಿಳೆಯರನ್ನು ಬೆಂಬಲಿಸುವುದು, ಆದ್ದರಿಂದ ನನ್ನ ಜೀವನದಲ್ಲಿ ಇತರೆ ಮಹಿಳೆಯರು ನನ್ನನ್ನು ಬೆಂಬಲಿಸಿದ ಎಲ್ಲಾ ವಿಧಾನಗಳನ್ನು ಪ್ರತಿಬಿಂಬಿಸಿದ್ದೇನೆ ಎಂದು ಡೂಡಲ್ ಕಲಾವಿದ ಅಲಿಸ್ಸಾಂ ವಿನಾನ್ಸ್ ಹೇಳಿದ್ದಾರೆ.
ಮತ್ತಷ್ಟು ಓದಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು, ಮೈಸೂರಿನ ಡಾ ಶ್ವೇತಾರ ಹಾಗೆ! ವಿಶೇಷವೆಂದರೆ ಈ ಗೂಗಲ್ ಡೂಡಲ್ ಅನ್ನು ಕ್ಲಿಕ್ ಮಾಡಿದ ಮೇಲೆ ಗೂಗಲ್ ಬಳಕೆದಾರರನ್ನು ಆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿ ಲಭ್ಯವಿರುತ್ತದೆ.
ಇವುಗಳಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಫೋಟೋಗಳು, ಸುದ್ದಿಗಳು, ವೀಡಿಯೊಗಳು ಮತ್ತು ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಹೊಸ ಪುಟಕ್ಕೆ ಹೋಗುತ್ತಿದ್ದಂತೆಯೇ ಮಹಿಳೆಯರು ಕೈಗಳಲ್ಲಿ ಬಾವುಟವನ್ನು ಹಿಡಿದು ಸಾಗುವ ದೃಶ್ಯವನ್ನು ಕಾಣಬಹುದು.
1909 ಫೆಬ್ರುವರಿ 28ರಂದು ಮೊದಲ ವರ್ಷದ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಚರಿಸಲಾಯಿತು. 1908ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕ ಈ ದಿನವನ್ನು ಮಹಿಳೆಯರಿಗೆ ಸರ್ಮಪಿಸಿತ್ತು, ಅಲ್ಲದೆ ಆಗ ತಮ್ಮ ಕೆಲಸದ ಕಠಿಣ ಪರಿಸ್ಥಿತಿಗಳ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು.
1917ರಲ್ಲಿ ರಷ್ಯಾದ ಮಹಿಳೆಯ ಪ್ರತಿಭಟನೆ ಆರಂಭಿಸಿದ್ದರು. ಬ್ರೆಡ್ ಅಂಡ್ ಪೀಸ್ ಮುಷ್ಕರ ನಡೆಸಿದ್ದರು. ಹೆಣ್ಣುಮಕ್ಕಳ ಈ ಆಂದೋಲನವು ಅಂತಿಮವಾಗಿ ರಷ್ಯಾದಲ್ಲಿ ಮಹಿಳೆಯರ ಮತದಾನದ ಹಕ್ಕಿನ ಜಾರಿಗೆ ಕಾರಣವಾಯಿತು.
1977ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ಅನ್ನು ಅಂತಾರಾರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲು ನಿರ್ಧರಿಸಲಾಯಿತು.
1945ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಯ ತತ್ವವನ್ನು ದೃಢೀಕರಿಸುವ ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಯಿತು. ಆದರೆ 1975ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಅಂತಾರಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಿತ್ತು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ