Womens Day 2023: ಕಾರ್ಪೊರೇಟ್ ಜಗತ್ತಿನಲ್ಲಿ ಅಲೆ ಸೃಷ್ಟಿಸುತ್ತಿರುವ ಭಾರತದ ಮಹಿಳಾ ಸಾಧಕಿಯರು

ಮಹಿಳಾ ದಿನಾಚರಣೆಯ ಈ  ಶುಭ ಸಂದರ್ಭದಲ್ಲಿ ಕಾರ್ಪೊರೇಟ್ ವಲಯದಲ್ಲಿ ಸಾಧನೆಗೈದ ಕೆಲವೊಂದಿಷ್ಟು ಮಹಿಳಾ ಸಾಧಕಿಯರ ಕುರಿತು ಮಾಹಿತಿ ಇಲ್ಲಿದೆ.

Womens Day 2023: ಕಾರ್ಪೊರೇಟ್ ಜಗತ್ತಿನಲ್ಲಿ ಅಲೆ ಸೃಷ್ಟಿಸುತ್ತಿರುವ ಭಾರತದ ಮಹಿಳಾ ಸಾಧಕಿಯರು
ಫಲ್ಗುಣಿ ಸಂಜಯ್ ನಾಯರ್
Follow us
ಅಕ್ಷತಾ ವರ್ಕಾಡಿ
|

Updated on:Mar 08, 2023 | 11:52 AM

ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಇನ್ನೂ ಮುಂದಕ್ಕೆ ಅವರ ಗುರಿಯತ್ತ ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶ. ಇಂದು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿರುವ ಮಹಿಳೆಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಆದ್ದರಿಂದ ಮಹಿಳಾ ದಿನಾಚರಣೆಯ ಈ  ಶುಭ ಸಂದರ್ಭದಲ್ಲಿ ಕಾರ್ಪೊರೇಟ್ ವಲಯವು ಸಾಧನೆಗೈದ ಕೆಲವೊಂದಿಷ್ಟು ಮಹಿಳಾ ಸಾಧಕಿಯರ ಕುರಿತು ಮಾಹಿತಿ ಇಲ್ಲಿದೆ.

ಸಾವಿತ್ರಿ ಜಿಂದಾಲ್:

ಭಾರತದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಟಾಪ್​​ 10 ಶ್ರೀಮಂತ ಭಾರತೀಯರಲ್ಲಿ ಒಬ್ಬರು. ಅವರು ಸ್ಟೀಲ್ ಮ್ಯಾಗ್ನೆಟ್, ಓಪಿ ಜಿಂದಾಲ್ ಗ್ರೂಪ್‌ನ ಮುಖ್ಯಸ್ಥರು. ಇವರ ಪತಿ ಓಂ ಪ್ರಕಾಶ್ ಜಿಂದಾಲ್ ಅವರು 2005 ರಲ್ಲಿ ಅಪಘಾತದಲ್ಲಿ ಮರಣಹೊಂದಿದ ನಂತರ ಕಂಪೆನಿಯ ಸಂಪೂರ್ಣ ಜವಾಬ್ದಾರಿಯನ್ನು ಇವರು ತೆಗೆದುಕೊಂಡು ಇಂದು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಜಿಯಾ ಮೋದಿ:

ಭಾರತದ ಪ್ರಸಿದ್ಧ ಕಾರ್ಪೊರೇಟ್ ವಕೀಲರಾಗಿರುವ ಜಿಯಾ ಮೋದಿ ವಿಶ್ವದ ಅನೇಕ ಪ್ರಸಿದ್ಧ ಕಾರ್ಪೊರೇಟ್ ಕಂಪನಿಗಳ ಕೇಸ್‌ಗಳನ್ನು ಇತ್ಯರ್ಥಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಏರ್‌ಟೆಲ್, ಟೆಲಿನರ್ ಗ್ರೂಪ್, ಶೆನೈಡರ್ ಎಲೆಕ್ಟ್ರಿಕ್ ಆಂಡ್‌ ಎಲೆಕ್ಟ್ರಿಕ್ ಮತ್ತು ಲಾರ್ಸೆನ್ ಆಂಡ್‌ ಟರ್ಬೊಗಳ ಆಟೋಮೆಷನ್ ಬ್ಯುಸಿನೆಸ್‌ಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಯಾ ಮೋದಿಯ ಕಾನೂನು ಸಂಸ್ಥೆ ಭಾರತದ ಅತ್ಯಂತ ಯಶಸ್ವಿ ಕಂಪನಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತದೆ.

ಲೀನಾ ಗಾಂಧಿ ತಿವಾರಿ:

ಭಾರತದ ಎರಡನೇ ಅತಿ ಶ್ರೀಮಂತ ಮಹಿಳೆಯಾಗಿ ಸ್ಥಾನ ಪಡೆಯುವ ಇವರು ಭಾರತದ ಅತ್ಯಂತ ಹಳೆಯ ಔಷಧ ಕಂಪನಿಯಾಗಿರುವ ಯು ಎಸ್​​ ವಿ ಪ್ರೈವೇಟ್​ ಲಿಮಿಟೆಡ್​​ನ ನಿರ್ದೇಶಕರು.

ಸ್ಮಿತಾ ಕೃಷ್ಣ ಗೋದ್ರೆಜ್ :

ಭಾರತದ ಅತ್ಯಂತ ಶ್ರೀಮಂತ ಮಹಿಳೆ, ಸ್ಮಿತಾ ಕೃಷ್ಣಾ ಗೋದ್ರೇಜ್ ಅವರು ಪ್ರಸಿದ್ಧ ಗೋದ್ರೇಜ್ ಗುಂಪಿನ ಮೂರನೇ ತಲೆಮಾರಿನ ವಾರಸುದಾರರಾಗಿದ್ದಾರೆ. ಅವರ ಪತಿ ವಿಜಯ್ ಕೃಷ್ಣ ಅವರು ಸಾಕಷ್ಟು ಹಿಟ್ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಗೋದ್ರೇಜ್ ಇಂಡಸ್ಟ್ರೀಸ್ ಮಂಡಳಿಯಲ್ಲಿಯೂ ಇದ್ದರು.

ಇದನ್ನೂ ಓದಿ: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ

ಫಲ್ಗುಣಿ ಸಂಜಯ್ ನಾಯರ್:

50 ನೇ ವಯಸ್ಸಿನಲ್ಲಿ, ಅವರು ತಮ್ಮ ಸ್ವಂತ ಸೌಂದರ್ಯ ಮತ್ತು ಜೀವನಶೈಲಿ ಕಂಪನಿಯಾದ Nykaa ಸ್ಥಾಪಿಸಲು ಉನ್ನತ ಕಾರ್ಪೊರೇಟ್ ಬ್ಯಾಂಕ್‌ನ ಕೆಲಸವನ್ನು ತೊರೆದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್, ಹಳೆಯ ವಿದ್ಯಾರ್ಥಿ, ಫಲ್ಗುಣಿ 2012 ರಲ್ಲಿ ಕೇವಲ $2 ಮಿಲಿಯನ್ ತನ್ನ ಸ್ವಂತ ಹಣದಿಂದ Nykaa ಪ್ರಾರಂಭಿಸಿದರು. ಆದರೆ ಒಂದು ದಶಕದೊಳಗೆ, ಅದನ್ನು ಬಿಲಿಯನ್ ಡಾಲರ್ ಕಂಪನಿಯಾಗಿ ಪರಿವರ್ತಿಸಿದ್ದಾರೆ.

ಕಿರಣ್ ಮಜುಂದಾರ್ ಶಾ:

ಕಿರಣ್ ಮಜುಂದಾರ್ ಭಾರತದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಫೋರ್ಬ್ಸ್ ಪಟ್ಟಿಯಲ್ಲಿ ಸಹ ಸ್ಥಾನ ಗಳಿಸಿದ್ದರು. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 1978ರಲ್ಲಿ ಬಯೋಕಾನ್ ಎಂಬ ಜೈವಿಕ ಔಷಧೀಯ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯು ಔಷಧೀಯ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಕಂಪನಿ. ಬಯೋಕಾನ್ ತನ್ನ ಜೆನೆರಿಕ್ ಔಷಧಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಮಲೇಷ್ಯಾದ ಜೋಹರ್‌ನಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:50 am, Wed, 8 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ