International Women’s Day 2023: ಉಡುಗೊರೆಯಿಂದ ಆಕೆಯ ಮುಖದಲ್ಲೊಂದು ನಗು ಮೂಡಿಸಿ

ಅಂತರಾಷ್ಟ್ರೀಯ ಮಹಿಳಾ ದಿನವನ್ನು ನೀವು ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ ಅವರ ಮುಖದಲ್ಲೊಂದು ನಗು ಮೂಡಿಸಲು ವಿಶೇಷ ಉಡುಗೊರೆಯನ್ನು ಅವರಿಗೆ ನೀಡಿ.

International Women's Day 2023: ಉಡುಗೊರೆಯಿಂದ ಆಕೆಯ ಮುಖದಲ್ಲೊಂದು ನಗು ಮೂಡಿಸಿ
ಅಂತರಾಷ್ಟ್ರೀಯ ಮಹಿಳಾ ದಿನ
Follow us
ಅಕ್ಷತಾ ವರ್ಕಾಡಿ
|

Updated on: Mar 08, 2023 | 7:00 AM

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಇನ್ನೂ ಮುಂದಕ್ಕೆ ಅವರ ಗುರಿಯತ್ತ ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶ. ಇಂದು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿರುವ ಮಹಿಳೆಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಈ ದಿನವನ್ನು ನೀವು ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ ಅವರ ಮುಖದಲ್ಲೊಂದು ನಗು ಮೂಡಿಸಲು ವಿಶೇಷ ಉಡುಗೊರೆಯನ್ನು ಅವರಿಗೆ ನೀಡಿ.

ಮಹಿಳಾ ದಿನವನ್ನು ಆಚರಿಸಲು ಕೆಲವು ಉಡುಗೊರೆ ಕಲ್ಪನೆಗಳು ಇಲ್ಲಿವೆ:

ಆಭರಣ:

ಆಭರಣವು ಎಂದಿಗೂ ವಿಸೇಷವಾಗಿ ಮಹಿಳೆಯರಿಗೆ ಯಾವಾಗಲೂ ಅಚ್ಚುಮೆಚ್ಚು. ಕಿವಿಯೋಲೆಗಳು, ನೆಕ್ಲೇಸ್‌ಗಳು, ಕಡಗಗಳು ಅಥವಾ ಉಂಗುರಗಳು ಸೇರಿದಂತೆ ವಿವಿಧ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದು. ನೀವು ಮೊದಲಕ್ಷರಗಳು ಅಥವಾ ಜನ್ಮಗಲ್ಲುಗಳೊಂದಿಗೆ ಕಸ್ಟಮೈಸ್ ಮಾಡಿದ ಆಭರಣಗಳನ್ನು ಸಹ ಆಯ್ಕೆ ಮಾಡಬಹುದು .

ಪುಸ್ತಕಗಳು :

ಓದಲು ಇಷ್ಟಪಡುವ ಮಹಿಳೆಯರಿಗೆ ಪುಸ್ತಕಗಳು ಅದ್ಭುತ ಕೊಡುಗೆಯಾಗಿದೆ. ನೀವು ಕಾಲ್ಪನಿಕ, ಕಾಲ್ಪನಿಕವಲ್ಲದ, ಅಥವಾ ಜೀವನಚರಿತ್ರೆ ಸೇರಿದಂತೆ ವಿವಿಧ ಪ್ರಕಾರಗಳಿಂದ ಆಯ್ಕೆ ಮಾಡಬಹುದು. ಮಹಿಳೆಯರು ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಬರೆದ ಪುಸ್ತಕಗಳನ್ನು ಸಹ ನೀವು ಆಯ್ಕೆ ಮಾಡಬಹುದು.

ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ಹಾಗೂ ಧ್ಯೇಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಹೂವುಗಳು:

ಗುಲಾಬಿ, ಮಲ್ಲಿಗೆ ವಿವಿಧ ಹೂವುಗಳು ಅಥವಾ ಹೂವಿನ ಗುಚ್ಛವು ಉತ್ತಮ ಆಯ್ಕೆಯಾಗಿದೆ. ಹೂವು ಮುಡಿದುಕೊಳ್ಳುವ ಅಭ್ಯಾಸವಿದ್ದರೇ ಅದು ನಿಮ್ಮ ಪ್ರೀತಿಯ ಜೊತೆಗೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸ್ಕಿನ್​ ಕೇರ್​​ ಕಿಟ್​​: ​

ಪ್ರತೀ ಹೆಣ್ಣಿಗೂ ಆಕೆಯ ಸೌಂದರ್ಯದ ಕರಿತು ಅತಿಯಾದ ಕಾಳಜಿ ಇರುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಅವರಿಗಾಗಿ ಸ್ಕಿನ್​ ಕೇರ್​​ ಕಿಟ್ ಉಡುಗೊರೆಯಾಗಿ ನೀಡಿ. ಇಂತಹ ಉಡುಗೊರೆಯೂ ಪ್ರತಿಯೊಂದು ಹೆಣ್ಣಿಗೂ ಇಷ್ಟವಾಗುತ್ತದೆ.

ನೀವೇ ತಯಾರಿಸಿದ ಉಡುಗೊರೆ:

ಅವರಿಗಾಗಿ ನೀವೇ ತಯಾರಿಸಿ ಉಡುಗೊರೆ ನೀಡಿದರೆ ಅದು ಅವರಿಗೆ ತುಂಬಾ ವಿಶೇಷವಾಗಿರುತ್ತದೆ. ಎಷ್ಟೇ ಬೆಲೆ ಬಾಳುವ ಉಡುಗೊರೆಗಿಂತ ನೀವು ವಿಶೇಷವಾಗಿ ತಯಾರಿಸಿರುವ ಉಡುಗೊರೆ ಅವರಿಗೆ ಸಾಕಷ್ಟು ಖುಷಿಯನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ