Relationship Tips : ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ? ಹಾಗಾದ್ರೆ ಹೀಗೆ ತಿಳಿದುಕೊಳ್ಳಿ

ದಾಂಪತ್ಯ ಜೀವನವು ಪ್ರೀತಿ, ವಿಶ್ವಾಸ ನಂಬಿಕೆಯ ಮೇಲೆ ನಿಂತಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಬೇಕು. ಆಗ ಮಾತ್ರ ಆ ಸಂಬಂಧ ಶಾಶ್ವತವಾಗಿ ಉಳಿಯಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸಂಗಾತಿಗೆ ಮೋಸ ಮಾಡಿ ಬೇರೆ ಸಂಬಂಧ ಬೆಳೆಸುವುದನ್ನು ನೋಡಿರಬಹುದು. ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಆ ವ್ಯಕ್ತಿಯಲ್ಲಿ ಈ ಬದಲಾವಣೆಗಳು ಆಗಿವೆಯೇ ಎಂದು ಗಮನಿಸಿ. ಒಂದು ವೇಳೆ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬಂದರೆ ನಿಮ್ಮನ್ನು ವಂಚಿಸುತ್ತಿರುವುದು ಖಚಿತ.

Relationship Tips : ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ? ಹಾಗಾದ್ರೆ ಹೀಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 01, 2025 | 12:06 PM

ಸಂಬಂಧಗಳು ಬಹಳ ಸೂಕ್ಷ್ಮವಾದುದು. ಯಾವುದೇ ಸಂಬಂಧಗಳಿರಲಿ ಅದನ್ನು ಬಹಳ ಕಾಳಜಿಯುತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆಯಿರಲೇಬೇಕು. ಕೆಲವೊಮ್ಮೆ ಸಂಗಾತಿಯು ಬೇರೆ ವ್ಯಕ್ತಿಯತ್ತ ಆಕರ್ಷಿತರಾಗುತ್ತಾರೆ. ಅವರ ಈ ವರ್ತನೆ ಹಾಗೂ ನಡವಳಿಕೆಯಿಂದಲೇ ಸಂಬಂಧಗಳು ಹಾಳಾಗುತ್ತದೆ. ಈ ದಂಪತಿಗಳ ನಡುವೆ ವೈಮನಸ್ಸು ಮೂಡಲು, ಸಂಬಂಧವು ಹಾಳಾಗಲು ಇದೇ ಪ್ರಮುಖ ಕಾರಣವಾಗುತ್ತದೆ. ಹೀಗಾಗಿ ದಾಂಪತ್ಯ ಜೀವನದಲ್ಲಿ ತನ್ನ ಸಂಗಾತಿಯು ತನಗೆ ಮೋಸ ಮಾಡುತ್ತಿದ್ದಾರೆಯೇ ತಿಳಿಯಲು ಆ ವ್ಯಕ್ತಿಯಲ್ಲಿ ಈ ಬದಲಾವಣೆಗಳು ಇವೆಯೇ ಎಂದು ಒಮ್ಮೆ ಪರೀಕ್ಷಿಸಿ.

  • ವೈಯುಕ್ತಿಕ ಅಂತರ ಕಾಯ್ದುಕೊಳ್ಳುವುದು : ದ್ರೋಹ ಅಥವಾ ಮೋಸ ಮಾಡುತ್ತಿರುವ ಸಂಗಾತಿಯ ನಡವಳಿಕೆಯಲ್ಲಿ ಈ ಬದಲಾವಣೆಗಳನ್ನು ಗಮನಿಸಬಹುದು. ಹೆಚ್ಚು ಸಮಯ ಕಳೆಯುತ್ತಿದ್ದ ವ್ಯಕ್ತಿಯು ಏಕಾಏಕಿ ಅಂತರವನ್ನು ಕಾಯ್ದುಕೊಳ್ಳುವುದು. ಸಂಗಾತಿಯೊಂದಿಗೆ ಮಾತನಾಡಲು ಇಷ್ಟ ಪಡದೇ ಇರುವುದು. ಪತಿ ಅಥವಾ ಪತ್ನಿಯು ಮಾತನಾಡಿದರೆ ಸಿಡುಕುವುದು, ಕಿರುಚುವಂತಹ ವರ್ತನೆಗಳು ಈ ಸಂಬಂಧದಲ್ಲಿ ಇಷ್ಟವಿಲ್ಲ ಎನ್ನುವುದು ತೋರಿಸುತ್ತದೆ.
  • ವಿಚಾರಗಳನ್ನು ಮುಚ್ಚಿಡುವ ಪ್ರಯತ್ನಗಳು : ದಾಂಪತ್ಯ ಜೀವನದಲ್ಲಿ ಯಾವುದೇ ಮುಚ್ಚುಮರೆ ಮಾಡದ ವ್ಯಕ್ತಿಯು ಪ್ರಾಮಾಣಿಕವಾಗಿದ್ದಾನೆ ಎಂದು ಸೂಚಿಸುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿರುವಂತಹ ಮೆಸೇಜ್ ಗಳು, ಪದೇ ಪದೇ ಫೋನ್ ಕರೆಗಳು ಬರುತ್ತಿರುವುದು ಸಂಬಂಧದಲ್ಲಿ ಪ್ರಾಮಾಣಿಕವಾಗಿಲ್ಲ. ಫೋನ್ ಗೆ ಪಾಸ್ ವರ್ಡ ಹಾಗೂ ಲಾಕ್ ಗಳನ್ನು ಹಾಕಿರುವುದು ಸಂಗಾತಿಯು ಏನನ್ನೋ ಮುಚ್ಚಿಡುತ್ತಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
  • ಯಾವಾಗಲೂ ಫೋನ್ ಅಥವಾ ಮೆಸೇಜ್ ನಲ್ಲೇ ಮುಳುಗಿರುವುದು : ದಾಂಪತ್ಯ ಜೀವನದಲ್ಲಿ ಇಬ್ಬರೂ ಜೊತೆಗೆ ಇದ್ದರೂ ಕೂಡ ಆತ್ಮೀಯತೆ ಇರುವುದಿಲ್ಲ. ನಿಮ್ಮ ಸಂಗಾತಿಯು ಹೆಚ್ಚು ಸಮಯ ಫೋನ್ ನಲ್ಲೇ ಕಳೆಯುತ್ತಿರುವುದು. ಫೋನ್ ಬಗ್ಗೆ ವಿಪರೀತ ಒಲವು ಬೆಳೆಸಿಕೊಂಡಿದ್ದರೆ ಬೇರೆ ವ್ಯಕ್ತಿಯ ಸಹವಾಸವನ್ನು ಬೆಳೆಸಿದ್ದಾನೆ. ಅದಲ್ಲದೇ ನೀವೇನಾದರೂ ಸಂಗಾತಿಯ ಫೋನ್ ಮುಟ್ಟಿದ್ದರೆ ರೇಗಾಡುವುದು ಹಾಗೂ ಪಾಸ್ ವರ್ಡ್ ಕೇಳಿದರೆ ವಿಷಯವನ್ನು ಬೇರೆಡೆಗೆ ತಿರುಗಿಸುವಂತಹ ವರ್ತನೆಗಳು ಇವೆಯೇ ಎಂದು ಗಮನಿಸಿ. ಈ ಎಲ್ಲಾ ನಡವಳಿಕೆಗಳು ಆ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ ದಾಂಪತ್ಯ ಜೀವನವು ದಿಕ್ಕುತಪ್ಪುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ.
  • ದೈಹಿಕ ಆಪ್ತತೆ ಇಲ್ಲದಿರುವುದು : ಪ್ರೀತಯಿಂದ ಸಂಗಾತಿಯೊಂದಿಗೆ ಮಾತನಾಡಲು ಹೋದರೆ ಮಾತಿನಲ್ಲಿ ಯಾವುದೇ ಆಸಕ್ತಿಯು ತೋರುವುದಿಲ್ಲ. ಹತ್ತಿರ ಹೋದರೂ ಸಂಗಾತಿಯು ನಿಮ್ಮನ್ನು ದೂರವಿಡಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಆ ಬಗ್ಗೆ ಹೆಚ್ಚು ಗಮನ ಹರಿಸಿ. ಇದು ದೈಹಿಕ ಆಪ್ತತೆಯು ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ನಿಮ್ಮ ಸಂಗಾತಿಯಲ್ಲಿ ಕಿರಿಕಿರಿಯ ಭಾವನೆ, ದೈಹಿಕ ಅಂತರ ಕಾಯ್ದುಕೊಂಡರೆ ಸಂಬಂಧದಲ್ಲಿ ಪ್ರಾಮಾಣಿಕವಾಗಿಲ್ಲ ಎನ್ನುವುದು ಅರಿತುಕೊಳ್ಳಿ. ಸಾಧ್ಯವಾದರೆ ಈ ಬಗ್ಗೆ ಇಬ್ಬರೂ ಕುಳಿತು ಮುಕ್ತವಾಗಿ ಮಾತನಾಡಿ ಸಂಬಂಧವನ್ನು ಸರಿ ಪಡಿಸಿಕೊಂಡರೆ ಉತ್ತಮ.

ಜೀವನಶಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್