ಒತ್ತಡವು ಮೆದುಳು ಉತ್ತಮವಾಗಿ ಕಾರ್ಯನಿವರ್ಹಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಜಾರ್ಜಿಯಾ ವಿಶ್ವವಿದ್ಯಾನಿಲಯದ ಯೂತ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಇತ್ತೀಚಿನ ಸಂಶೋಧನೆಯ ಪ್ರಕಾರ, ಒತ್ತಡವೆಂಬುದು ತೂಗುಗತ್ತಿಯಂತೆ ತಲೆಯ ಮೇಲೆ ನೇತಾಡುವಂತೆ ಭಾಸವಾಗುತ್ತಿದ್ದರೂ ಮೆದುಳಿನ ಕಾರ್ಯವನ್ನು ಸುಗಮವಾಗಿಸುವ ಶಕ್ತಿ ಇದೆ ಎಂದು ಹೇಳಿದೆ.
ಕಡಿಮೆ ಮತ್ತು ಮಧ್ಯಮ ಮಟ್ಟದ ಒತ್ತಡವು ವ್ಯಕ್ತಿಗಳಿಗೆ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಉತ್ತಮ ಒತ್ತಡವು ಭವಿಷ್ಯದ ಪ್ರತಿಕೂಲ ಪರಿಣಾಮದ ವಿರುದ್ಧ ಲಸಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ನೀವು ಸಾಮಾನ್ಯವಾಗಿ ಒತ್ತಡವಿರುವಂತಹ ಕಡೆಯೇ ಕೆಲಸ ಮಾಡುತ್ತಿರುತ್ತೀರ, ನಿಮ್ಮ ಒತ್ತಡವು ನೀವು ಉತ್ತಮವಾಗಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.
ಒತ್ತಡವು ನೀವು ಪರೀಕ್ಷೆಯನ್ನು ಬರೆಯುತ್ತಿರುವಾಗ, ಯಾವುದೋ ಇಂಟರ್ವ್ಯೂಗೆ ತೆರಳುವಾಗ, ಇಂತಿಷ್ಟೇ ಸಮಯದಲ್ಲಿ ಈ ಕೆಲಸ ಮುಗಿಯಬೇಕು ಎಂದಾದಾಗ, ದೊಡ್ಡ ಮೀಟಿಂಗ್ ಅಟೆಂಡ್ ಮಾಡುವಾಗ ಉಂಟಾಗುತ್ತದೆ.
ಒತ್ತಡ ಹಾಗೂ ಅಧಿಕ ಒತ್ತಡದ ನಡುವೆ ತೆಳ್ಳನೆಯ ಒಂದು ಗೆರೆ ಇದೆ ಅಷ್ಟೇ, ಒಳ್ಳೆಯ ಒತ್ತಡವು ಮುಂದೊಂದು ದಿನ ನೀವು ಖಿನ್ನತೆ, ಆತಂಕಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ.
ಒತ್ತಡದ ಲಕ್ಷಣಗಳು
ಉದ್ವೇಗ
ಹಸಿವಾಗದೇ ಇರುವುದು
ತೂಕ ಹೆಚ್ಚಾಗುವುದು ಅಥವಾ ನಷ್ಟ
ನಿದ್ರೆ ಸಮಸ್ಯೆಗಳು
ತಲೆನೋವು, ಬೆನ್ನು ನೋವು, ಹೊಟ್ಟೆ ಸಮಸ್ಯೆಗಳು
ಒಬ್ಬರ ಭಾವನೆಗಳನ್ನು ಕಡೆಗಣಿಸುವುದು
ಶಕ್ತಿಯಿಲ್ಲದ ಭಾವನೆ
ಕೋಪ
ದುಃಖ ಅಥವಾ ಅಳುವುದು
ಚಿಂತೆ
Published On - 12:59 pm, Wed, 3 August 22