Personality Development: ನೀವು ಮಾಡುವ ಈ ಸಣ್ಣ ಪುಟ್ಟ ತಪ್ಪುಗಳು ಇಂಟರ್ವ್ಯೂನಲ್ಲಿ ಫೇಲ್ ಆಗಲು ಕಾರಣವಾಗಬಹುದು
ಜಾಬ್ ಇಂಟರ್ವ್ಯೂಗಾಗಿ ನೀವು ಸಾಕಷ್ಟು ದಿನಗಳಿಂದ ತಯಾರಿ ನಡೆಸಿರುತ್ತೀರಿ, ಎಂತಃ ಪ್ರಶ್ನೆ ಕೇಳಬಹುದು, ಹೇಗೆ ಉತ್ತರ ನೀಡಬೇಕು, ಯಾವ ರೀತಿ ಬಟ್ಟೆಯನ್ನು ಧರಿಸಬೇಕು ಎಂಬುದೆಲ್ಲದರ ಕುರಿತು ಸಿದ್ಧತೆ ಮಾಡಿರುತ್ತೀರಿ.
ಜಾಬ್ ಇಂಟರ್ವ್ಯೂಗಾಗಿ ನೀವು ಸಾಕಷ್ಟು ದಿನಗಳಿಂದ ತಯಾರಿ ನಡೆಸಿರುತ್ತೀರಿ, ಎಂತಃ ಪ್ರಶ್ನೆ ಕೇಳಬಹುದು, ಹೇಗೆ ಉತ್ತರ ನೀಡಬೇಕು, ಯಾವ ರೀತಿ ಬಟ್ಟೆಯನ್ನು ಧರಿಸಬೇಕು ಎಂಬುದೆಲ್ಲದರ ಕುರಿತು ಸಿದ್ಧತೆ ಮಾಡಿರುತ್ತೀರಿ ಅದೆಲ್ಲವೂ ಸರಿ ಆದರೆ ನಿಮ್ಮ ಬಾಡಿ ಲ್ಯಾಂಗ್ವೇಜ್ ಹೇಗಿರಬೇಕು ಎಂದು ಎಂದಾದರೂ ಆಲೋಚಿಸಿದ್ದೀರಾ.
ನೀವು ಉತ್ತರ ಏನು ಕೊಡುತ್ತೀರಾ ಎನ್ನುವುದಕ್ಕಿಂತ ಮೊದಲು ನಿಮ್ಮ ಬಗ್ಗೆ ನಿಮಗೆ ಎಷ್ಟು ಆತ್ಮವಿಶ್ವಾಸವಿದೆ ಎಂಬುದು ಮುಖ್ಯ, ಸಂದರ್ಶಕರ ಎದುರು ನಿಂತು ಏನೇ ಹೇಳುವುದಾದರೂ ನಿರರ್ಗಳವಾಗಿ ಹೇಳಬೇಕು. ನೀವು ನಿಲ್ಲುವ ಭಂಗಿಯೂ ಕೂಡ ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಸಂದರ್ಶಕರು ಈ ಎಲ್ಲಾ ವಿಷಯಗಳ ಕಡೆಗೂ ಗಮನ ನೀಡುತ್ತಾರೆ.
ಬಾಡಿ ಲ್ಯಾಂಗ್ವೇಜ್ ಎಂಬುದು ನಿಮ್ಮ ವ್ಯಕ್ತಿತ್ವ ಬೆಳವಣಿಗೆಯ ಪ್ರಮುಖ ಭಾಗವಾಗಿದೆ. ನಿಮ್ಮ ಸಂದರ್ಶಕರು ನಿಮ್ಮ ಕೈಗಳ ಚಲನೆ, ನಿಮ್ಮ ಹಾವಭಾವ, ಅಭಿವ್ಯಕ್ತಿ, ದೇಹದ ಭಂಗಿಗಳು, ಕಣ್ಣಿನ ಚಲನೆಗಳು ಇತ್ಯಾದಿಗಳನ್ನು ಗಮನಿಸುತ್ತಿರುತ್ತಾರೆ.
ಕೆಲವೊಮ್ಮೆ, ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೂ ಸಹ ನಿಮ್ಮ ದೇಹದ ಭಂಗಿಗಳು ಅಥವಾ ಚಲನೆಗಳು ವಿಭಿನ್ನವಾದುದ್ದನ್ನೇ ಹೇಳುತ್ತವೆ. ನೀವು ಆಯ್ಕೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ನೀವು UPSC ನಾಗರಿಕ ಸೇವೆಗಳ ಪರೀಕ್ಷೆ, IBPS, ರಕ್ಷಣಾ ಪರೀಕ್ಷೆಗಳು ಅಥವಾ ಖಾಸಗಿ ಸಂಸ್ಥೆಗಳಂತಹ ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಈ ಲೇಖನವನ್ನು ಓದಲೇಬೇಕು.
ನಿಮ್ಮ ಬಾಡಿ ಲ್ಯಾಂಗ್ವೇಜ್ ಹೇಗಿರಬೇಕು, ಹೇಗಿರಬಾರದು? ವ್ಯಕ್ತಿತ್ವ ವಿಕಸನ ಸಲಹೆಗಳು: ಸಂದರ್ಶನದ ಸಂದರ್ಭದಲ್ಲಿ ಈ ರೀತಿ ಮಾಡಬೇಡಿ ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದೇ ಇರುವುದು: ಹ್ಯಾಂಡ್ ಶೇಕ್ ಮಾಡುವಾಗ ಭಯದಿಂದ ಮಾಡುವುದು, ಸಂದರ್ಶಕರ ಕಣ್ಣಿನಲ್ಲಿ ಕಣ್ಣಿಟ್ಟು ಉತ್ತರ ನೀಡದೇ ಇರುವುದು ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂಬುದು ಎದ್ದು ತೋರುತ್ತದೆ. ನಿಮ್ಮ ಕೈಗಳು ತಣ್ಣಗಾಗಿದ್ದರೆ ಮತ್ತು ಬೆವರುತ್ತಿದ್ದರೆ ನೀವು ಭಯಗೊಂಡಿದ್ದೀರಿ ಎಂದರ್ಥ.
ಹ್ಯಾಂಡ್ಶೇಕ್ ಮಾಡುವ ಮುನ್ನ ಕೈ ಒರೆಸಿಕೊಳ್ಳಿ: ನೀವು ಸಂದರ್ಶಕರೊಂದಿಗೆ ಹ್ಯಾಂಡ್ಶೇಖ್ ಮಾಡುವಾಗ ಕೈಯನ್ನು ಒರೆಸಿಕೊಳ್ಳಿ, ಹಾಗೆಯೇ ಕೈಚಾಚುವುದು ಕಳಪೆ ನೈರ್ಮಲ್ಯ, ಆತಂಕ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಎದ್ದು ತೋರಿಸುತ್ತದೆ.
ಕಣ್ಣಿನ ಸಂಪರ್ಕದ ಕೊರತೆ: ನಿಮ್ಮ ಉತ್ತರ ಹೇಗೇ ಇರಲಿ, ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ನೀವು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುತ್ತೀರಿ, ಆದರೆ ಸಾಕಷ್ಟು ಮಂದಿ ಸರಿ ಉತ್ತರವನ್ನು ನೀಡಿದರೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಬರುವುದಿಲ್ಲ, ಅಂತವರು ಸಂದರ್ಶನದಲ್ಲಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆ ನಿಮ್ಮ ಕಾಲನ್ನು ನೋಡುತ್ತಾ ಮಾತನಾಡಬೇಡಿ.
ಕುಳಿತುಕೊಳ್ಳುವ ಭಂಗಿ: ಸಂದರ್ಶನದ ಸಮಯದಲ್ಲಿ ನೇರವಾಗಿ ಕುಳಿತುಕೊಳ್ಳಬೇಕು, ಗಲ್ಲವನ್ನು ಮೇಲಕ್ಕೆ ಎತ್ತಿ ಕೈಗಳನ್ನು ಕುರ್ಚಿಯ ಮೇಲಿರಿಸಿ ಕೂರಬೇಕು ಇದು ನಿಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕುರ್ಚಿಯಲ್ಲಿ ಹಿಂಭಾಗ ಒರಗಿ ಕೂರುವುದು, ಕುಳಿತಿರುವುದು ಸರಿ ಎನಿಸದೆ ಪದೇ ಪದೇ ಭಂಗಿ ಬದಲಾಯಿಸುವುದು ಆತ್ಮವಿಶ್ವಾಸದ ಕೊರತೆಯನ್ನು ಎತ್ತಿತೋರಿಸಿದಂತೆ.
ಕೈಕಟ್ಟಿ ಕೂರಬೇಡಿ: ಸಂದರ್ಶನದ ಸಮಯದಲ್ಲಿ ಕೈಗಳನ್ನು ಕಟ್ಟಿ ಕೂರಬೇಡಿ, ನಿಮ್ಮ ಅಂಗೈಗಳನ್ನು ನಿಮ್ಮ ತೊಡೆಯ ಕೆಳಗೆ ಇರಿಸಿ, ಅಲ್ಲಿ ನಿಮ್ಮ ಸಂದರ್ಶಕರಿಗೆ ಅವು ಗೋಚರಿಸುತ್ತವೆ. ಇದು ಮುಕ್ತತೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ.
ಅತಿಯಾದ ಕೈ ಸನ್ನೆಗಳು: ಅತಿಯಾದ ಕೈ ಸನ್ನೆಗಳು ಆತಂಕ ಅಥವಾ ಆತುರವನ್ನು ತೋರಿಸುತ್ತವೆ, ಇದು ಸಂದರ್ಶನದ ಸಮಯದಲ್ಲಿ ಮಾಡುವ ದೊಡ್ಡ ತಪ್ಪು ಎಂದೇ ಹೇಳಬಹುದು. ಸ್ವಲ್ಪ ಮಟ್ಟಿಗೆ, ನಿಮ್ಮ ಆಸಕ್ತಿ ಮತ್ತು ಉತ್ಸಾಹದ ಮಟ್ಟವನ್ನು ತೋರಿಸಲು ಕೈ ಸನ್ನೆಗಳು ಉತ್ತಮವಾಗಿವೆ.
ಏರು ಧ್ವನಿಯಲ್ಲಿ ಮಾತನಾಡುವುದು ಬೇಡ: ನಿಮಗೆ ಆತ್ಮವಿಶ್ವಾಸವಿದೆ ಎಂದು ತೋರಿಸುವ ಕಾರಣಕ್ಕೆ ಏರುಧ್ವನಿಯಲ್ಲಿ ಮಾತನಾಡುವುದು ಬೇಡ ಏನೇ ಹೇಳುವುದಿದ್ದರೂ ಮೆಲು ಧ್ವನಿ ಇರಲಿ, ಇದು ನಿಮ್ಮ ಸಂದರ್ಶಕರಿಗೆ ಇಷ್ಟವಾಗುತ್ತದೆ.