Reverse Dieting: ತೂಕ ನಷ್ಟದ ನಂತರ ರಿವರ್ಸ್​ ಡಯಟಿಂಗ್ ಎಷ್ಟು ಪರಿಣಾಮಕಾರಿ?

|

Updated on: Mar 03, 2023 | 3:04 PM

ತೂಕ ನಷ್ಟದ ನಂತರ ಕೊಬ್ಬನ್ನು ಮರಳಿ ಪಡೆಯದಂತೆ ತಡೆಯಲು ಹಾಗೂ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಸಹಾಯ ಮಾಡುವ ಪರಿಕಲ್ಪನೆ ರಿವರ್ಸ್​ ಡಯಟಿಂಗ್.

Reverse Dieting: ತೂಕ ನಷ್ಟದ ನಂತರ   ರಿವರ್ಸ್​ ಡಯಟಿಂಗ್ ಎಷ್ಟು ಪರಿಣಾಮಕಾರಿ?
ರಿವರ್ಸ್ ಡಯಟಿಂಗ್
Image Credit source: TODAY
Follow us on

ತೂಕವನ್ನು ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ. ಇದಾಗಿಯೂ ನೀವು ಅಂದುಕೊಂಡಷ್ಟು ತೂಕವನ್ನು ಕಳೆದುಕೊಂಡ ನಂತರ ಮತ್ತೆ ಹಿಂದಿನ ಆಹಾರ ಕ್ರಮವನ್ನು ರೂಢಿಸಿಕೊಳ್ಳುವಾಗ ಸಾಕಷ್ಟು ಜನರಿಗೆ ಮತ್ತೇ ತೂಕ ಹೆಚ್ಚಾಗಬಹುದು ಎಂಬ ಆತಂಕ ಇರುತ್ತದೆ. ಅಂತಹ ಸಮಯದಲ್ಲಿ ಸಾಕಷ್ಟು ಜನರು ರಿವರ್ಸ್​ ಡಯಟಿಂಗ್​​ನ್ನು ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳುತ್ತಾರೆ. ಇದು ನಿಧಾನವಾಗಿ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ಕ್ಯಾಲೋರಿಗಳ ಹೆಚ್ಚಳದೊಂದಿಗೆ, ನಿಮ್ಮ ತೂಕಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ರಿವರ್ಸ್​ ಡಯಟಿಂಗ್ ಎಂದರೇನು?

ತೂಕ ನಷ್ಟದ ನಂತರ ಕೊಬ್ಬನ್ನು ಮರಳಿ ಪಡೆಯದಂತೆ ತಡೆಯಲು ಹಾಗೂ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಸಹಾಯ ಮಾಡುವ ಪರಿಕಲ್ಪನೆ ಇದಾಗಿದೆ. ಆರೋಗ್ಯ ತಜ್ಞರ ಪ್ರಕಾರ, ರಿವರ್ಸ್ ಡಯಟಿಂಗ್ ಎನ್ನುವುದು ನಿಮ್ಮ ದೈನಂದಿನ ಆಹಾರ ಸೇವನೆಯನ್ನು ಹೆಚ್ಚಿಸುವ ವಿಧಾನವಾಗಿದೆ. ಚಯಾಪಚಯ, ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಸರಿಯಾದ ರೀತಿಯಲ್ಲಿ ಮಾಡಿದರೆ, ರಿವರ್ಸ್ ಡಯಟಿಂಗ್ ಆರೋಗ್ಯಕರ ರೀತಿಯಲ್ಲಿ ಮತ್ತಷ್ಟು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವಲ್ಲಿ ಬಹಳ ಯಶಸ್ವಿಯಾಗುತ್ತದೆ.

ಇದನ್ನೂ ಓದಿ: World Hearing Day 2023: ಅಧಿಕ ಶಬ್ದ ಮಾಲಿನ್ಯದಿಂದ ದೂರವಿದ್ದು, ಸುರಕ್ಷಿತವಾಗಿರೋಣ

ರಿವರ್ಸ್​ ಡಯಟಿಂಗ್ ಹೇಗೆ ಸಹಾಯ ಮಾಡುತ್ತದೆ?

ರಿವರ್ಸ್ ಡಯಟಿಂಗ್ ಮೆಟಬಾಲಿಕ್ ದರಗಳನ್ನು ಪುನರ್​​ ಸ್ಥಾಪಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸಂಗ್ರಹಿಸದೆ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಅನುವು ಮಾಡಿಕೊಡುತ್ತದೆ. ರಿವರ್ಸ್ ಡಯಟ್​​​ನಲ್ಲಿ ನೀವು ವಾರಕ್ಕೆ ಸೇವಿಸುವಂತಹ ಕ್ಯಾಲರಿಯನ್ನು ಸುಮಾರು 50-100ರಷ್ಟು ಹೆಚ್ಚಿಗೆ ಮಾಡುವುದು. ನೀವು ಈಗ ಸೇವನೆ ಮಾಡುತ್ತಿರುವ ಕ್ಯಾಲರಿಗಿಂತ ಇದು ಹೆಚ್ಚಾಗಿರುವುದು. ಇದು 4-10 ವಾರಗಳವರೆಗೆ ಅಥವಾ ನೀವು ಗುರಿ ಸಾಧಿಸುವ ತನಕ ಇರುವುದು. ಏಕೆಂದರ ಕ್ಯಾಲರಿ ಸೇವನೆಗಿಂತಲೂ ಪ್ರೋಟೀನ್ ಅಗತ್ಯತೆಯನ್ನು ದೇಹದ ತೂಕಕ್ಕೆ ಅಳತೆ ಮಾಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:59 pm, Fri, 3 March 23