Rice Pakoda Recipe: ಮನೆಯಲ್ಲಿಯೇ ಗರಿ ಗರಿಯಾಗಿ ಅಕ್ಕಿ ಪಕೋಡ ತಯಾರಿಸಿ

|

Updated on: Feb 11, 2023 | 5:21 PM

ರಾತ್ರಿ ಉಳಿದಿರುವ ಅನ್ನವನ್ನು ಮರುದಿನ ಬಿಸಾಡುವ ಬದಲು ಅದರಿಂದ ಒಂದು ರುಚಿಯಾದ ರೆಸಿಪಿಯನ್ನು ತಯಾರಿಸಬಹುದು. ಆದ್ದರಿಂದ ನೀವು ಸಂಜೆಯ ಟೀ ಗೆ ಸುಲಭವಾಗಿ ಹಾಗೂ ಬೇಗ ತಯಾರಿಸಬಹುದಾದ ಅಕ್ಕಿಯ ಪಕೋಡದ ಪಾಕ ವಿಧಾನ ಇಲ್ಲಿದೆ.

Rice Pakoda Recipe: ಮನೆಯಲ್ಲಿಯೇ ಗರಿ ಗರಿಯಾಗಿ ಅಕ್ಕಿ ಪಕೋಡ ತಯಾರಿಸಿ
ಅಕ್ಕಿ ಪಕೋಡ ರೆಸಿಪಿ
Image Credit source: NDTV
Follow us on

ಸಂಜೆಯ ಚಹಾದ ಸಮಯದಲ್ಲಿ ಗರಿ ಗರಿಯಾಗಿ ಕರಿದ ತಿಂಡಿಯನ್ನು ತಿನ್ನಬೇಕೆನಿಸುವುದು ಸಹಜ. ಆದ್ದರಿಂದ ನೀವು ವಿಭಿನ್ನ ರುಚಿಯನ್ನು ನೀಡುವ ಅಕ್ಕಿಯ ಪಕೋಡವನ್ನು ತಯಾರಿಸಿ. ನೀವಿದನ್ನು ಕೇವಲ 5ರಿಂದ 10 ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ರಾತ್ರಿ ಉಳಿದಿರುವ ಅನ್ನವನ್ನು ಮರುದಿನ ಬಿಸಾಡುವ ಬದಲು ಅದರಿಂದ ಒಂದು ರುಚಿಯಾದ ರೆಸಿಪಿಯನ್ನು ತಯಾರಿಸಬಹುದು. ಆದ್ದರಿಂದ ನೀವು ಸಂಜೆಯ ಟೀ ಗೆ ಸುಲಭವಾಗಿ ಹಾಗೂ ಬೇಗ ತಯಾರಿಸಬಹುದಾದ ಅಕ್ಕಿಯ ಪಕೋಡದ ಪಾಕ ವಿಧಾನ ಇಲ್ಲಿದೆ.

ಅಕ್ಕಿ ಪಕೋಡ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:

1 ಕಪ್​​ ಅನ್ನ
ಸ್ವಲ್ಪ ಅಕ್ಕಿ ಹಿಟ್ಟು
ಚಿಕ್ಕದಾಗಿ ಕತ್ತರಿಸಿದ 2 ಈರುಳ್ಳಿ
ಚಿಕ್ಕ ತುಂಡು ಶುಂಠಿ
ಕೊತ್ತಂಬರಿ ಸೊಪ್ಪು
1ಚಮಚ ಕೊತ್ತಂಬರಿ ಮತ್ತು ಜೀರಿಗೆ ಪುಡಿ
ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ
1/2 ಚಮಚ ಕೆಂಪು ಮೆಣಸಿನ ಪುಡಿ
1/2 ಚಮಚ ಅರಶಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ

ಅಕ್ಕಿ ಪಕೋಡ ಮಾಡುವ ವಿಧಾನ:

ಹಂತ :1

ಅನ್ನವನ್ನು ಮೊದಲು ಚೆನ್ನಾಗಿ ಹಿಸುಕಿ. ನಂತರ ಅದಕ್ಕೆ ಎಣ್ಣೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಪದಾರ್ಥವನ್ನು ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ, ಹಿಟ್ಟು ದಪ್ಪವಾಗಿರಲಿ.

ಹಂತ: 2

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಹಿಟ್ಟನ್ನು ಚಿಕ್ಕ ಉಂಡೆಯನ್ನಾಗಿ ಮಾಡಿ, ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಕರಿಯಿರಿ. ಈಗ ಗರಿ ಗರಿಯಾದ ಅಕ್ಕಿ ಪಕೋಡ ಸಿದ್ಧವಾಗಿದೆ. ನೀವಿದನ್ನು ಸಂಜೆಯ ಚಹಾದ ಸಮಯದಲ್ಲಿ ಸವಿಯಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:21 pm, Sat, 11 February 23