Guava Leaves For Toothache: ಪೇರಳೆ ಹಣ್ಣಿನ ಎಲೆಯಿಂದ ಹಲ್ಲುನೋವು ಮಾಯ

ಪೇರಳೆ ಎಲೆಗಳ ವಿಟಮಿನ್ ಸಿ, ಬಿ ಮತ್ತು ಮ್ನೇಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ, ಲೈಕೋಪೀನ್ ಇತ್ಯಾದಿ ಪೋಷಕಾಂಶಗಳು ಹಲ್ಲುನೋವನ್ನು ತಡೆಯಲು ಸಹಕಾರಿಯಾಗಿದೆ.

Guava Leaves For Toothache: ಪೇರಳೆ ಹಣ್ಣಿನ ಎಲೆಯಿಂದ ಹಲ್ಲುನೋವು ಮಾಯ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2023 | 4:10 PM

ಹ ಲ್ಲುನೋವುನಮ್ಮಲ್ಲಿ ಹೆಚ್ಚಿನವರು ಅನುಭವಿಸುವ ಸಾಮಾನ್ಯ ನೋವಿನ ಸ್ಥಿತಿಯಾಗಿದೆ. ಅತಿಯಾಗಿ ತಣ್ಣಗಿರುವ, ಬಿಸಿಯಾದ ಅಥವಾ ಹುಳಿಯಾದ ಯಾವುದನ್ನಾದರೂ ತಿಂದಾಗ ಅಥವಾ ಕುಡಿದಾಗ ಹಲ್ಲು ನೋವು ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಹಲ್ಲುನೋವು ನಿವಾರಿಸಲು ಪ್ರತ್ಯಕ್ಷವಾದ ಔಷಧಿಗಳು ಲಭ್ಯವಿದ್ದರೂ, ನೈಸರ್ಗಿಕ ಪರಿಹಾರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಮತ್ತು ಇವುಗಳು ಸುಲಭವಾಗಿ ಲಭ್ಯವಿರುವ ಮನೆಮದ್ದುಗಳಾಗಿವೆ. ಹಲ್ಲುನೋವಿಗೆ ಅಂತಹ ಜನಪ್ರಿಯ ಮದ್ದುಗಳಲ್ಲಿ ಪೇರಳೆ ಎಲೆಗಳು ಕೂಡಾ ಒಂದು. ಈ ಎಲೆಗಳು ಹಲ್ಲಿನ ಕೊಳೆತವನ್ನು ಕಡಿಮೆ ಮಾಡುವ, ಉರಿಯೂತವನ್ನು ತೆಗೆದುಹಾಕುವ ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡುವ ಗುಣವನ್ನು ಹೊಂದಿದೆ. ಈ ಎಲೆಗಳು ಆಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ಹಲ್ಲು ನೋವಿಗೆ ಪೇರಳೆ ಎಲೆಗಳನ್ನು ಹೇಗೆ ಬಳಸುವುದು?

ಪೇರಳೆ ಎಲೆಗಳು, ಸ್ವಲ್ಪ ಹಿಪ್ಪಲಿ ಮತ್ತು ಲವಂಗವನ್ನು ತೆಗೆದುಕೊಳ್ಳಿ, ಇದಕ್ಕೆ ಸ್ವಲ್ಪ ಉಪ್ಪನ್ನು ಕೂಡಾ ಸೇರಿಸಿ ಇವೆಲ್ಲವನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ನಿಮ್ಮ ಹಲ್ಲುಗಳಿಗೆ ಅನ್ವಯಿಸಿ. ಇದಲ್ಲದೆ ತಾಜಾ ಪೇರಳೆ ಎಲೆಗಳ ಚಿಗುರುಗಳನ್ನು ಬಾಯಿಯಲ್ಲಿ ಅಗಿಯಿರಿ. ಇದರಿಂದ ಅದರ ರಸವು ಹಲ್ಲಿನ ಪೀಡಿತ ಪ್ರದೇಶವನ್ನು ತಲುಪುತ್ತದೆ.

ಹಲ್ಲುನೋವಿಗೆ ಪೇರಳೆ ಎಲೆಗಳ ಪ್ರಯೋಜನಗಳು:

ಆಂಟಿಬ್ಯಾಕ್ಟೀರಿಯಲ್: ನೀವು ಹಲ್ಲುನೋವನ್ನು ತೊಡೆದುಹಾಕಲು ಈ ಆಂಟಿಬ್ಯಾಕ್ಟೀರಿಯಲ್ ಪೇಸ್ಟ್ ನ್ನು ಬಳಸಬಹುದು. ಇದು ಹಲ್ಲಿನ ಒಳಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದರ ಜೊತೆಗೆ ಹಲ್ಲಿನಲ್ಲಿರುವ ಹುಳಗಳನ್ನು ತಟಸ್ಥಗೊಳಿಸುತ್ತದೆ. ಈ ರೀತಿಯಾಗಿ ಇದು ಹಲ್ಲುನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ: ಪೇರಳೆ ಎಲೆಗಳಲ್ಲಿ ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿದೆ. ಇವು ಹಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಹಲ್ಲಿನ ಸುತ್ತಮುತ್ತಲಿನ ಸೋಂಕನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Toothache: ಹಲ್ಲು ನೋವಿನ ತ್ವರಿತ ಪರಿಹಾರಕ್ಕೆ ಮನೆ ಮದ್ದುಗಳು

ಖನಿಜಗಳ ಪೂರೈಕೆ: ಪೇರಳೆ ಎಲೆಗಳು ಹಲ್ಲುಗಳಿಗೆ ಅಗತ್ಯವಾದ ಖನಿಜಗಳನ್ನು ಪೂರೈಸುತ್ತದೆ. ಈ ಖನಿಜಗಳ ಕೊರತೆಯು ಹಲ್ಲುನೋವಿಗೆ ಕಾರಣವಾಗಬಹುದು. ಮೆಗ್ನೇಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮುಂತಾದ ಖನಿಜಗಳ ಅನುಪಸ್ಥಿತಿಯು ದಂತಕವಚವನ್ನು ದುರ್ಬಲಗೊಳಿಸುತ್ತದೆ. ಮತ್ತು ನಮ್ಮ ಹಲ್ಲುಗಳಿಗೆ ನೋವುಂಟುಮಾಡುವ ಸೋಂಕುಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಪೇರಳೆ ಎಲೆಗಳು ಈ ಹಲ್ಲುಗಳಿಗೆ ಬೇಕಾದ ಅಗತ್ಯ ಖನಿಜಗಳನ್ನು ಒದಗಿಸುತ್ತದೆ ಮತ್ತು ಹಲ್ಲುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ