ಶಾಹಿ ಚಿಕನ್ ಕುರ್ಮ ನಿಮಗೆ ಇಷ್ಟನಾ? ಮಾಡುವ ವಿಧಾನ ಇಲ್ಲಿದೆ
ಹೋಟೆಲ್ಗಳಲ್ಲಿ ಚಿಕನ್ ಕುರ್ಮ ಆರ್ಡರ್ ಮಾಡಿದಾಗ ಯಾವಾಗ ತಂದುಕೊಡ್ತಾರೋ.. ಯಾವಾಗ ತಿನ್ನುತ್ತೀವೋ.. ಅಂತೆಲ್ಲಾ ಕುಳಿತ ಚೇರ್ ಮೇಲೆ ಒದ್ದಾಡುತ್ತಾರೆ. ತಿಂದ ಮೇಲೆ ಅಯ್ಯೋ ಅದೆಷ್ಟು ಖರ್ಚಾಯಿತು ಅಂತ ಚೋಬನ್ನು ಮುಟ್ಟಿ ನೋಡಿಕೊಳ್ಳುತ್ತಾರೆ. ಈ ಬಗ್ಗೆ ಚಿಂತೆ ಬೇಡ.
ಚಿಕನ್ ಎಂದರೆ ಮಾಂಸ ಪ್ರಿಯರ ಬಾಯಲ್ಲಿ ನೀರು ಬರದೇ ಇರುತ್ತಾ? ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟವಾಗುವ ಚಿಕನ್ ಅಡುಗೆ ತಯಾರಿಸುವಲ್ಲಿ ಹಲವು ಪ್ರಯೋಗ ಮಾಡುತ್ತಾರೆ. ಕೆಲವು ಬಾರಿ ಪ್ರಯೋಗ ಹಾಳಾದರೂ ಹಲವು ಬಾರಿ ಯೋಚಿಸದಕ್ಕಿಂತ ಹೆಚ್ಚು ರುಚಿ ಸಿಗುತ್ತದೆ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಚಿಕನ್ ಪೆಪ್ಪರ್ ಡ್ರೈ ಹೀಗೆ ಹತ್ತು ಹಲವು ರುಚಿಕರ ಚಿಕನ್ ಅಡುಗಳಿವೆ. ಈ ಸಾಲಿಗೆ ಶಾಹಿ ಚಿಕನ್ ಕುರ್ಮ ಕೂಡಾ ಸೇರುತ್ತೆ.
ಹೋಟೆಲ್ಗಳಲ್ಲಿ ಚಿಕನ್ ಕುರ್ಮ ಆರ್ಡರ್ ಮಾಡಿದಾಗ ಯಾವಾಗ ತಂದುಕೊಡ್ತಾರೋ.. ಯಾವಾಗ ತಿನ್ನುತ್ತೀವೋ.. ಅಂತೆಲ್ಲಾ ಕುಳಿತ ಚೇರ್ ಮೇಲೆ ಒದ್ದಾಡುತ್ತಾರೆ. ತಿಂದ ಮೇಲೆ ಅಯ್ಯೋ ಅದೆಷ್ಟು ಖರ್ಚಾಯಿತು ಅಂತ ಚೋಬನ್ನು ಮುಟ್ಟಿ ನೋಡಿಕೊಳ್ಳುತ್ತಾರೆ. ಈ ಬಗ್ಗೆ ಚಿಂತೆ ಬೇಡ. ರೆಸ್ಟೋರೆಂಟ್ ಶೈಲಿಯಲ್ಲಿ ಶಾಹಿ ಚಿಕನ್ ಕುರ್ಮ ಮಾಡುವುದು ಹೇಗೆ ಅಂತ ನಾವು ಹೇಳಿ ಕೊಡುತ್ತೀವಿ ನೋಡಿ.
ಬೇಗಾಗುವ ಸಾಮಾಗ್ರಿಗಳು * ಒಂದು ಕೆ.ಜಿ ಚಿಕನ್ ಮಾಂಸ * 4 ರಿಂದ 5 ಈರುಳ್ಳಿ * ಎಣ್ಣೆ * ಗೋಡಂಬಿ (20) * ಶುಂಠಿ, ಬೆಳ್ಳುಳ್ಳಿ ಪೇಸ್ಟ್ * ಏಲಕ್ಕಿ (4 ರಿಂದ 5) * ಕೊತ್ತಂಬರಿ ಪುಡಿ (2 ಚಮಚ) * ಕಾಳು ಮೆಣಸು ( 4 ಕಾಳು) * ಒಂದು ಇಂಚಿನ ಚಕ್ಕೆ (cinnamon stick) * ಎರಡು ಟೋಮ್ಯಾಟೋ * ಒಂದು ಚಮಚ ಜೀರಿಗೆ ಪುಡಿ * 3 ರಿಂದ ನಾಲ್ಕು ಒಣ ಮೆಣಸು * ಉಪ್ಪು * ಖಾರದ ಪುಡಿ * ಎರಡು ಲವಂಗದ ಎಲೆ * ½ ಕಪ್ ಮೊಸರು * ಕೊತ್ತಂಬರಿ ಸೊಪ್ಪು
ಮೊದಲು ತಂದ ಚಿಕನ್ನ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಈರುಳ್ಳಿ, ಟೋಮ್ಯಾಟೋವನ್ನು ಕತ್ತರಿಸಿಕೊಳ್ಳಿ. ಆ ಬಳಿಕ 20 ಗೋಡಂಬಿ ಮೊಸರಿನೊಂದಿಗೆ ಸೇರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಗ್ಯಾಸ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಕತ್ತರಿಸಿಕೊಂಡ ಈರಳ್ಳಿಯನ್ನು ಹಾಕಿ. ಈರುಳ್ಳಿ ಕಂದು ಬಣ್ಣ ಆಗುವವರೆಗೂ ಫ್ರೈ ಮಾಡಿ.
ಈರುಳ್ಳಿ ಕಂದು ಬಣ್ಣ ಬಂದ ನಂತರ ಅದನ್ನು ಎಣ್ಣೆಯಿಂದ ಹೊರಗೆ ತೆಗೆಯಿರಿ. ಅದೆ ಎಣ್ಣೆಗೆ ಲವಂಗ ಎಲೆ, ಏಲಕ್ಕಿ, ಚಕ್ಕೆ, ಒಣ ಮೆಣಸು, ಕಾಳು ಮೆಣಸು ಜೀರಿಗೆ ಸೇರಿಸಿ ಫ್ರೈ ಮಾಡಿ. ಸ್ವಲ್ಪ ಈರುಳ್ಳಿ, ಒಣ ಮೆಣಸು, ಟೋಮ್ಯಾಟೋ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿಣದೊಂದಿಗೆ ಕಲಸಿಟ್ಟ ಚಿಕನ್ ಹಾಕಿ. ಇದಕ್ಕೆ ಕೊತ್ತಂಬರಿ ಪುಡಿ ಸೇರಿದಂತೆ ತಿಳಿಸಿದ ಎಲ್ಲ ಮಸಾಲೆಗಳನ್ನು ಹಾಕಬೇಕು.
ಮಾಂಸ ಬೇಯುವಾಗ ಅದಕ್ಕೆ ಮೊಸರು, ಗೋಡಂಬಿಯನ್ನು ನಿಧಾನವಾಗಿ ಸೇರಿಸಿ 3 ರಿಂದ 4 ನಿಮಿಷ ಹಾಗೆ ಬಿಡಿ. ಆಮೇಲೆ ಫ್ರೈ ಮಾಡಿಕೊಂಡ ಈರುಳ್ಳಿಯನ್ನು ಹಾಕಿ. ಕೊನೆಯ ಹಂತಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅನ್ನದೊಂದಿಗೆ ಸವಿಯಿರಿ.
ಇದನ್ನೂ ಓದಿ
Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?
Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು
(Shahi chicken Kurma recipe and step to prepare tasty in kannada)