ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿ ಹಬ್ಬಗಳು ಕೂಡ ಒಂದು. ದೇಶದೆಲ್ಲೆಡೆ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ಮಾಡಲಾಗುತ್ತದೆ. ಈ ದಿನದಂದು ಭಕ್ತರ ದಂಡೇ ಶಿವಾಲಯಗಳಿಗೆ ತೆರಳಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹೆಚ್ಚಿನವರು ಜಾಗರಣೆ ಹಾಗೂ ಉಪವಾಸವನ್ನು ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ವಿಶೇಷವಾದ ಅಡುಗೆ ಮಾಡಿದರೂ ಸಬ್ಬಕ್ಕಿಯಿಂದ ಮಾಡಿದ ಒಂದಾದರೂ ತಿನಿಸು ಇರಲೇಬೇಕು. ಹೀಗಾಗಿ ಶಿವರಾತ್ರಿಯಂದು ಸಬ್ಬಕ್ಕಿ ಉಪ್ಪಿಟ್ಟು ಹಾಗೂ ಸಬ್ಬಕ್ಕಿ ಖಿಚಡಿಯನ್ನು ಮಾಡಿ ಸವಿಯಬಹುದು.
ಸಬ್ಬಕ್ಕಿ ಉಪ್ಪಿಟ್ಟು
* ಬೇಕಾಗುವ ಪದಾರ್ಥಗಳು:
* ಸಬ್ಬಕ್ಕಿ (ಸಾಬುದಾನ)
* ಶೇಂಗಾ
* ಹಸಿಮೆಣಸು
* ಸಾಸಿವೆ
* ಜೀರಿಗೆ
* ಉಪ್ಪು
* ಎಣ್ಣೆ
ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ:
* ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
* ಈಗಾಗಲೇ ಹುರಿದು ಪುಡಿ ಮಾಡಿದ ಶೇಂಗಾದ ಪುಡಿ, ಕತ್ತರಿಸಿಟ್ಟ ಹಸಿಮೆಣಸು ಸೇರಿಸಿಕೊಳ್ಳಿ.
* ಇದಕ್ಕೆ ನೆನೆಸಿಟ್ಟ ಸಬ್ಬಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಕೊನೆಗೆ ಅಗತ್ಯವಿರುವಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಸಬ್ಬಕ್ಕಿ ಚೆನ್ನಾಗಿ ಬೆಂದ ಬಳಿಕ ಸ್ಟವ್ ಆಫ್ ಮಾಡಿದರೆ ಸಬ್ಬಕ್ಕಿ ಉಪ್ಪಿಟ್ಟು ಸವಿಯಲು ಸಿದ್ಧ.
ಇದನ್ನೂ ಓದಿ: ನಿಮ್ಮ ಇಷ್ಟಾರ್ಥ ಸಿದ್ಧಿಸಲು ಮಹಾಶಿವರಾತ್ರಿಯಂದು ಈ ರೀತಿ ಮಾಡಿ
ಸಬ್ಬಕ್ಕಿ ಖಿಚಡಿ
* ಬೇಕಾಗುವ ಪದಾರ್ಥಗಳು:
* ಸಬ್ಬಕ್ಕಿ
* ಆಲೂಗಡ್ಡೆ
* ಹಸಿಮೆಣಸು
* ಪುಡಿ ಮಾಡಿದ ಶೇಂಗಾ
* ತುಪ್ಪ
* ಜೀರಿಗೆ
* ಕರಿಬೇವು
* ನಿಂಬೆರಸ
* ಉಪ್ಪು
* ಕೊತ್ತಂಬರಿ ಸೊಪ್ಪು.
ಸಬ್ಬಕ್ಕಿ ಖಿಚಡಿ ಮಾಡುವ ವಿಧಾನ:
* ಮೊದಲಿಗೆ ಸಬ್ಬಕ್ಕಿಯನ್ನು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
* ಸಬ್ಬಕ್ಕಿಯನ್ನು ನೀರಿನಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ ಕೊಳ್ಳಿ.
* ಈಗ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು, ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಜೀರಿಗೆ, ಸಾಸಿವೆ ಕರಿಬೇವು ಹಾಗೂ ಹಸಿಮೆಣಸು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ಚೆನ್ನಾಗಿ ಬೇಯಿಸಿಟ್ಟ ಹಿಚುಕಿಟ್ಟ ಆಲೂಗಡ್ಡೆಯಲ್ಲಿ ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಆ ಬಳಿಕ ನೆನೆಸಿಟ್ಟ ಸಬ್ಬಕ್ಕಿ ಹಾಗೂ ಶೇಂಗಾ ಪುಡಿ ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಕೊನೆಗೆ ನಿಂಬೆರಸವನ್ನು ಹಿಂಡಿದರೆ ಘಮ್ ಘಮ್ ಎನಿಸುವ ಸಬ್ಬಕ್ಕಿ ಖಿಚಿಡಿ ಸವಿಯಲು ಸಿದ್ಧ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ