Shivaratri 2024 : ಕಡಿಮೆ ಬಜೆಟ್ನಲ್ಲಿ ಶಿವರಾತ್ರಿ ಹಬ್ಬಕ್ಕೆ ಮನೆಯ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಐಡಿಯಾ
ಹಿಂದೂಗಳ ಪಾಲಿನ ವಿಶೇಷ ಹಬ್ಬಗಳಲ್ಲಿ ಮಹಾಶಿವರಾತ್ರಿ ಕೂಡ ಒಂದು. ದೇಶದೆಲ್ಲೆಡೆ ಬಾರಿ ಸಂಭ್ರಮದಿಂದ ಆಚರಿಸಲಾಗುವ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದ್ದು, ಈ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸ, ಜಾಗರಣೆ ಮಾಡಲಾಗುತ್ತದೆ. ಮನೆಯಲ್ಲಿ ವಿಶೇಷ ಅಡುಗೆಯನ್ನು ಮಾಡುವ ಮೂಲಕ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಹಬ್ಬದ ರಂಗು ಹೆಚ್ಚಾಗಬೇಕಿದ್ದರೆ ಶಿವರಾತ್ರಿಯ ಹಬ್ಬದ ಕಳೆ ಹೆಚ್ಚಾಗಬೇಕಾದರೆ ಮನೆಯ ಅಲಂಕಾರವು ಮುಖ್ಯವಾಗುತ್ತದೆ. ಈ ಐಡಿಯಾವನ್ನು ಬಳಸಿ ಮನೆಯು ಸುಂದರವಾಗಿ ಕಾಣುವಂತೆ ಮಾಡಬಹುದು.
ಭಾರತೀಯರ ಪಾಲಿಗೆ ಹಬ್ಬವೆಂದರೆ ಸಂಭ್ರಮ. ಮನೆ ಮಂದಿಯೆಲ್ಲಾ ಸೇರಿ ಒಂದೆಡೆ ಸೇರಿಕೊಂಡು ಬಗೆ ಬಗೆಯ ಅಡುಗೆಗಳನ್ನು ತಯಾರಿಸಿ ಅದ್ದೂರಿಯಾಗಿಯೇ ಆಚರಿಸುತ್ತಾರೆ. ಈ ಬಾರಿಯ ಶಿವರಾತ್ರಿಯ ಹಬ್ಬದ ದಿನ ಮನೆಯ ವಾತಾವರಣವನ್ನು ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು ಸಿಂಗರಿಸಿಕೊಂಡರೆ ಹಬ್ಬದ ಕಳೆಯು ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಮಹಾಶಿವರಾತ್ರಿಯಂದು ಮನೆಯು ಆಕರ್ಷಕವಾಗಿ ಕಾಣುವಂತೆ ಅಲಂಕರಿಸಿ ಹಬ್ಬವನ್ನು ಸಂಭ್ರಮಿಸಿ.
ಹಬ್ಬದ ದಿನ ಮನೆಯ ಅಲಂಕಾರವನ್ನು ಹೀಗೆ ಮಾಡಿ:
- ಪೂಜಾ ಕೊಠಡಿಗಳನ್ನು ಅಲಂಕರಿಸಿ: ಶಿವರಾತ್ರಿಯ ದಿನ ವಿಶೇಷವಾಗಿ ಶಿವನಿಗೆ ಪೂಜೆ ಮಾಡುವ ಕಾರಣ ಪೂಜೆಗೆ ಬಳಸಲಾಗುವ ತ್ರಾಮ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಹೂವಿನಿಂದ ಅಲಂಕರಿಸಿಕೊಳ್ಳಿ. ಪೂಜಾ ಕೊಠಡಿಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರ ಮೇಲೆ ಗುಲಾಬಿ ಎಸಳಿನಿಂದ ಅಲಂಕರಿಸಬಹುದು.
- ಮನೆಯನ್ನು ದೀಪಗಳಿಂದ ಅಲಂಕರಿಸಿ : ಮನೆಯಲ್ಲಿ ಹಬ್ಬದ ಸಂಭ್ರಮವು ದುಪ್ಪಟ್ಟಾಗಬೇಕಾಗಿದ್ದರೆ ಕೃತಕ ಹಾಗೂ ನೈಜ ದೀಪಗಳಿಂದ ಮನೆಯನ್ನು ಸಿಂಗರಿಸಿಕೊಳ್ಳಿ. ಹೀಗೆ ಅಲಂಕಾರ ಮಾಡಿದರೆ ಮನೆಯಲ್ಲಿ ಹಬ್ಬದ ಕಳೆಯು ಎದ್ದು ಕಾಣುತ್ತದೆ.
- ಮನೆಯ ಮುಂದೆ ರಂಗೋಲಿ ಹಾಕಿ : ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕುವ ಪದ್ಧತಿಯು ಮುಂಚೆಯಿಂದಲೂ ಇದೆ. ಆದರೆ ಹಬ್ಬದ ದಿನಗಳಲ್ಲಿ ಮನೆಯ ಮುಂಭಾಗ ಹಾಗೂ ದೇವರ ಕೋಣೆಯ ಮುಂಭಾಗದಲ್ಲಿ ವಿವಿಧ ಬಣ್ಣಗಳಿಂದ ಕೂಡಿದ ಆಕರ್ಷಕವಾಗಿರುವ ಚಿತ್ತಾರವನ್ನು ಬಿಡಿಸುವುದರಿಂದ ಮನೆಯಲ್ಲಿ ಧನಾತ್ಮಕತೆ ಶಕ್ತಿಯು ಹೆಚ್ಚಾಗುತ್ತದೆ.
- ಬಾಗಿಲಿಗೆ ತೋರಣ ಕಟ್ಟಲು ಮರೆಯದಿರಿ : ಹಬ್ಬದ ದಿನ ಮನೆಯ ಬಾಗಿಲಿಗೆ ಹಾಗೂ ದೇವರ ಕೋಣೆಗೆ ತೋರಣವನ್ನು ಕಟ್ಟುವ ಅಭ್ಯಾಸವು ಧಾರ್ಮಿಕ ಕಳೆಯನ್ನು ಹೆಚ್ಚಿಸುವುದಲ್ಲದೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ದಿನದಂದು ಮಾವಿನ ತೋರಣವನ್ನು ಕಟ್ಟಬಹುದು. ಇಲ್ಲವಾದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಆಕರ್ಷಕ ಕೃತಕ ತೋರಣಗಳು ಲಭ್ಯವಿದ್ದು, ಅದನ್ನು ಮನೆಯ ಬಾಗಿಲಿನ ಅಲಂಕಾರಕ್ಕೆ ಬಳಸಬಹುದು.
- ಕೃತಕ ಹೂವುಗಳ ಬಳಕೆ ಇರಲಿ : ನಿಮ್ಮ ಮನೆಯನ್ನು ಹಬ್ಬದ ದಿನ ಸುಂದರವಾಗಿಸಿರುವಂತೆ ಮಾಡುವುದೇ ಈ ಕೃತಕ ಹೂವುಗಳು. ಕೃತಕ ಹೂವಿನ ಮಾಲೆಗಳನ್ನು ಬಾಗಿಲಿಗೆ ನೇತಾಕಬಹುದು. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹೂವಿನ ಕುಂಡಗಳು ಸಿಗುತ್ತವೆ. ಇದನ್ನು ಮನೆಯ ಮುಂಭಾಗದಲ್ಲಿ, ಬಾಲ್ಕನಿಯಲ್ಲಿ ಇರಿಸಿದರೆ ನಿಮ್ಮ ಮನೆಯ ನೋಟವೇ ಬದಲಾಗುತ್ತದೆ.
- ಮನೆಯ ತೋಟದಲ್ಲಿ ಬೆಳೆದಿರುವ ಹೂವುಗಳನ್ನು ಬಳಸಿ : ಮನೆಯ ತೋಟದಲ್ಲಿ ವಿವಿಧ ಹೂವುಗಳಿದ್ದರೆ ಆ ಹೂವುಗಳಿಂದ ದೇವರ ಫೋಟೋಗಳಿಗೆ ಅಲಂಕಾರ ಮಾಡಿ. ದೇವರ ಕೋಣೆಯ ಮುಂಭಾಗದಲ್ಲಿ ಈ ಹೂವುಗಳ ಎಸಳನ್ನು ಬಳಸಿ ಹೂವಿನ ರಂಗೋಲಿಯನ್ನು ಬಿಡಿಸಬಹುದು.
- ಪ್ರವೇಶದ್ವಾರದಲ್ಲಿ ಆಕರ್ಷಕ ಕಾರ್ಪೆಟ್ ಗಳಿರಲಿ : ನಿಮ್ಮ ಮನೆಯ ಪ್ರವೇಶದ್ವಾರವೇ ಹಬ್ಬದ ಸಂಭ್ರಮವು ಎಷ್ಟಿದೆ ಎಂದು ತೋರಿಸುತ್ತದೆ. ಹೀಗಾಗಿ ಸ್ವಚ್ಛವಾದ ಕಾರ್ಪೆಟ್ ಗಳು ಹಾಗೂ ಕಿಟಕಿಗಳಿಗೆ ಬಣ್ಣ ಬಣ್ಣದ ಪರದೆಗಳನ್ನು ಹಾಕಿ. ಮನೆಯ ಮುಂಭಾಗಿಲಿನಲ್ಲಿ ಕಾರ್ಪೆಟ್ ಗಳಲ್ಲಿ ಹೂವಿನ ಚಿತ್ತಾರವಿದ್ದರೆ ಇನ್ನು ಆಕರ್ಷಕ ವಾಗಿ ಕಾಣುವಂತೆ ಮಾಡುತ್ತದೆ.
- ಮನೆಯಲ್ಲಿ ಧೂಪದ್ರವ್ಯವನ್ನು ಬಳಸಿ : ಆಧ್ಯಾತ್ಮಿಕ ವಾತಾವರಣವು ಬೇಕಾದರೆ ಪರಿಮಳವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಧೂಪದ್ರವ್ಯವನ್ನು ಬೆಳೆಗಿಸಿ. ಮನೆಯಲ್ಲಿ ಸುಗಂಧದ ಮೇಣದಬತ್ತಿಗಳು ಮತ್ತು ತಾಜಾ ಹೂವುಗಳನ್ನು ಇರಿಸಿ. ಇದರ ಘಮವು ಮನೆಯು ತುಂಬೆಲ್ಲಾ ಹಬ್ಬುತ್ತದೆ. ಈ ರೀತಿಯಾಗಿ ಅಲಂಕಾರ ಮಾಡಿದರೆ ಮನೆಯಲ್ಲಿ ಹಬ್ಬದ ವಾತಾವರಣವು ಸಹಜವಾಗಿ ಸೃಷ್ಟಿಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:06 pm, Thu, 7 March 24