Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು

ಮಾರ್ಚ್ ತಿಂಗಳು ಹಬ್ಬಗಳ ತಿಂಗಳು. ಹಿಂದೂಗಳ ಪವಿತ್ರ ಹಬ್ಬಗಳಾದ ಮಹಾ ಶಿವರಾತ್ರಿ, ಹೋಳಿ ಹಬ್ಬದ ಜೊತೆಗೆ ಮುಸ್ಲಿಮರ ಹಬ್ಬವಾದ ರಂಜಾನ್ ಕೂಡ ಈ ಬಾರಿ ಮಾರ್ಚ್​ನಲ್ಲೇ ಬಂದಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಈ ಬಾರಿ ರಂಜಾನ್ ಆಚರಿಸುವ ಮುಸ್ಲಿಮರಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಕೆಲವು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಇಲ್ಲಿದೆ.

Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು
ರಂಜಾನ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 07, 2024 | 3:49 PM

ಈ ವರ್ಷದ ರಂಜಾನ್ ಆಚರಣೆಯ (Ramadan 2024) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ರಂಜಾನ್ ಮುಸ್ಲಿಮರ ಪವಿತ್ರವಾದ ಹಬ್ಬ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಆದರೆ, ದಿನಾಂಕಗಳಲ್ಲಿ ಬದಲಾವಣೆಗಳು ಆಗುತ್ತವೆ. ರಂಜಾನ್ ಆಚರಣೆ 29ರಿಂದ 30 ದಿನಗಳವರೆಗೆ ಇರುತ್ತದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಮುಹಮ್ಮದ್‌ಗೆ ಕುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ಸ್ಮರಣಾರ್ಥವಾಗಿ ರಂಜಾನ್ (Ramadan Fasting) ಅನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಇಸ್ಲಾಮಿಕ್ ಪವಿತ್ರ ತಿಂಗಳ ಆರಂಭವು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷ, ಮಾರ್ಚ್ 11 ಅಥವಾ 12ರಂದು ರಂಜಾನ್ ಪ್ರಾರಂಭವಾಗಿ, ಏಪ್ರಿಲ್ 9ರಂದು ಕೊನೆಗೊಳ್ಳುವ ಸಾಧ್ಯತೆಯಿದೆ.

ಈ ಒಂದು ತಿಂಗಳು ಇಸ್ಲಾಂ ಧರ್ಮವನ್ನು ಅನುಸರಿಸುವ ಜನರು ಮುಂಜಾನೆಯಿಂದ ಉಪವಾಸವನ್ನು ಆಚರಿಸಲು ಪ್ರಾರಂಭಿಸುತ್ತಾರೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುರಿಯುತ್ತಾರೆ. ಮುಂಜಾನೆ ಊಟವನ್ನು ಸುಹೂರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರದ ಊಟವನ್ನು ಇಫ್ತಾರ್ ಎನ್ನಲಾಗುತ್ತದೆ. ಸಾಂಪ್ರದಾಯಿಕವಾಗಿ, ನೀರು ಮತ್ತು ಖರ್ಜೂರವನ್ನು ಹೊಂದುವ ಮೂಲಕ ಉಪವಾಸವನ್ನು ಮುರಿಯಲಾಗುತ್ತದೆ.

ಇದನ್ನೂ ಓದಿ: Ramadan 2024: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್​ ಕೂಟದ ವಿವರ ಇಲ್ಲಿದೆ

ಪ್ರತಿ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ರಂಜಾನ್ ತಿಂಗಳಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡುತ್ತದೆ. ಈ ಬಾರಿಯ ಮಾರ್ಗಸೂಚಿಗಳು ಹೀಗಿವೆ…

ರಂಜಾನ್​ಗೆ WHO ಮಾರ್ಗಸೂಚಿಗಳು:

ಸಮತೋಲಿತ ಆಹಾರ:

ರಂಜಾನ್ ಸಮಯದಲ್ಲಿ ಉಪವಾಸ ಇರುವುದರಿಂದ ಮುಸ್ಲಿಮರಿಗೆ ಸಮತೋಲಿತ ಆಹಾರವನ್ನು ಸೇವಿಸುವುದು ಅಗತ್ಯ. ಉಪವಾಸವನ್ನು ಮುರಿಯುವ ಮೊದಲು ಅಥವಾ ನಂತರ ಹೆಚ್ಚು ಕರಿದ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು. ದೇಹವನ್ನು ಪೋಷಿಸುವ ಪೌಷ್ಟಿಕಾಂಶದ ಆಹಾರವನ್ನು ನಾವು ಸೇವಿಸುವುದು ಉತ್ತಮ. ಉಪವಾಸದ ನಂತರ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದು ಸಹ ಕಡ್ಡಾಯವಾಗಿದೆ.

ಉಪ್ಪು ಸೇವನೆಯನ್ನು ಮಿತಿಗೊಳಿಸಿ:

ಬಹುತೇಕ ಜನರು ಆಹಾರದೊಂದಿಗೆ ಉಪ್ಪಿನ ಅಂಶ ಅಧಿಕವಾಗಿರುವ ಪದಾರ್ಥಗಳು, ಉಪ್ಪಿನಕಾಯಿಯನ್ನು ಸೇವಿಸುತ್ತಾರೆ. ಇದರ ಬಗ್ಗೆ ನಾವು ಗಮನ ಹರಿಸಬೇಕು. ಇದರ ಬದಲಿಗೆ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಬಹುದು.

ವ್ಯಾಯಾಮ:

ರಂಜಾನ್ ತಿಂಗಳು ಪೂರ್ತಿ ವ್ಯಾಯಾಮವನ್ನು ಮುಂದುವರಿಸುವುದು ಮುಖ್ಯ. ಇದು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಚಲನೆಯು ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.

ತಂಬಾಕು ಸೇವಿಸಬಾರದು:

ರಂಜಾನ್ ತಿಂಗಳಲ್ಲಿ ಆಹಾರದ ಸಮಯ, ಪ್ರಕಾರದಲ್ಲಿ ಬದಲಾವಣೆಯಾಗುವುದರಿಂದ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತವೆ. ಹೀಗಾಗಿ, ಈ ಸಂದರ್ಭದಲ್ಲಿ ಆರೋಗ್ಯವಾಗಿರಲು ತಂಬಾಕು ಸೇವನೆಯಿಂದ ದೂರವಿರಬೇಕು.

ಇದನ್ನೂ ಓದಿ: Maha Shivaratri 2024: ಮಹಾ ಶಿವರಾತ್ರಿ ಉಪವಾಸದ ನಿಯಮಗಳೇನು? ಏನು ಸೇವಿಸಬಹುದು, ಏನು ತಿನ್ನಬಾರದು?

ಕರಿದ ಆಹಾರ ಸೇವಿಸಬೇಡಿ:

ಹೆಚ್ಚು ಕರಿದ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರ ಬದಲಿಗೆ ಆಹಾರವನ್ನು ಬೇಯಿಸಿ ತಿನ್ನುವುದು ಉತ್ತಮ. ಇದು ಪೌಷ್ಠಿಕಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಉಪವಾಸದ ಮೊದಲು ಅಥವಾ ನಂತರ ಇಂತಹ ಆಹಾರವನ್ನು ಸೇವಿಸಲು ಹಿತಕರವಾಗಿರುತ್ತದೆ.

ಪ್ರಪಂಚದಾದ್ಯಂತ 2024ರ ರಂಜಾನ್​ನ ಕೆಲವು ನಿರೀಕ್ಷಿತ ದಿನಾಂಕಗಳು ಇಲ್ಲಿವೆ. ಯುಎಇ, ಬಹ್ರೇನ್, ಕುವೈತ್, ಲೆಬನಾನ್, ಓಮನ್, ಪಾಕಿಸ್ತಾನ, ಸೌದಿ ಅರೇಬಿಯಾ, ಯುಕೆ, ಯುಎಸ್, ಟರ್ಕಿ, ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿ ರಂಜಾನ್ ಮಾರ್ಚ್ 11ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಈಜಿಪ್ಟ್ ದೇಶಗಳಲ್ಲಿ ರಂಜಾನ್ ಮಾರ್ಚ್ 12ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಂಜಾನ್ ಸಮಯದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. ಮಾರಣಾಂತಿಕ ಅಥವಾ ದೀರ್ಘಕಾಲದ ಅನಾರೋಗ್ಯ ಇರುವವರು, ಪ್ರಯಾಣ ಮಾಡುವವರು, ವಯಸ್ಸಾದವರು, ಸ್ತನ್ಯಪಾನ ಮಾಡುವವರು, ಮಧುಮೇಹ ಸಮಸ್ಯೆ ಇರುವವರು ಅಥವಾ ಮುಟ್ಟಾದ ಮಹಿಳೆಯರು ರಂಜಾನ್ ಉಪವಾಸ ಆಚರಿಸುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ