Ramadan 2024: ರಂಜಾನ್​ ಉಪವಾಸದ ನಿಯಮಗಳೇನು?

ರಂಜಾನ್ ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ತಿಂಗಳುಗಳಲ್ಲಿ ಒಂದಾಗಿದೆ. ರಂಜಾನ್ ಇಸ್ಲಾಮಿಕ್ ಧರ್ಮದ ನಂಬಿಕೆಯಲ್ಲಿ ಭಾರೀ ಮಹತ್ವ ಹೊಂದಿದೆ. ರಂಜಾನ್ ಮಾಸದಲ್ಲಿ 1 ತಿಂಗಳ ಉಪವಾಸ (ರೋಜಾ), ಪ್ರಾರ್ಥನೆ, ಈದ್ ಅಲ್ ಫಿತರ್ ಮುಖ್ಯವಾಗಿರುತ್ತದೆ. ರಂಜಾನ್ ವೇಳೆ ಮಾಡಲಾಗುವ ಉಪವಾಸದ ನಿಯಮಗಳೇನು? ಇದು ಮುಸ್ಲಿಮರಿಗೆ ಏಕೆ ಮಹತ್ವದ್ದು?

Ramadan 2024: ರಂಜಾನ್​ ಉಪವಾಸದ ನಿಯಮಗಳೇನು?
ರಂಜಾನ್
Follow us
|

Updated on:Mar 07, 2024 | 2:50 PM

ಈ ವರ್ಷ ರಂಜಾನ್ ಮಾರ್ಚ್ 11ರಂದು ಪ್ರಾರಂಭವಾಗಿ ಏಪ್ರಿಲ್ 9ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಮುಸ್ಲಿಮರು ರಂಜಾನ್ (Ramadan 2024) ತಿಂಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರವಾಗಿ ಉಪವಾಸ (Fasting) ಮಾಡುತ್ತಾರೆ. ಸುಹೂರ್ ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಮಾಡಲಾಗುವ ಊಟವಾಗಿದ್ದು, ಇಫ್ತಾರ್ ರಾತ್ರಿಯ ವೇಳೆ ಉಪವಾಸದ ನಂತರ ಮಾಡಲಾಗುವ ಆಚರಣೆಯಾಗಿದೆ.

ರಂಜಾನ್‌ನ ಮುಕ್ತಾಯದಂದು ಈದ್ ಅಲ್-ಫಿತರ್ (ಉಪವಾಸವನ್ನು ಮುರಿಯುವ ಊಟ) ಎಂಬ ಹಬ್ಬ ಮಾಡಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರನ ದರ್ಶನವು ರಂಜಾನ್ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ಆರಂಭವಾಗುವ ಇಡೀ ತಿಂಗಳು ಮುಸ್ಲಿಮರು ಆಧ್ಯಾತ್ಮಿಕತೆ, ಹೆಚ್ಚಿದ ಭಕ್ತಿ ಮತ್ತು ಆರಾಧನೆಯಲ್ಲಿ ಕಳೆಯುತ್ತಾರೆ. ರಂಜಾನ್‌ನಲ್ಲಿ ಈ 29 ಅಥವಾ 30 ದಿನಗಳಲ್ಲಿ ರೋಜಾ ಅಥವಾ ಉಪವಾಸ ಮಾಡಲು ಕೆಲವು ಕಡ್ಡಾಯ ನಿಯಮಗಳು ಮತ್ತು ಸಂಪ್ರದಾಯಗಳಿವೆ.

ಮುಸ್ಲಿಮರ ಉಪವಾಸದ ಸಂಪ್ರದಾಯ:

ರಂಜಾನ್ ಉದ್ದಕ್ಕೂ ಉಪವಾಸವನ್ನು ಇಟ್ಟುಕೊಳ್ಳುವ ವಾರ್ಷಿಕ ಆಚರಣೆಯನ್ನು ಇಸ್ಲಾಂನ 5 ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಉಪವಾಸವು ಇವುಗಳಲ್ಲಿ ನಾಲ್ಕನೇ ಸ್ತಂಭವಾಗಿದೆ. ಉಪವಾಸವನ್ನು ‘ರೋಜಾ’ ಎಂದು ಕರೆಯಲಾಗುತ್ತದೆ. ಇದು ಸ್ವಯಂ ಸಂಯಮವನ್ನು ಅಭ್ಯಾಸ ಮಾಡುವ ಕಲ್ಪನೆಯಿಂದ ನಿಯಂತ್ರಿಸಲ್ಪಡುತ್ತದೆ. ಮುಸ್ಲಿಂ ರೋಜಾವನ್ನು ಆಚರಿಸುವ ವಿಶಿಷ್ಟ ದಿನವು ಸೆಹ್ರಿ ಅಥವಾ ಸುಹೂರ್‌ನೊಂದಿಗೆ ಪ್ರಾರಂಭವಾಗಬೇಕು. ಇದು ಬೆಳಗಿನ ಜಾವ ಅದ್ದೂರಿ ಊಟವನ್ನು ಒಳಗೊಂಡಿರುತ್ತದೆ. ನಂತರ ಇಡೀ ದಿನ ಉಪವಾಸ ಮಾಡಲಾಗುತ್ತದೆ. ಸೂರ್ಯೋದಯವು ಉಪವಾಸದ ಆರಂಭವನ್ನು ಸೂಚಿಸುತ್ತದೆ. ಸೂರ್ಯಾಸ್ತದ ನಂತರ ಇಫ್ತಾರ್ ಅಥವಾ ಔತಣದೊಂದಿಗೆ ಉಪವಾಸವನ್ನು ಮುರಿಯಲಾಗುತ್ತದೆ. ಸಂಜೆಯ ಪ್ರಾರ್ಥನೆಯಲ್ಲಿ ಇಫ್ತಾರಿ ಭಕ್ಷ್ಯಗಳೊಂದಿಗೆ ಉಪವಾಸವನ್ನು ಮುರಿಯುವ ಮೂಲಕ ಮುಸ್ಲಿಮರು ತಮ್ಮ ಆಪ್ತರನ್ನು ಆಹ್ವಾನಿಸಿ ಒಟ್ಟಿಗೇ ಕುಳಿತು ಊಟ ಮಾಡುತ್ತಾರೆ.

ಇದನ್ನೂ ಓದಿ: ಉಪವಾಸದ ಸಮಯದಲ್ಲಿ ಎಳನೀರು ಕುಡಿಯಬಹುದೇ?

ಮುಸ್ಲಿಮರ ಉಪವಾಸದ ನಿಯಮಗಳು:

ಫಜ್ರ್ (ಬೆಳಗ್ಗೆ), ಧುಹ್ರ್ (ಮಧ್ಯಾಹ್ನ), ಅಸ್ರ್ (ಮಧ್ಯಾಹ್ನ), ಮಗ್ರಿಬ್ (ಸಂಜೆ) ಮತ್ತು ಇಶಾ (ರಾತ್ರಿ) ಸಮಯದಲ್ಲಿ ದೈನಂದಿನ 5 ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸುವುದರ ಹೊರತಾಗಿ ರೋಜೆದಾರರು ಉದ್ದೇಶಪೂರ್ವಕವಾಗಿ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಈ ಸಮಯದಲ್ಲಿ ಧೂಮಪಾನದಿಂದ ದೂರವಿರಬೇಕು. ಇಲ್ಲದಿದ್ದರೆ ಉಪವಾಸವು ಅಮಾನ್ಯವಾಗುತ್ತದೆ. ಗೊತ್ತಿಲ್ಲದೆ ಯಾವುದೇ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಅವರ ಉಪವಾಸದ ಮೇಲೆ ಯಾವುದೇ ನೆಗೆಟಿವ್ ಪರಿಣಾಮ ಬೀರುವುದಿಲ್ಲ. ಆದ್ದರಿಂದ ವ್ಯಕ್ತಿಯು ಮರೆತು ಏನನ್ನಾದರೂ ಸೇವಿಸಿದರೆ ತಕ್ಷಣವೇ ಪಶ್ಚಾತ್ತಾಪಪಟ್ಟು ತಮ್ಮ ಉಪವಾಸವನ್ನು ಮುಂದುವರಿಸಬಹುದು.

ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿ, ಹಾಲುಣಿಸುವವರು, ಮಧುಮೇಹಿಗಳು, ವಯಸ್ಸಾದವರು ಮತ್ತು ಋತುಚಕ್ರಕ್ಕೆ ಒಳಗಾದವರು ರಂಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸಬೇಕಾಗಿಲ್ಲ. ಅವರು ರಂಜಾನ್‌ನ ಪ್ರತಿ ದಿನ ಅಥವಾ ಉಪವಾಸ ಮಾಡದ ದಿನ ಬಡವರಿಗೆ ಆಹಾರ ನೀಡುವ ಮೂಲಕ ಮಾಡುವ ದೇವರನ್ನು ಮೆಚ್ಚಿಸಬಹುದು. ಮಹಿಳೆಯು ತನ್ನ ಋತುಚಕ್ರದ ಸಮಯದಲ್ಲಿ ಅಥವಾ ಹೆರಿಗೆಯ ನಂತರದ ರಕ್ತಸ್ರಾವದ ಸಮಯದಲ್ಲಿ ಉಪವಾಸವನ್ನು ಆಚರಿಸಲು ನಿರ್ಬಂಧವನ್ನು ಹೊಂದಿರುವುದಿಲ್ಲ.

ಇದನ್ನೂ ಓದಿ: Ramadan 2024: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್​ ಕೂಟದ ವಿವರ ಇಲ್ಲಿದೆ

ಅಗತ್ಯವಿರುವವರಿಗೆ ದಾನ ನೀಡುವುದನ್ನು ಝಕಾತ್ ಎಂದು ಕರೆಯಲಾಗುತ್ತದೆ. ಇದು ಇಸ್ಲಾಂನಲ್ಲಿ ಕಡ್ಡಾಯ ದಾನವಾಗಿದೆ. ಇದು ಪವಿತ್ರ ರಂಜಾನ್ ತಿಂಗಳಲ್ಲಿ ಮತ್ತೊಂದು ಕಡ್ಡಾಯವಾಗಿದೆ ಮತ್ತು ಝಕಾತ್‌ನಲ್ಲಿ ನೀಡಬೇಕಾದ ಮೊತ್ತವು ಒಬ್ಬರ ಉಳಿತಾಯದ ನಿಗದಿತ ಶೇಕಡಾವಾರು ಮೊತ್ತವಾಗಿದೆ. ಇದನ್ನು ಬಡವರಿಗೆ ನೀಡಬೇಕು.

ರಂಜಾನ್ ಉಪವಾಸವನ್ನು ಆಚರಿಸುವ ಮುಸ್ಲಿಮರಿಗೆ ಬಹಳ ಮುಖ್ಯವಾದ ನಿಯಮವೆಂದರೆ, ಪವಿತ್ರ ತಿಂಗಳಲ್ಲಿ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವಂತಹ ದೈಹಿಕ ಚಟುವಟಿಕೆಯನ್ನು ಮಾಡುವಂತಿಲ್ಲ. ಏಕೆಂದರೆ ಈ 29 ಅಥವಾ 30 ದಿನಗಳಲ್ಲಿ ಲೌಕಿಕ ಸಂತೋಷಗಳನ್ನು ಬಿಡುವ ಮೂಲಕ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉಪವಾಸ ಆಚರಿಸುತ್ತಾರೆ.

ರಂಜಾನ್ ಹಿಂದಿನ ಪಾಪಗಳಿಗೆ ಕ್ಷಮೆಯನ್ನು ಪಡೆಯಲು ಮತ್ತು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡಲು ಸೂಕ್ತ ಸಮಯವಾಗಿದೆ. ಆದ್ದರಿಂದ ಮುಸ್ಲಿಮರು ಹೆಚ್ಚಿದ ಭಕ್ತಿ, ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ರಂಜಾನ್ ಮಾಸವನ್ನು ಆಚರಿಸುತ್ತಾರೆ. ಖುರಾನ್ ಅನ್ನು ಪಠಿಸಲು ಸಮಯವನ್ನು ಮೀಸಲಿಡುತ್ತಾರೆ. ಮತ್ತು ರಂಜಾನ್ ಇತರರ ಬಗ್ಗೆ ಉದಾರತೆ, ಸಹಾನುಭೂತಿಯನ್ನು ಒತ್ತಿಹೇಳುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Tue, 5 March 24

ತಾಜಾ ಸುದ್ದಿ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು