Arthritis : ಸಂಧಿವಾತಕ್ಕೆ ದಿವ್ಯ ಔಷಧಿ ನಿಮ್ಮ ಅಡುಗೆ ಮನೆಯಲ್ಲಿದೆ, ಸಿಂಪಲ್ ಮನೆ ಮದ್ದು
ಇತ್ತೀಚೆಗಿನ ದಿನಗಳಲ್ಲಿ ಎಲ್ಲರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳು ಬದಲಾಗಿವೆ. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಅಲೆಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಅದಲ್ಲದೇ ಇತ್ತೀಚೆಗಿನ ದಿನಗಳಲ್ಲಿ ಸಂಧಿವಾತ ಸಮಸ್ಯೆಯೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ವಯಸ್ಸು ಆದಂತೆ ಕಾಲಿನ ಗಂಟುಗಳಲ್ಲಿ ವಿಪರೀತವಾದ ನೋವು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಮನೆ ಮದ್ದನ್ನು ತಯಾರಿಸಿ ಸೇವಿಸುವ ಮೂಲಕ ಸಂಧಿವಾತ ಸಮಸ್ಯೆಯನ್ನು ಗುಣಪಡಿಸಬಹುದಾಗಿದೆ.
ಕೂತರೆ ಎದ್ದೇಳುವುದಕ್ಕೂ ಆಗುವುದಿಲ್ಲ, ವಿಪರೀತವಾದ ಗಂಟು ನೋವು ಈ ಮಾತನ್ನು ಬಹುತೇಕರ ಬಾಯಲ್ಲಿ ಕೇಳಿರುತ್ತೀರಿ. ವಯಸ್ಸು ನಲವತ್ತೈದು ಸಮೀಪಿಸುತ್ತಿದ್ದಂತೆ ಎರಡು ಕಾಲುಗಳ ಗಂಟಿನ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೆಚ್ಚಿನವರು ಉರಿಯೂತ ಹಾಗೂ ನೋವಿನಿಂದ ನರಳುತ್ತಾರೆ. ವಯಸ್ಸು ಏರುತ್ತಿದ್ದಂತೆ ಈ ಸಮಸ್ಯೆಯ ತೀವ್ರತೆಯೂ ಹೆಚ್ಚಾಗಿ, ನಡೆಯಲು ಆಗದಂತಹ ಪರಿಸ್ಥಿತಿಯು ಉಂಟಾಗುತ್ತದೆ. ದೀರ್ಘಕಾಲದವರೆಗೆ ಕಾಡುವ ಈ ನೋವಿನಿಂದ ಮುಕ್ತಿ ಪಡೆಯುವುದು ಕಷ್ಟವಾದರೂ ವಿಶ್ರಾಂತಿಯೆನ್ನುವುದು ಅಗತ್ಯವಾಗಿಬೇಕು.
ಸಂಧಿವಾತಕ್ಕೆ ಮನೆ ಮದ್ದುಗಳು ಇಲ್ಲಿದೆ
- ಮೆಂತೆಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿನ್ನುತ್ತಿದ್ದರೆ ಸಂಧಿವಾತ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ.
- ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ, ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಪ್ರತಿದಿನ ಎರಡು ಬಾರಿ ಸೇವಿಸುವುದರಿಂದ ಸಂಧಿವಾತ ಹಾಗೂ ಕೀಲು ನೋವು ಶಮನವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಅಮೃತ ಬಳ್ಳಿಯನ್ನು ತೆಗೆದುಕೊಂಡು, 2 ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಅರ್ಧ ಚಮಚ ಗುಗ್ಗುಳವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಸಂಧಿವಾತ ಸಮಸ್ಯೆಗೆ ಉತ್ತಮವಾದ ಮನೆ ಮದ್ದಾಗಿದೆ.
- ಅಮೃತ ಬಳ್ಳಿಯ ರಸವನ್ನು ತೆಗೆದು, ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಸಂಧಿವಾತ, ಕಾಲು ನೋವಿನ ಸಮಸ್ಯೆಯು ಗುಣ ಮುಖವಾಗುತ್ತದೆ.
- ಮೂರು ಚಮಚದಷ್ಟು ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತದಿಂದ ಮುಕ್ತಿ ಹೊಂದಬಹುದು.
- ಪ್ರತಿದಿನವು ಸೇಬನ್ನು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡರೆ ಸಂಧಿವಾತದಿಂದ ದೂರ ಉಳಿಯಬಹುದು.
- ಮಾವಿನ ಹಣ್ಣನ್ನು ಸೇವಿಸುವುದರಿಂದ ಸಂಧಿವಾತ ಸಮಸ್ಯೆಯು ಶಮನವಾಗುತ್ತದೆ.
- ಬೆಳ್ಳುಳ್ಳಿ ಸೇವನೆಯಿಂದ ಸಂಧಿವಾತ ಸಂಬಂಧಿತ ಕಾಯಿಲೆಗಳು ಗುಣಮುಖವಾಗುತ್ತದೆ.
- ದಿನ ನಿತ್ಯದ ಆಹಾರದಲ್ಲಿ ನುಗ್ಗೆಕಾಯಿಯನ್ನು ಹೆಚ್ಚು ಬಳಸುವುದರಿಂದ ಸಂಧಿವಾತ ಸಮಸ್ಯೆಗೆ ರಾಮಬಾಣವಾಗಿದೆ.
- ಸಂಧಿವಾತದಿಂದ ಕಾಲಿನ ಗಂಟಿನ ಭಾಗವು ಊದಿಕೊಂಡಿದ್ದರೆ ಉಪ್ಪಿನ ಶಾಖ ಕೊಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಮೊಸರನ್ನು ತೆಗೆದುಕೊಂಡು, ಅದಕ್ಕೆ ಒಂದು ಟೀ ಚಮಚದಷ್ಟು ಅರಿಶಿನಪುಡಿ ಬೆರೆಸಿ ಸೇವಿಸುವುದರಿಂದ ಸಂಧಿವಾತವು ಕಡಿಮೆಯಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ