ಇಂದಿನ ಬದಲಾದ ಜೀವನ ಶೈಲಿ ಹಾಗೂ ಒತ್ತಡ ಭರಿತ ಜೀವನದಿಂದಾಗಿ ಸೌಂದರ್ಯವೆನ್ನುವುದು ಬೇಗನೇ ಮಾಸಿ ಹೋಗುತ್ತಿದೆ. ವಯಸ್ಸಾದಂತೆ, ಚರ್ಮದಲ್ಲಿ ಕಾಲಜನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತದೆ. ಮುಖದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸಲು ಹಾಲನ್ನು ಈ ರೀತಿಯಾಗಿ ಬಳಸಿದರೆ ನಿಮ್ಮ ಸೌಂದರ್ಯವು ಇಮ್ಮಡಿಯಾಗುವುದು ಖಂಡಿತ.
* ಹಸಿ ಹಾಲು : ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು, ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಹತ್ತು ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆದರೆ ಮುಖದಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳು ಮಾಯಾವಾಗಿ ತ್ವಚೆಯ ಚರ್ಮವು ಹೊಳೆಯುತ್ತದೆ.
* ಆಲೋವೆರಾ ಜೆಲ್ ಹಾಗೂ ಹಸಿ ಹಾಲು : ಒಂದು ಬಟ್ಟಲಿನಲ್ಲಿ ಆಲೋವೆರಾ ಜೆಲ್ ಮತ್ತು ಹಸಿ ಹಾಲನ್ನು ತೆಗೆದುಕೊಂಡು, ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಕುತ್ತಿಗೆ, ಕೈ, ಮುಖಕ್ಕೆ ಹಚ್ಚಿಕೊಂಡು, ಮಸಾಜ್ ಮಾಡಿ. 15 ನಿಮಿಷಗಳ ಕಾಲ ಬಿಟ್ಟು ತ್ವಚೆ ತೊಳೆದರೆ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.
* ಬಾಳೆಹಣ್ಣು ಹಾಗೂ ಹಾಲು : ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಒಂದು ಬಟ್ಟಲಿನಲ್ಲಿ ಹಾಕಿ, ಅದಕ್ಕೆ ಹಸಿ ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ, ಕುತ್ತಿಗೆ ಮತ್ತು ಕೈಗಳಿಗೆ ಅನ್ವಯಿಸಿ, 10-15 ನಿಮಿಷಗಳ ನಂತರ ಮುಖವನ್ನು ತೊಳೆದರೆ ಮುಖದ ಕಾಂತಿಯೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಬಿಸಿಲಲ್ಲಿ ಸೆಖೆ ತಾಳಲಾರದೆ ಐಸ್ ನೀರು ಕುಡಿಯುತ್ತೀರಾ?
* ಹಸಿಹಾಲು ಹಾಗೂ ಜೇನುತುಪ್ಪ : ಒಂದು ಬಟ್ಟಲಿನಲ್ಲಿ ಹಸಿ ಹಾಲು ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿಕೊಳ್ಳಬೇಕು. 10 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ರೇಷ್ಮೆಯಂತಹ ತ್ವಚೆ ನಿಮ್ಮದಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ